'ಸ್ಪೆಷಲ್ ಇಂಟೆನ್ಸಿವ್ ರಿವಿಷನ್' ಕುರಿತು ಚರ್ಚೆ; ಬಿಜೆಪಿ ನಾಯಕ ಎಂ.ಟಿ. ರಮೇಶ್ ಅವರಿಂದ ಉದ್ಘಾಟನೆ
ಕಾಸರಗೋಡು: 'ಸೇವ್ ಡೆಮಾಕ್ರಸಿ ಫೋರಂ' ಆಶ್ರಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ—'ಸ್ಪೆಷಲ್ ಇಂಟೆನ್ಸಿವ್ ರಿವಿಷನ್' (SIR) ಕುರಿತ ವಿಚಾರಸಂಕಿರಣವು ನವೆಂಬರ್ 2ರಂದು ಮಧ್ಯಾಹ್ನ 3 ಗಂಟೆಗೆ ಕಾಸರಗೋಡಿನ ಪುಲಿಕುನ್ನುವಿನಲ್ಲಿರುವ ನಗರಸಭಾ ಸಭಾಂಗಣದಲ್ಲಿ ನಡೆಯಲಿದೆ.
ವಿಚಾರಸಂಕಿರಣವನ್ನು ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಎ.ಪಿ. ಅಹಮ್ಮದ್, ಸಾಮಾಜಿಕ ಕಾರ್ಯಕರ್ತರಾದ ವಕೀಲ ವಿ.ಕೆ. ಸಜೀವನ್, ಎಂ.ಎಲ್. ಅಶ್ವಿನಿ, ವಕೀಲ ಹಾಗೂ ಸಾರ್ವಜನಿಕ ಕಾರ್ಯಕರ್ತ ಕೆ. ಕರುಣಾಕರನ್ ನಂಬಿಯಾರ್ ಮತ್ತು ಲೇಖಕ ಹಾಗೂ ನಿವೃತ್ತ ಶಿಕ್ಷಕ ಸುಕುಮಾರನ್ ಪೆರಿಯಾಟ್ಟೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

