ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ಸಮರಸ ಜ್ಞಾನ ಕಣಜ
ಪ್ರಚಲಿತ ವಿದ್ಯಮಾನಗಳು 23/10/2017*
1. *ಭಾರತ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ಐಬಿಎಸ್ಎ ಟ್ರಸ್ಟ್ ಫಂಡ್* ಒಪ್ಪಂದಕ್ಕೆ ಸಹಿ ಮಾಡಿವೆ. ಇದು ಅಭಿವೃದ್ಧಿಶೀಲ ದೇಶಗಳಲ್ಲಿ ಬಡತನ ವಿರುದ್ದದ ಹೋರಾಟಕ್ಕೆ ನೆರವು ನೀಡುವ ಮಹತ್ವದ ಒಪ್ಪಂದವಾಗಿದೆ. ಈ ಮಹತ್ವದ ಒಪ್ಪಂದಕ್ಕೆ ಐಬಿಎಸ್ಎ ತ್ರಿಪಕ್ಷೀಯ ಸಚಿವಾಲಯ ಆಯೋಗದ ಸಭೆಯಲ್ಲಿ ಸಹಿ ಮಾಡಲಾಯಿತು.
2.ಹತ್ತು ವರ್ಷಗಳ ಕಾಯುವಿಕೆಗೆ ಕೊನೆಗೂ ತೆರೆ ಬಿತ್ತು. *ಏಷ್ಯಾ ಕಪ್ ಹಾಕಿ ಟೂನರ್ಿಯ ಪ್ರಶಸ್ತಿ ಎತ್ತಿ ಹಿಡಿದು ಭಾರತ ತಂಡ ಸಂಭ್ರಮಿಸಿತು.* ಇಲ್ಲಿ ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ *ಮನ್ಪ್ರೀತ್ ಸಿಂಗ್* ಬಳಗ ಮೊದಲ ಬಾರಿ ಫೈನಲ್ ಪ್ರವೇಶಿಸಿದ ಮಲೇಷ್ಯಾವನ್ನು ಮಣಿಸಿತು. ಟೂನರ್ಿಯ ಇತಿಹಾಸದಲ್ಲಿ ಭಾರತ ಗಳಿಸಿದ *ಮೂರನೇ* ಪ್ರಶಸ್ತಿ ಇದು. 2007ರಲ್ಲಿ ಚೆನ್ನೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕೊನೆಯದಾಗಿ ಪ್ರಶಸ್ತಿ ಎತ್ತಿ ಹಿಡಿದಿತ್ತು.
3.ನಗರದ ಕನರ್ಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗ ವಿಶ್ವವಿದ್ಯಾನಿಲಯ ಸ್ವಂತ ಕಟ್ಟಡ ಹೊಂದಲಿದ್ದು, ಅದು ವೀಣೆ ಆಕಾರದಲ್ಲಿರುತ್ತದೆ.
4.ಹೋಮ್ಸ್ಟೇಗಳಿಗೆ ಸಂಬಂಧಿಸಿದ *ರಾಷ್ಟ್ರೀಯ ನೀತಿ* ಮತ್ತು ಮಾನ್ಯತೆ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ. ಪ್ರವಾಸೋದ್ಯಮ ಸಚಿವಾಲಯವು ಇದಕ್ಕೆ ಸಂಬಂಧಿಸಿದ ಸಮಾಲೋಚನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಮುಂದಿನ ವಾರವೇ ಈ ನೀತಿ ಪ್ರಕಟವಾಗುವ ನಿರೀಕ್ಷೆ ಇದೆ.
5.ದೇಶದ ವಿಮಾನ ನಿಲ್ದಾಣಗಳು ಮತ್ತು ಅಣು ಸ್ಥಾವರಗಳ ರಕ್ಷಣೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದಾಗಿ *ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)* ಹೇಳಿದೆ.
6.ಭಾನುವಾರ ನಡೆದ ಚುನಾವಣೆಯಲ್ಲಿ ಜಪಾನ್ ಪ್ರಧಾನಿ *ಶಿಂಜೊ ಅಬೆ* ಅವರು ಭರ್ಜರಿ ಜಯದತ್ತ ದಾಪುಗಾಲಿಟ್ಟಿದ್ದಾರೆ. ಈ ಜನಾದೇಶದಿಂದ ಉತ್ತರ ಕೊರಿಯಾ ಮೇಲೆ ಅಬೆ ಅವರು ಕೈಗೊಂಡ ಕಠಿಣ ನಿಧರ್ಾರಗಳು ಹಾಗೂ ದೇಶದ ಆಥರ್ಿಕತೆಗೆ ಶಕ್ತಿ ತುಂಬುವ ಕ್ರಮಗಳಿಗೆ ಮತ್ತಷ್ಟು ಬಲ ಬರಲಿದೆ.
7.ಭಾರತ? ಬಾಂಗ್ಲಾ ದೇಶದಲ್ಲಿ ಇಂಧನ ಕೊರತೆ ನೀಗಿಸಲು ಪೆಟ್ರೋಲಿಯಂ ಉತ್ಪನ್ನಗಳ ದೀರ್ಘಕಾಲದ ಮಾರಾಟ ಮತ್ತು ಖರೀದಿ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. *ಬಾಂಗ್ಲಾದೇಶ ಪೆಟ್ರೋಲಿಯಂ ಕಾಪರ್ೋರೇಶನ್ (ಬಿಪಿಸಿ) ಮತ್ತು ನುಮಾಲಿಘಡ್ ರಿಫೈನರಿ ಲಿಮಿಟೆಡ್ ಕಂಪೆನಿಗಳ* ಅಧಿಕಾರಿಗಳು ಸಚಿವೆ ಸುಷ್ಮಾ ಸ್ವರಾಜ್ ಸಮ್ಮುಖದಲ್ಲಿ ಸಹಿ ಮಾಡಿದ್ದಾರೆ.
8.ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್ಗೆ ಭೇಟಿ ನೀಡಿದ್ದು, ಗುಜರಾತ್ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರಾಂತಗಳಿಗೆ ಜಲ ಸಂಪರ್ಕ ಕಲ್ಪಿಸುವ ದೇಶದ ಮೊದಲ *ರೊ?ರೊ* ಸಮುದ್ರಯಾನ ಸೇವೆಯನ್ನು ರಾಜ್ಯಕ್ಕೆ ಸಮಪರ್ಿಸಿದರು.
9.ಭಾರತದ ಅಗ್ರಗಣ್ಯ ಆಟಗಾರ *ಕಿದಂಬಿ ಶ್ರೀಕಾಂತ್ ಡೆನ್ಮಾಕರ್್ ಓಪನ್ ಸೂಪರ್ ಸರಣಿ* ಪ್ರೀಮಿಯರ್ ಬ್ಯಾಡ್ಮಿಂಟನ್ ಟೂನರ್ಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು .




