ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ಏಕದಿನ ಪಂದ್ಯಗಳಲ್ಲಿ ಶತಕ: ಕೊಹ್ಲಿಯೇ ಕಿಂಗ್
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ(121ರನ್) ಗಳಿಸಿದ್ದಾರೆ.
ತಮ್ಮ ವೃತ್ತಿ ಬದುಕಿನ 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ಕೊಹ್ಲಿ ಅವರು ಶತಕಗಳ ಪಟ್ಟಿಯಲ್ಲಿ ಹಾಲಿ ಆಟಗಾರರ ಪೈಕಿ ಅಗ್ರಸ್ಥಾನಕ್ಕೇರಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ ಗಳಿಸಿದವರ ಪೈಕಿ ಸಚಿನ್ ತೆಂಡೂಲ್ಕರ್ (49) ಈಗಲೂ ಮುಂದಿದ್ದಾರೆ.
* ಕಡಿಮೆ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.
* ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಎಬಿ ಡಿವಿಲಿಯಸರ್್ ಹಾಗೂ ಕ್ರೀಸ್ ಗೇಲ್ ಸಾಧನೆಯನ್ನು ಮೀರಿ ಆಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
* 200ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯಸರ್್ ಬಿಟ್ಟರೆ ಇಲ್ಲಿ ತನಕ ವಿರಾಟ್ ಕೊಹ್ಲಿ ಮಾತ್ರ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.
ಈ ಪಂದ್ಯಕ್ಕೂ ಮುನ್ನ: 199 ಏಕದಿನ ಪಂದ್ಯಗಳಲ್ಲಿ ಕೊಹ್ಲಿ 55.13ರ ಸರಾಸರಿಯಲ್ಲಿ 8767 ರನ್ ಗಳಿಸಿದ್ದು, ಇದರಲ್ಲಿ 30 ಶತಕ ಹಾಗೂ 45 ಅರ್ಧಶತಕಗಳು ಸೇರಿವೆ.
ಇನ್ನು 112 ರನ್ ಗಳಿಸಿದರೆ ಅತಿ ಕಡಿಮೆ ಇನಿಂಗ್ಸ್ನಲ್ಲಿ 9000 ರನ್ ಗಳಿಸಿದ ವಿಶ್ವದಾಖಲೆ ಬರೆಯಬಹುದಾಗಿದೆ. ಈವರೆಗೆ 200 ಪಂದ್ಯಗಳನ್ನು ಆಡಿರುವ ಬ್ಯಾಟ್ಸಮನ್ಗಳ ರನ್ ಗಳಿಕೆ ಹಾಗೂ ಶತಕಗಳ ಸಂಖ್ಯೆಯನ್ನು ಗಮನಿಸಿದರೆ ಕೊಹ್ಲಿ ಈಗಲೂ ನಂ. 1 ಸ್ಥಾನದಲ್ಲೇ ಇದ್ದಾರೆ.





