ಸೇವಾರೂಪದಲ್ಲಿ ನಿರ್ಮಿಸಿದ ಕೊಠಡಿಗಳ ಹಸ್ತಾಂತರ; ಡಿಸೆಂಬರ್ 4ರಿಂದ 6ರವರೆಗೆ ಪ್ರತಿಷ್ಠಾ ಕಲಶೋತ್ಸವ ಹಾಗೂ ತಿರುವಿಳಕ್ಕ್ ಮಹೋತ್ಸವ
ಬದಿಯಡ್ಕ: ಬದಿಯಡ್ಕದ ಶಬರಿಗಿರಿ ಶ್ರೀ ಅಯ್ಯಪ್ಪ ಮಂದಿರಕ್ಕೆ ಸ್ಥಳೀಯ ಆರ್‌ಸಿಬಿ (RCB) ಕ್ಲಬ್‌ನ ವತಿಯಿಂದ ಸೇವಾರೂಪದಲ್ಲಿ ನಿರ್ಮಿಸಿಕೊಡಲಾದ ಸುಸಜ್ಜಿತ ಸ್ನಾನಗೃಹ ಹಾಗೂ ಶೌಚಾಲಯ ಕೊಠಡಿಗಳ ಹಸ್ತಾಂತರ ಸಮಾರಂಭವು ಭಾನುವಾರ ಸರಳವಾಗಿ ನೆರವೇರಿತು.
ಮಂದಿರದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಈ ಮಹತ್ಕಾರ್ಯವನ್ನು ನೆರವೇರಿಸಿಕೊಟ್ಟ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಶ್ರೀಮಂದಿರದ ಟ್ರಸ್ಟಿಗಳು ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದರು.
ಡಿಸೆಂಬರ್ 4ರಿಂದ ತಿರುವಿಳಕ್ಕ್ ಮಹೋತ್ಸವ: ಇದೇ ವೇಳೆ, ಮುಂಬರುವ ಡಿಸೆಂಬರ್ 4, 5 ಮತ್ತು 6ರಂದು ಶಬರಿಗಿರಿ ಶ್ರೀ ಅಯ್ಯಪ್ಪ ಮಂದಿರದಲ್ಲಿ ಪ್ರತಿಷ್ಠಾ ಕಲಶೋತ್ಸವ ಹಾಗೂ ಶ್ರೀ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ.

.jpg)
