ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ಕನ್ನಡಿಗರ ಹೆಮ್ಮೆಯ ಕೋಟೆಯಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ.
ಕುಂಬಳೆ: ಕನ್ನಡಿಗ ದೊರೆ ಶಿವಪ್ಪನಾಯಕ ಕಟ್ಟಿಸಿದ ಕನ್ನಡಿಗರ ಹೆಮ್ಮೆಯ ಬೇಕಲಕೋಟೆಗೆ ಪ್ರತಿದಿನ ನೂರಾರು ಮಂದಿ ಕನ್ನಡಿಗರು ಭೇಟಿ ನೀಡುತ್ತಿದ್ದಾರೆ. ಕನರ್ಾಟಕದಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಕಾಸರಗೋಡಿಗೆ ಭೇಟಿಯಿತ್ತ ಕನರ್ಾಟಕದ ಗಣ್ಯರೆಲ್ಲರೂ ಬೇಕಲಕೋಟೆಗೆ ಭೇಟಿನೀಡುವುದು ವಾಡಿಕೆಯಾಗಿದೆ. ಇಂತಹ ಬೇಕಲಕೋಟೆಯಲ್ಲಿ ಸ್ಥಳದ ಚರಿತ್ರೆ ಬಗ್ಗೆ ಪ್ರವಾಸಿಗರಿಗೆ ಯಾವ ಮಾಹಿತಿಯೂ ದೊರೆಯುತ್ತಿಲ್ಲ. ಇಲ್ಲಿನ ಸೂಚನಾ ಫಲಕಗಳೆಲ್ಲವೂ ಮಲಯಾಳದಲ್ಲಿವೆ. ಇಂಗ್ಲೀಷ್ ಹಿಂದಿಗಳಲ್ಲಿ ಸೂಚನಾ ಫಲಕಗಳಿದ್ದರೂ ಕನ್ನಡದಲ್ಲಿ ಸೂಚನಾ ಫಲಕಗಳಿಲ್ಲ. ಇಲ್ಲಿಗೆ ಇತ್ತೀಚೆಗೆ ಭೇಟಿಯಿತ್ತ ಕನರ್ಾಟಕದ ಮುಖಂಡರೊಬ್ಬರು ಕನ್ನಡದೊರೆ ಕಟ್ಟಿಸಿದ ಬೇಕಲಕೋಟೆಯಲ್ಲಿ, ನೂರಾರು ಮಂದಿ ಕನ್ನಡಿಗರು ಭೇಟಿ ನೀಡುವ ಪ್ರವಾಸಿ ಧಾಮದಲ್ಲಿ ಕನ್ನಡದಲ್ಲಿ ಸೂಚನಾ ಫಲಕಗಳಿಲ್ಲದಿರುವ ಬಗ್ಗೆ ಮಾತನಾಡುತ್ತ "ಕೊಲ್ಲೂರಿನಂತಹ ಕನರ್ಾಟಕದ ದೇವಸ್ಥಾನಗಳಲ್ಲಿ ಕೇರಳದ ಭಕ್ತರಿಗಾಗಿ ಕನ್ನಡದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಬೇಕಲದಲ್ಲಿ ಕನ್ನಡ ಸೂಚನಾ ಫಲಕಗಳು ಯಾಕಿಲ್ಲ? ಇದು ಕೇರಳಿಗರ ಭಾಷಾ ಸಹಿಷ್ಣುತೆಯೆ?" ಎಂದು ಖೇದ ವ್ಯಕ್ತಪಡಿಸಿದ್ದಲ್ಲದೆ ಈ ಬಗ್ಗೆ ಕೇರಳ ಸರಕಾರದ ಗಮನ ಸೆಳೆಯುವಂತೆ ಕನರ್ಾಟಕದ ಸರಕಾರ ಕನ್ನಡ ಸಾಹಿತಿಗಳು ಹಾಗೂ ಸಂಘಟನೆಗಳನ್ನು ಒತ್ತಾಯಿಸುವುದಾಗಿ ಹೇಳಿ ಹೋಗಿದ್ದಾರೆ. ಇನ್ನಾದರೂ ಕೇರಳ ಸರಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಚ್ಯವಸ್ತು ಇಲಾಖೆಗಳು ಎಚ್ಚೆತ್ತುಕೊಂಡು ಬೇಕಲಕೋಟೆಯಲ್ಲಿ ಕನ್ನಡದಲ್ಲಿ ನಾಮಫಲಕ,ಸೂಚನಾಫಲಕಗಳನ್ನು ಅಳವಡಿಸಲಿ ಹಾಗೂ ಕನ್ನಡದಲ್ಲಿ ಮಾಹಿತಿ ಪುಸ್ತಕಗಳನ್ನು ಒದಗಿಸಲಿ ಎಂಬುದು ಕಾಸರಗೋಡಿನ ಕನ್ನಡಿಗರು ಆಗ್ರಹಿಸಿದ್ದಾರೆ.







