HEALTH TIPS

ನೆಹರೂರನ್ನು ಅವಮಾನಿಸುವ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ: ಜೈರಾಮ್ ರಮೇಶ್

ನವದೆಹಲಿ:  ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಅವಮಾನಿಸಲು ಬಿಜೆಪಿ-ಆರ್‌ಎಸ್‌ಎಸ್‌ ನಡೆಸುವ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.


ನೆಹರೂರವರ ಕಲ್ಪನೆಗಳು, ಭಾರತದ ಕಲ್ಪನೆಯ ಭಾಗವಾಗಿವೆ. ಅವರು ಒಳ್ಳೆಯ ಮನುಷ್ಯರಾಗಿದ್ದರು, ರಾಜಕಾರಣದಲ್ಲಿ ಆ ರೀತಿಯ ವ್ಯಕ್ತಿತ್ವ ಹೊಂದಿದ್ದವರು ಅತಿ ಕಡಿಮೆ ಎಂದು ಹೇಳಿದ್ದಾರೆ.

ನೆಹರೂ ಅವರು ಇಲ್ಲದೇ ದೇಶದ ಸಂವಿಧಾನ ರಚನೆಯಾಗುತ್ತಿರಲಿಲ್ಲ. ಅಂಬೇಡ್ಕರ್ ಕೂಡ ಅವರನ್ನು ಒಪ್ಪಿಕೊಂಡಿದ್ದರು. ದೇಶದ ಆರ್ಥಿಕ ಯೋಜನೆಗಳು, ವಿದೇಶಾಂಗ ನೀತಿಗಳಿಗೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ, ನೆಹರೂರವರ ಐತಿಹಾಸಿಕ ಕೊಡುಗೆಗಳನ್ನು ಅಳಿಸುವ ಉದ್ದೇಶದಿಂದ ಅವರ ವಿರುದ್ಧ ದುರುದ್ದೇಶಪೂರಿತ ಪ್ರಚಾರ ಮಾಡಲಾಗುತ್ತಿದೆ. ಜನರು ಸಾಕ್ಷಿಯ ಸಮೇತ ಅದಕ್ಕೆ ತಿರುಗೇಟು ನೀಡಬೇಕು ಎಂದು ಹೇಳಿದ್ದಾರೆ.

ನ.14ರಂದು ಕಾಂಗ್ರೆಸ್‌ನ ವತಿಯಿಂದ ದೇಶದಾದ್ಯಂತ ನೆಹರೂರವರ 137ನೇ ಜನ್ಮದಿನಾಚರಣೆಯನ್ನು ಆಚರಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries