ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಶೇಣಿ ಸಂಸ್ಮರಣೆ
ಕುಂಬಳೆ: ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ತಡಂಬೈಲ್ ಸುರತ್ಕಲ್ ಇವರ ಆಶ್ರಯದಲ್ಲಿ 38ನೇ ಶೇಣಿ ಜನ್ಮಶತಮಾನೋತ್ಸವದ ಸರಣಿ ತಾಳಮದ್ದಳೆ, ಶೇಣಿ ಸಂಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ ಕುಂಬಳೆ ಕಣಿಪುರ ದೇವಾಲಯದ ಪರಿಸರದಲ್ಲಿ ಭಾನುವಾರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಗೆ ಭಾಜನರಾದ ಯಕ್ಷ ಕವಿ, ಭಾಗವತ ಶೇಡಿಗುಮ್ಮೆ ವಾಸುದೇವ ಭಟ್ಟರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಕರ್ಣ ಬೇಧನ ಯಕ್ಷಗಾನ ಕೂಟ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿತು. ಕಣಿಪುರ ದೇವಸ್ಥಾನದ ಆಡಳಿತಾಧಿಕಾರಿ ರಮಾನಾಥ ಶೆಟ್ಟಿ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನಿವೃತ್ತ ಬ್ಯಾಂಕು ಅಧಿಕಾರಿ ಎಸ್.ಜಗನ್ನಾಥ ಶೆಟ್ಟಿ ಶೇಣಿ ಸಂಸ್ಮರಣೆ ಮಾಡಿದರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹರಿಕೃಷ್ಣ ಭರಣ್ಯ ಅವರು ಸನ್ಮಾನಿತ ಭಾಗವತ ವಾಸುದೇವ ಭಟ್ಟರ ಬಗ್ಗೆ ಅಭಿನಂದನೆಯ ನುಡಿಗಳನಾಡಿದರು. ಟ್ರಸ್ಟ್ ನ ಸಂಚಾಲಕ, ಕಲಾವಿದ ಪಿ.ವಿ.ರಾವ್ ಸ್ವಾಗತಿಸಿ, ಅಶೋಕ ಕುಂಬಳೆ ವಂದಿಸಿದರು.





