HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸುನಾದ: ವಾಷರ್ಿಕೋತ್ಸವ ಬದಿಯಡ್ಕ : ಭಕ್ತಿಭಾವದಿಂದ ಶ್ರದ್ಧೆಯಿಟ್ಟು ದೇವರ ಕೀರ್ತನೆಯನ್ನು ಹಾಡುವ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು. ಸಂಗೀತವನ್ನು ಕೇಳಿದವನಿಗೂ ಹೇಳಿದವನಿಗೂ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ. ನಿತ್ಯ ಸಂಗೀತ ಶ್ರವಣದಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ಮೊಕ್ತೇಸರರಾದ ಆನೆಮಜಲು ವಿಷ್ಣುಭಟ್ ಅಭಿಪ್ರಾಯಪಟ್ಟರು. ಅವರು ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಭಾಭವನದಲ್ಲಿ `ಸುನಾದ' ಸಂಗೀತ ಕಲಾಶಾಲೆಯ ವಾಷರ್ಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಂಗೀತದ ಮೂಲಕ ದೇವರ ಆರಾಧನೆಯಿಂದ ಪರಿಸರದಲ್ಲೇ ಉತ್ತಮ ವಾತಾವರಣ ನಿಮರ್ಾಣವಾಗುವುದಲ್ಲದೆ ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದರು. ಶ್ರೀ ಭಾರತೀ ವಿದ್ಯಾಪೀಠದ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಕ್ಕಳನ್ನು ಸಂಗೀತ ಶಾಲೆಗೆ ಸೇರಿಸುವುದು ಅವರ ಬೆಳವಣಿಗೆಗೆ ಪೂರಕವಾಗುತ್ತದೆ. ಮನಸ್ಸಿಗೆ ಏಕಾಗ್ರತೆಯನ್ನು ತಂದುಕೊಡುವ ಶಕ್ತಿ ಸಂಗೀತಕ್ಕಿದೆ. ತನ್ಮೂಲಕ ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಹೆಚ್ಚಿನ ಸಾಧನೆಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ತಲೇಕ ಸುಬ್ರಹ್ಮಣ್ಯ ಭಟ್, ರಾಜಗೋಪಾಲ ಚುಳ್ಳಿಕ್ಕಾನ ಮಾತನಾಡಿದರು. ಗೋಪಾಲಕೃಷ್ಣ ಭಟ್ ಕಬೆಕ್ಕೋಡು, ಸಂಗೀತ ಕಲಾಶಾಲೆಯ ಗುರುಗಳಾದ ವಾಣಿಪ್ರಸಾದ್ ಕಬೆಕ್ಕೋಡು ಉಪಸ್ಥಿತರಿದ್ದರು. ಶ್ಯಾಮ ಪ್ರಸಾದ ಕಬೆಕ್ಕೋಡು ಸ್ವಾಗತಿಸಿ, ರಶ್ಮಿ ಪೆಮರ್ುಖ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಗುರುವಂದನೆ, ಸಂಗೀತ ಶಾಲಾವಿದ್ಯಾಥರ್ಿಗಳಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮವು ಜರಗಿತು. ಪಕ್ಕವಾದ್ಯದಲ್ಲಿ ವಯಲಿನ್ನಲ್ಲಿ ಪ್ರಭಾಕರ ಕುಂಜಾರು, ಕು.ಧನ್ಯಶ್ರೀ ಪುತ್ತೂರು, ಮೃದಂಗದಲ್ಲಿ ವಿ.ಶ್ಯಾಂ ಭಟ್ ಸುಳ್ಯ, ವೆಂಕಟಯಶಸ್ವಿ ಕಬೆಕ್ಕೋಡು, ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು ಸಹಕರಿಸಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries