ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಇಂದು ಕುತ್ಯಾಳ ದೇವರಿಗೆ `ಸುವರ್ಣ ಯಕ್ಷಗಾನಾರ್ಚನೆ'
ಮಧೂರು: ಗಡಿನಾಡ ಯಕ್ಷಗಾನದ ಸಿರಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಭಾಗವತರು ಅಕ್ಟೋಬರ 25ರಂದು ತನ್ನ ಬದುಕಿನ ಐವತ್ತನೇ ವರ್ಷಕ್ಕೆ ಪಾದಾರ್ಪಣೆಗೈಯ್ಯಲಿದ್ದು ಈ ಹೊನ್ನ ಹೊಸ್ತಿಲಲ್ಲಿ ಯಕ್ಷಗಾನ ಕಲಾಮಾತೆಗೆ ವಿನೂತನ ಕಾಣಿಕೆಯನ್ನು ಅಪರ್ಿಸಲಿದ್ದಾರೆ.
ಬದುಕಿನ ಹೊನ್ನಿನ ಹಬ್ಬದ ಸಂಭ್ರಮದಲ್ಲಿ ಸುಮಾರು ಎರಡು ಶತಮಾನಗಳ ಇತಿಹಾಸವುಳ್ಳ ಕೂಡ್ಲು ಮೇಳದ ಆರಾಧ್ಯದೇವರಾದ ಕುತ್ಯಾಳ ಗೋಪಾಲಕೃಷ್ಣನಿಗೆ `ಸುವರ್ಣ ಯಕ್ಷಗಾನಾರ್ಚನೆ' ನಡೆಸಲಿರುವರು.
ಸುವರ್ಣ ಯಕ್ಷಗಾನಾರ್ಚನೆ ವಿನೂತನ ಕಲ್ಪನೆಯ ಕಾರ್ಯಕ್ರಮವಾಗಿದ್ದು ಬೆಳಗ್ಗೆ ಗಂಟೆ 9ಕ್ಕೆ ಭಾಗವತರ ಭಾಗವತಿಕೆ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ದೀಪಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ ಖ್ಯಾತ ಯಕ್ಷಗಾನ ಪ್ರಸಂಗಕರ್ತ ಸಂಶೋಧಕ ಶ್ರೀಧರ ಡಿ.ಎಸ್. ಅವರ ನಿದರ್ೇಶನ ಹಾಗೂ ನಿರೂಪಣೆಯಲ್ಲಿ ಐವತ್ತು ಕವಿ ರಚಿತ ಐವತ್ತು ಪ್ರಸಂಗಗಳಿಂದ ಆಯ್ದ ಐವತ್ತು ಹಾಡುಗಳನ್ನು ಐವತ್ತು ಮಟ್ಟುಗಳಲ್ಲಿ ರಾಮಕೃಷ್ಣ ಮಯ್ಯರು ಹಾಡಿ ಗೋಪಾಲಕೃಷ್ಣ್ಣನಿಗೆ ಸಮಪರ್ಿಸಲಿದ್ದಾರೆ. ದಾಖಲೀಕರಣವೂ ಜರಗಲಿರುವುದರಿಂದ ಮುಂದಿನ ಪೀಳಿಗೆಗೆ ಅಧ್ಯಯನಾಸಕ್ತರಿಗೆ ಉತ್ತಮ ಆಕರವಾಗಿ ಲಭಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಅಧ್ಯಯನಾಸಕ್ತ ನೂರಾರು ಯಕ್ಷಗಾನ ವಿದ್ವಾಂಸರೂ ಭಾಗವತರ ಹಿತೈಷಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುವರ್ಣ ಯಕ್ಷಗಾನಾರ್ಚನೆಗೆ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆಯಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ ರಾವ್, ಗೋಪಾಲಕೃಷ್ಣ ನಾವಡ ಮಧೂರು, ಮುರಾರಿ ಕಡಂಬಳಿತ್ತಾಯ, ಗಣೇಶ ಭಟ್ ನೆಕ್ಕರೆ ಮೂಲೆ, ಮುರಳಿ ಮಾಧವ ಮಧೂರು ಭಾಗವಹಿಸಲಿದ್ದಾರೆ.
ಅಪರಾಹ್ನ ಗಂಟೆ 1.30ರಿಂದ ತೆಂಕುತಿಟ್ಟಿನ ಹಿರಿಯ ಭಾಗವತರುಗಳಾದ ಬಲಿಪ ನಾರಾಯಣ ಭಾಗವತರು ಹಾಗೂ ಪುತ್ತಿಗೆ ರಘುರಾಮ ಹೊಳ್ಳರ ನೇತೃತ್ವದಲ್ಲಿ ಸುಮಾರು 40ಕ್ಕೂ ಹೆಚ್ಚು ಭಾಗವತರು ಹಾಗೂ ಹಿಮ್ಮೇಳದವರ ಸಮಾಗಮದೊಂದಿಗೆ `ಯಕ್ಷಗಾನಾರ್ಚನೆ' ಜರಗಲಿದೆ.
