ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಬೆದ್ರಡ್ಕ ದೈವಸ್ಥಾನ ಅಭಿವೃದ್ಧಿ ಸಮಿತಿ ರಚನೆ : ವಿಶೇಷ ಸಭೆ
ಕುಂಬಳೆ: ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ ಶ್ರೀ ದೈವಸ್ಥಾನದ ಅಭಿವೃದ್ಧಿ ಸಮಿತಿಯ ರಚನೆಯ ಸಲುವಾಗಿ ವಿಶೇಷ ಸಭೆಯು ಅ. 28ರಂದು ಶನಿವಾರ ಸಂಜೆ 3ಗಂಟೆಗೆ ನಡೆಯಲಿದೆ. ಶ್ರೀದೈವಸ್ಥಾನದಲ್ಲಿ ಮುಂದೆ ಅಗತ್ಯವಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ತಿತವಾಗಿ ನಡೆಸಲು ಅಭಿವೃದ್ಧಿಸಮಿತಿಯನ್ನು ರಚಿಸುವ ಬಗ್ಗೆ ಕೋಟೆಕುಂಜ, ಬಳ್ಳೂರು, ಸಿರಿಬಾಗಿಲು ಕಣ್ಣೂರು ಎಂಬ ನಾಲ್ಕು ಗ್ರಾಮಸ್ತರ ಹಾಗೂ ಊರ ಧಮರ್ಾಭಿಮಾನಿ ಬಂಧುಗಳ ವಿಶೇಷ ಸಭೆಯನ್ನು ಆಯೋಜಿಸಲಾಗಿದೆ. ಈ ಸಮಾಲೋಚನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧಮರ್ಾಭಿಮಾನಿ ಬಂಧುಗಳು ಹಾಜರಿದ್ದು ಸಹಕರಿಸಬೇಕೆಂದು ಶ್ರೀದೈವಸ್ಥಾನದ ಆಡಳಿತ ಮೊಕ್ತೇಸರ ಕೋಟೆಕುಂಜ ಮಂಜುನಾಥ ರೈ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




