ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಶ್ರೀ ಅಯ್ಯಪ್ಪ ಸೇವಾ ಸಮಿತಿ ಸಭೆ
ಬದಿಯಡ್ಕ: ಶ್ರೀ ಅಯ್ಯಪ್ಪ ಸೇವಾ ಸಮಿತಿ ಬದಿಯಡ್ಕ ಇದರ ಆಶ್ರಯದಲ್ಲಿ 34 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಸಮಾಲೋಚನ ಸಭೆ ಬದಿಯಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು.
ನ.8 ಮತ್ತು 9 ರಂದು ಬದಿಯಡ್ಕ ಗಣೇಶ ಮಂದಿರದಲ್ಲಿ ವಿವಿಧ ಸಾಂಸ್ಕೃತಿಕ, ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ತೀಮರ್ಾನಿಸಲಾಯಿತು.
ಸಭೆಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಪಿ.ಜಿ.ಚಂದ್ರಹಾಸ ರೈ ಅಧ್ಯಕ್ಷತೆ ವಹಿಸಿದರು. ಸಮಿತಿ ಪದಾಧಿಕಾರಿಗಳಾದ ತಿರುಪತಿ ಕುಮಾರ್ ಭಟ್, ಬಾಲಕೃಷ್ಣ ಮಣಿಯಾಣಿ, ಭಾಸ್ಕರ ಗುರುಸ್ವಾಮಿ, ಪುಷ್ಪರಾಜ್ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ರಾಮಣ್ಣ ರೈ ಗುರುಸ್ವಾಮಿ, ನಿರಂಜನ ರೈ ಪೆರಡಾಲ, ಕೃಷ್ಣ ಚುಳ್ಳಿಕಾನ, ನವೀನ್ ರೈ, ಗಿರೀಶ್ ರೈ ವಳಮಲೆ, ಚರಣ್ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯದಶರ್ಿ ಗೋಕುಲ್ ಬದಿಯಡ್ಕ ಸ್ವಾಗತಿಸಿದರು. ಗುರುಪ್ರಸಾದ್ ವಂದಿಸಿದರು. ಮುಂದಿನ ಸಭೆ ಅ.29 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.





