HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮಾತೃಶಕ್ತಿ ಜಾಗೃತರಾಗಬೇಕು-ಕೆ.ಪಿ.ಶಶಿಕಲಾ ಟೀಚರ್ ಉಪ್ಪಳ: ಮಕ್ಕಳ ಸವರ್ಾಂಗೀಣ ಅಭಿವೃದ್ದಿ, ಸಂಸ್ಕಾರ ನಿಮರ್ಾಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ಭಾರತೀಯ ಆರ್ಷ ಪರಂಪರೆ ಸಹಸ್ರ ವರ್ಷಗಳಿಂದಲೂ ವಿಶಿಷ್ಟ ದೃಷ್ಟಿಕೋನದ ಮೂಲಕ ಕುಟುಂಬ ವ್ಯವಸ್ಥೆಯನ್ನು ಕಟ್ಟಿ ಬೆಳೆಸಿದೆ. ಆದರೆ ಇಂದು ಆಧುನಿಕ ಜೀವನ ಶೈಲಿ, ಪಾಶ್ಚಿಮಾತ್ಯದ ಅನುಕರಣೆ ಸಹಿತ ವಿವಿಧ ಕಾರಣಗಳಿಂದ ಮಕ್ಕಳು ಹೆತ್ತವರ ಮಧ್ಯೆ ಸಂಬಂಧಗಳಲ್ಲಿ ಏರುಪೇರಾಗುತ್ತಿರುವುದು ಗಂಭೀರ ವಿಷಯವಾಗಿದ್ದು, ಮಕ್ಕಳ ಜೀವನ ರೂಪಿಸುವಲ್ಲಿ ಮಾತೆಯರು ಕ್ರಿಯಾತ್ಮಕತೆಯಿಂದ ಪರಂಪರೆಯನ್ನು ಜಾರಿಗೆತರಬೇಕು ಎಂದು ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಕರೆನೀಡಿದರು. ಮಂಜೇಶ್ವರ ತಾಲೂಕು ಸೇವಾ ಭಾರತಿಯ ಆಶ್ರಯದಲ್ಲಿ ಭಾನುವಾರ ಬಂದ್ಯೋಡು ಸಮೀಪದ ಅಡ್ಕ ಶ್ರೀಭಗವತೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಮಾತೃಶಕ್ತಿ ಸಂಗಮ ಸಮಾರಂಭದ ಸಮಾರೋಪ ಭಾಷಣ ಮಾಡಿ ಅವರು ಮಾತನಾಡಿದರು. ಹಿಂದೂ ಹುಡುಗಿಯರು ಇಂದು ಲವ್ ಜಿಹಾದ್ ನಂತಹ ಷಟ್ಯಂತ್ರದ ಬಲೆಗೆ ಸಿಲುಕಿ ನಲುಗುತ್ತಿರುವುದು ಕಣ್ಣಮುಂದೆಯೇ ಇದ್ದರೂ ಮಾತೆಯರು ಎಚ್ಚೆತ್ತುಕೊಂಡಂತಿಲ್ಲ. ಇದು ಇನ್ನಷ್ಟು ಭೀಕರತೆಗೆ ಕಾರಣವಾಗಲಿದ್ದು, ಮಾತೆಯರು ಬದಲಾವಣೆಗೆ ಪ್ರಯತ್ನಿಸಬೇಕೆಂದು ಅವರು ತಿಳಿಸಿದರು. ಸಂಸ್ಕಾರ, ಆಚಾರ-ವಿಚಾರಗಳ ಬಗೆಗೆ ಮಕ್ಕಳಿಗೆ ಮುಲಾಜಿಲ್ಲದೆ ತಿಳಿಹೇಳುವಲ್ಲಿ ಹೆತ್ತವರು ಕಾರ್ಯಬದ್ದರಾಗಬೇಕೆಂದು ಅವರು ತಿಳಿಸಿದರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಮಾತಾನಂದಮಯೀ ಆಶೀರ್ವಚನ ನೀಡಿದರು. ಕೊಂಡೆವೂರು ಶ್ರೀನಿತ್ಯಾನಂದ ವಿದ್ಯಾಪೀಠದ ಮುಖ್ಯೋಪಾಧ್ಯಾಯಿನಿ ಪ್ರತಿಭಾ ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಬಂದ್ಯೋಡಿನಿಂದ ಅಡ್ಕಕ್ಕೆ ಭವ್ಯ ಶೋಭಾಯಾತ್ರೆ ನಡೆಯಿತು. ಬಳಿಕ ಮಂಗಲ್ಪಾಡಿ ಜಯಲಕ್ಷ್ಮೀ ಕಾರಂತ ದೀಪ ಪ್ರಜ್ವಲನೆಗೊಳಿಸಿ ಮಾತೃಶಕ್ತಿ ಸಂಗಮಕ್ಕೆ ಚಾಲನೆ ನೀಡಿದರು. ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿವಿಧ ವಿಷಯಗಳ ಬಗ್ಗೆ ಕಾಯರ್ಾಗಾರ ನಡೆಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries