ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಅ.28. ಮುಳಿಯಾರಿನಲ್ಲಿ 'ಅಥರ್ಾಂತರಂಗ-4' - ತಾಳಮದ್ದಳೆ-ಸನ್ಮಾನ
ಮುಳ್ಳೇರಿಯ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ತಂಡ ಯಕ್ಷಗಾನ ತಾಳಮದ್ದಳೆ ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿದರ್ೇಶನದಲ್ಲಿ ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಸರಣಿ ಅಧ್ಯಯನ ಶಿಬಿರದ ನಾಲ್ಕನೇ ಕಾರ್ಯಕ್ರಮ "ಅಥರ್ಾಂತರಂಗ-4", ತಾಳಮದ್ದಳೆ, ಹಾಗೂ ಕ್ಷೇತ್ರವತಿಯಿಂದ ಹಿರಿಯ ಕಲಾವಿದರಾದ ಬಲಿಪ ನಾರಾಯಣ ಭಾಗವತರು, ಹಾಗೂ ಕೆ.ಗೋವಿಂದ ಭಟ್ ಅವರಿಗೆ ಸನ್ಮಾನ, ಅ. 28 ರಂದು ಶನಿವಾರ ಬೆಳಿಗ್ಗೆ 9.30ರಿಂದ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಆಶ್ರಯದಲ್ಲಿ ಜರಗಲಿದೆ.
ಹಿರಿಯ ಅರ್ಥಧಾರಿ ಸಾಹಿತಿ ಡಾ. ರಮಾನಂದ ಬನಾರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ "ಅಥರ್ಾಂತರಂಗ-4" ಕಾರ್ಯಕ್ರಮವನ್ನು ಮುಳಿಯಾರು ಕ್ಷೇತ್ರದ ಆಡಳಿತ ಮೊಕ್ತೇಸರ ಸುಬ್ರಾಯ ಬಳ್ಳುಳ್ಳಾಯ ಉದ್ಘಾಟಿಸುವರು. ಕಾರ್ಯಕ್ರಮಕ್ಕೆ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್, ಪೆರಡಂಜಿ ಗೋಪಾಲಕéೃಷ್ಣ ಭಟ್, ಕಲಾವಿದ ಎ.ಜೆ.ನಾಯರ್, ಪತ್ರಕರ್ತ ಹವ್ಯಾಸಿ ಅರ್ಥಧಾರಿ ಪುರುಷೋತ್ತಮ ಭಟ್, ಜಯರಾಮ ದೇವಸ್ಯ, ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.
ಅಥರ್ಾಂತರಂಗ ಮೂರು ಗೋಷ್ಠಿಗಳನ್ನು ಒಳ ಗೊಂಡಿದ್ದು, ಪೋಷಕ ಪಾತ್ರಗಳು ಮಿತಿ-ಪೋಷಣೆ, ಪಾತ್ರಗಳ ಭಾವ ಪೋಷಣೆ, ಅನಿಸಿಕೆ ಅವಲೋಕನ ಒಳಗೊಂಡಿದೆ. ಹಿಮ್ಮೇಳ ಕಲಾವಿದರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಲಿಪ ಪ್ರಸಾದ ಭಟ್, ಕೃಷ್ಣ ಪ್ರಕಾಶ ಉಳಿತ್ತಾಯ, ಗೋಪಾಲಕೃಷ್ಣ ನಾವಡ ಮಧೂರು, ಉದಯ ಕಂಬಾರು, ಮುರಳೀ ಮಾಧವ ಮಧೂರು ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ರವಿರಾಜ ಪನೆಯಾಲ, ವಿಷ್ಣು ಶರ್ಮ ವಾಟೆಪಡ್ಪು, ಭಾಗವಹಿಸಲಿದ್ದಾರೆ.
ಅಪರಾಹ್ನ 3ರಿಂದ "ಪೌಂಡ್ರಕ ವಧೆ" ತಾಳಮದ್ದಳೆ ಜರಗಲಿದ್ದು, ಹಿಮ್ಮೇಳದಲ್ಲಿ ಬಲಿಪನಾರಾಯಣ ಭಾಗವತರು, ಸಿರಿಬಾಗಿಲು ರಾಮಕೃಷ್ಣ ಮಯ್ಯ, , ಕೃಷ್ಣ ಪ್ರಕಾಶ ಉಳಿತ್ತಾಯ, ಗೋಪಾಲಕೃಷ್ಣ ನಾವಡ ಮಧೂರು ಭಾಗವಹಿಸಲಿದ್ದು ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೊ ಸಂಪಾಜೆ, ಬಂಟ್ವಾಳ ಜಯರಾಮ ಆಚಾರ್ಯ ಭಾಗವಹಿಸಲಿದ್ದಾರೆ.
ಸಂಜೆ 5.30ರಿಂದ ಹಿರಿಯ ಯಕ್ಷಗಾನ ಕಲಾವಿದರಾದ ಬಲಿಪನಾರಾಯಣ ಭಾಗವತ ಹಾಗೂ ಕೆ.ಗೋವಿಂದ ಭಟ್ ಅವರಿಗೆ ಮುಳಿಯಾರು ಕ್ಷೇತ್ರದ ವತಿಯಿಂದ ಸನ್ಮಾನ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರಿ ಉಳಿತ್ತಾಯ ವಿಷ್ಣು ಅಸ್ರ ವಹಿಸುವರು. ಮುಖ್ಯ ಅತಿಥಿಗಳಾಗಿ ಧರ್ಮದಶರ್ಿ ಹರಿಕೃಷ್ಣ ಪುನರೂರು, ಭ್ರಹ್ಮಶ್ರಿ ರವೀಶ ತಂತ್ರಿ ಕುಂಟಾರು, ಪ್ರದೀಪ್ ಕುಮಾರ್ ಕಲ್ಕೂರ, ಕೃಷ್ಣ ಪ್ರಸಾದ್ ಅಡ್ಯಂತಾಯ, ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ, ಶ್ರೀ ವಿಶ್ವನಾಥ ರಾವ್ ಉದ್ಯಮಿ, ಶಶಿಧರ ಶೆಟ್ಟಿ ನಿಟ್ಟೆ ಉದ್ಯಮಿ, ಕೃಷ್ಣಯ್ಯ ಅನಂತಪುರ ಸಾಹಿತಿ, ಉದ್ಯಮಿ ರಾಮ್ ಪ್ರಸಾದ್ ಕಾಸರಗೋಡು, ವೇಣುಗೋಪಾಲ ತತ್ವಮಸಿ ಭಾಗವಹಿಸಲಿದ್ದು, ಶಂಕರನಾರಾಯಣ ಹೊಳ್ಳ ಮುಳಿಯಾರು, ಬೆಳ್ಳಿಗೆ ನಾರಾಯಣ ಮಣಿಯಾಣಿ, ಪತ್ರಕರ್ತ ಪ್ರದೀಪ್ ಕುಮಾರ್ ಬೇಕಲ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸತೀಶ ಅಡಪ ಸಂಕಬೈಲು, ಯೋಗೀಶ ರಾವ್ ಚಿಗುರುಪಾದೆ, ರಘುರಾಮ ಗೋಳಿಯಡ್ಕ ಉಪಸ್ಥಿತರಿರುವರು.





