ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ರಾಜ್ಯಮಟ್ಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ವಿದ್ಯಾಥರ್ಿಗೆ ಅಭಿನಂದನೆ
ಮುಳ್ಳೇರಿಯ: ರಾಜ್ಯಮಟ್ಟದ ಜೂನಿಯರ್ ವಿಭಾಗ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲಾ ತಂಡದ ಸದಸ್ಯನಾಗಿ ಆಡಿದ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ 10ನೇ ತರಗತಿ ವಿದ್ಯಾಥರ್ಿ ಸೋಮಶೇಖರನಿಗೆ ಮಂಗಳವಾರ ಶಾಲೆಯಲ್ಲಿ ಉತ್ಸಾಹದ ಸ್ವಾಗತ ನೀಡಿ ಅಭಿನಂದಿಸಲಾಯಿತು.
ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಅವರು, ವಿದ್ಯಾಥರ್ಿ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸೋಮಶೇಖರ್ ಮಾಡಿರುವ ಸಾಧನೆ ಇತರರಿಗೆ ಸ್ಪೂತರ್ಿದಾಯಕವಾಗಿದ್ದು, ಪ್ರೇರಣೆ ನೀಡಲಿ. ಜೀವನದಲಲಿ ಯಾವುದಾದರೊಂದು ಕ್ಷೇತ್ರವನ್ನು ಆಯ್ಕೆಮಾಡಿ ಸಮರ್ಪಕ ನಿದರ್ೇಶಕರಿಂದ ಪಡೆವ ತರಬೇತಿ, ಸ್ವ-ಸಾಧನೆಗಳು ಯಶಸ್ವಿಯಾಗಿ ಬದುಕನ್ನು ರೂಪಿಸಿ ಸಾರ್ಥಕಗೊಳಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಕಬ್ಬಡಿ ತಂಡದ ಕೋಚ್ ದೀಕ್ಷಿತ್ ಹಾಗು ತೈಕೊಂಡಂ ಶಿಕ್ಷಕ ಪ್ರೇಮರಾಜ್ ರವರನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕ ಕುಂಷಿರಾಮ ಮಣಿಯಾಣಿ ಉಪಸ್ಥಿತರಿದ್ದು ಶುಭಹಾರೈಸಿದರು. ಶಾಲಾ ದೈಹಿಕ ಶಿಕ್ಷಕ ಡಾ. ಅಶೋಕನ್ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಪದ್ಮನಾಭನ್ ವಂದಿಸಿದರು





