HEALTH TIPS

ಇತಿಹಾಸದಲ್ಲೇ ಮೊದಲು: ನೌಕಾಪಡೆ ವಿನ್ಯಾಸಗೊಳಿಸಿದ ಯುದ್ಧನೌಕೆಗಳ ನಿರ್ಮಾಣಕ್ಕೆ ಸ್ಪರ್ಧಾತ್ಮಕ ಬಿಡ್ಡಿಂಗ್; ದೇಶೀಯ ಹಡಗುಕಟ್ಟೆಗಳಿಗೆ ಬೃಹತ್ ಗುತ್ತಿಗೆ

 ನವದೆಹಲಿ: ಭಾರತೀಯ ನೌಕಾಪಡೆಯು ಸ್ವತಂತ್ರವಾಗಿ ವಿನ್ಯಾಸಗೊಳಿಸಿರುವ ಅತ್ಯಾಧುನಿಕ ಯುದ್ಧನೌಕೆಗಳನ್ನು ನಿರ್ಮಿಸಲು ಮುಕ್ತ ಹಾಗೂ ಸ್ಪರ್ಧಾತ್ಮಕ ಹರಾಜು (ಬಿಡ್ಡಿಂಗ್) ಪ್ರಕ್ರಿಯೆಯ ಮೂಲಕ ದೇಶೀಯ ಹಡಗುಕಟ್ಟೆಗಳನ್ನು ಆಯ್ಕೆ ಮಾಡುವ ಐತಿಹಾಸಿಕ ತೀರ್ಮಾನವನ್ನು ರಕ್ಷಣಾ ಸಚಿವಾಲಯ ಕೈಗೊಂಡಿದೆ. 


ಒಟ್ಟು ₹53,866.50 ಕೋಟಿ ವೆಚ್ಚದಲ್ಲಿ ಎಂಟು ಮುಂದಿನ ಪೀಳಿಗೆಯ ಕಾರ್ವೆಟ್‌ಗಳನ್ನು (Next Generation Corvettes) ನಿರ್ಮಿಸಲು ಈ ವಿನೂತನ ಮಾದರಿಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಈ ಸಂಬಂಧ ರಕ್ಷಣಾ ಸಚಿವಾಲಯವು ಪ್ರಮುಖ ಸಾರ್ವಜನಿಕ ವಲಯದ ಉದ್ದಿಮೆಗಳಾದ ‘ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್’ (GRSE) ಮತ್ತು ‘ಗೋವಾ ಶಿಪ್‌ಯಾರ್ಡ್ ಲಿಮಿಟೆಡ್’ (GSL) ಜತೆಗೆ ಅಧಿಕೃತ ಒಪ್ಪಂದಗಳಿಗೆ ಸಹಿ ಹಾಕಿದೆ. ಒಪ್ಪಂದದ ಅನ್ವಯ ಜಿಆರ್‌ಎಸ್‌ಇ ಐದು ಯುದ್ಧನೌಕೆಗಳನ್ನು ಹಾಗೂ ಜಿಎಸ್‌ಎಲ್ ಮೂರು ಯುದ್ಧನೌಕೆಗಳನ್ನು ನಿರ್ಮಿಸಲಿವೆ.

ಸ್ವಾವಲಂಬನೆಗೆ ಬಲ, ಭಾರೀ ಉದ್ಯೋಗಾವಕಾಶ:

ಸಂಪೂರ್ಣ ಸ್ವದೇಶಿ ವಿನ್ಯಾಸ ಹಾಗೂ ಆಂತರಿಕ ಹಡಗು ನಿರ್ಮಾಣ ಸಂಸ್ಥೆಗಳ ನಡುವಿನ ಆರೋಗ್ಯಕರ ಸ್ಪರ್ಧೆಯನ್ನು ಮೇಳೈಸುವ ಈ ಬೃಹತ್ ಯೋಜನೆ ಭಾರತದ ರಕ್ಷಣಾ ವಲಯಕ್ಕೆ ಅಭೂತಪೂರ್ವ ಶಕ್ತಿ ತುಂಬಲಿದೆ. ಮುಂದಿನ ೧೦ ವರ್ಷಗಳ ಅವಧಿಯಲ್ಲಿ ಸುಮಾರು ೫.೩೨ ಕೋಟಿ ಮಾನವ ದಿನಗಳಷ್ಟು (ಮ್ಯಾನ್‌-ಡೇಸ್) ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ.

ಇದರಲ್ಲಿ ೭೨ ಲಕ್ಷ ಮಾನವ ದಿನಗಳ ಉದ್ಯೋಗವು ನೇರವಾಗಿ ಹಡಗುಕಟ್ಟೆಗಳಲ್ಲಿ ಹಾಗೂ ೪.೬೦ ಕೋಟಿ ಮಾನವ ದಿನಗಳ ಉದ್ಯೋಗವು ಪೂರಕ ಕೈಗಾರಿಕೆಗಳಲ್ಲಿ ಸೃಷ್ಟಿಯಾಗಲಿದೆ. ಈ ಐತಿಹಾಸಿಕ ರಕ್ಷಣಾ ಒಪ್ಪಂದವು ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಬೃಹತ್ ಮಟ್ಟದ ಆರ್ಥಿಕ ಉತ್ತೇಜನ ನೀಡಲಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries