ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಕ್ರೀಡಾ ಸ್ಪಧರ್ೆಯಲ್ಲಿ ಕಂಚಿನ ಪದಕ
ಕುಂಬಳೆ: ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಶಿಕ್ಷಕರಿಗಾಗಿ ನಡೆಸಿದ ಕ್ರೀಡಾ ಸ್ಪಧರ್ೆಯಲ್ಲಿ ಪುತ್ತಿಗೆ ಮುಹಿಮ್ಮತ್ ಹೈಸ್ಕೂಲಿನ ದೈಹಿಕ ಶಿಕ್ಷಕ ಕೆ.ಎಂ. ತೌಸಿಫ್ ಕಂಚಿನ ಪದಕವನ್ನು ಗಳಿಸಿರುತ್ತಾರೆ. ಕಳೆದ ಒಂದು ವರ್ಷಗಳಿಂದ ಇಲಲಿಯ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು 100 ಮೀಟರ್ ಓಟ ಸಹಿತ ವಿವಿಧ ಸ್ಪಧರ್ೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಯ ಪ್ರಸಕ್ತ ಸಾಲಿನ ಏಕೈಕ ಬಹುಮಾನಿತ ದೈಹಿಕ ಶಿಕ್ಷಕರಾಗಿ ತಮ್ಮ ಸಾಧನೆ ಪ್ರದಶರ್ಿಸಿದ್ದು, ಕಂಚಿನ ಪದಕ ಸಹಿತ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವರು. ಇವರ ಸಾಧನೆಗೆ ಮುಹಿಮ್ಮತ್ ಶಾಲಾ ಪ್ರಬಂಧಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.