ಯಕ್ಷಗಾನಾರ್ಚನೆಯನ್ನು ಸುಬ್ರಾಯಹೊಳ್ಳ ಕಾಸರಗೋಡು, ಗುರುರಾಜ ಹೊಳ್ಳ ಬಾಯಾರು, ನಾ.ಕಾರಂತ ಪೆರಾಜೆ, ಸತೀಶ ಅಡಪ ಸಂಕಬೈಲು ನಿರೂಪಿಸಲಿದ್ದು, ಮಯ್ಯರ ಆಪ್ತ ತೆಂಕುತಿಟ್ಟಿನ ಖ್ಯಾತ ಭಾಗವತರೂ ಹಿಮ್ಮೇಳ ಕಲಾವಿದರುಗಳೂ ಆದ ಬಲಿಪನಾರಾಯಣ ಭಾಗವತ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ಕುರಿಯ ಗಣಪತಿ ಶಾಸ್ತ್ರಿ, ದಿನೇಶ ಅಮ್ಮಣ್ಣಾಯ, ಲೀಲಾವತಿ ಬೈಪಡಿತ್ತಾಯ, ಬಲಿಪ ಪ್ರಸಾದ ಭಟ್, ಬಲಿಪ ಶಿವಶಂಕರ ಭಟ್, ಪಟ್ಲ ಸತೀಶ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ, ರವಿಚಂದ್ರ ಕನ್ನಡಿಕಟ್ಟೆ, ಹೊಸಮೂಲೆ ಗಣೇಶ ಭಟ್, ಜಿ.ಕೆ.ನಾವಡ ಬಾಯಾರು, ರಮೇಶ ಭಟ್ ಪುತ್ತೂರು, ಸುಬ್ರಾಯ ಸಂಪಾಜೆ, ಮುರಳಿ ಶಾಸ್ತ್ರಿ ತೆಂಕಬೈಲು, ಗೋಪಲಕೃಷ್ಣ ಮಯ್ಯ ಪೆಲತ್ತಡ್ಕ, ಪುರುಷೋತ್ತಮ ಭಟ್ ನಿಡುವಜೆ, ತಲ್ಪನಾಜೆ ವೆಂಕಟರಮಣ ಭಟ್ ಹಾಗೂ ಚೆಂಡೆ ಮದ್ದಳೆಯಲ್ಲಿ ಹರಿನಾರಾಯಣ ಬೈಪಡಿತ್ತಾಯ, ಲಕ್ಷ್ಮೀಶ ಅಮ್ಮಣ್ಣಾಯ, ದೇಲಂತ ಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯ, ಚಂದ್ರ ಶೇಖರ ಭಟ್ ಕೊಂಕಣಾಜೆ, ಗುರುಪ್ರಸಾದ್ ಬೊಳಿಂಜಡ್ಕ, ಚೈತನ್ಯ ಕೃಷ್ಣ ಪದ್ಯಾಣ, ಪ್ರಶಾಂತ ಶೆಟ್ಟಿ ವಗೆನಾಡು, ವಿನಯ ಆಚಾರ್ಯ ಕಡಬ, ಚೇವಾರು ಶಂಕರ ಕಾಮತ್, ಶಿವಪ್ರಸಾದ್ ಭಟ್ ಪುನರೂರು, ಜಗನ್ನಿವಾಸ ರಾವ್ ಪುತ್ತೂರು, ಉದಯ ಕಂಬಾರು, ಅಕ್ಷಯ ವಿಟ್ಲ, ಭಾಸ್ಕರ ಕೋಳ್ಯೂರು, ಗಣೇಶ ಭಟ್ ಬೆಳಾಲು, ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ ಪಂಜಿಗದ್ದೆ, ನಾರಾಯಣ ತುಂಗ ಭಾಗವಹಿಸಲಿದ್ದಾರೆ. ಯಕ್ಷ ಮಿತ್ರರು ಮಧೂರು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಕೂಡ್ಲು, ಯಕ್ಷಾಭಿಮಾನಿ ಕೂಡ್ಲು, ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು, ಯಕ್ಷಾಭಿಮಾನಿಗಳು ಹಾಗೂ ಸಿರಿಬಾಗಿಲು ಭಾಗವತರ ಹಿತೈಷಿಗಳೆಲ್ಲಾ ಕಾರ್ಯಕ್ರಮಕ್ಕೆ ಪೂರ್ಣ ಸಹಕರಿಸಲಿದ್ದಾರೆ.




