HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಜೈವ ವೈವಿಧ್ಯ-ರಸಪ್ರಶ್ನೆ ಸ್ಪಧರ್ೆ ಕುಂಬಳೆ: ಭಾರತದಲ್ಲಿ ಅಪೂರ್ವವಾಗಿ ಕಂಡುಬರುವ ಕೇಸರಿ ಕುತ್ತಿಗೆಯ ಹಸಿರು ಪಾರಿವಾಳ ವಿಶಿಷ್ಟ ಹಕ್ಕಿಯಾಗಿದೆ. ಕಾಸರಗೋಡಿನಲ್ಲಿ ಕಳೆದ ನವೆಂಬರ್ 12 ರಂದು ಮೊತ್ತ ಮೊದಲಾಗಿ ಕಿದೂರಿನಿಂದ ಗುರುತಿಸಲಾಗಿತ್ತು. ಈ ದಿನವನ್ನು ಕಿದೂರು ಪಕ್ಷಿ ಪ್ರೇಮಿ ತಂಡವು "ಕಿದೂರು ಬಡರ್ಿಂಗ್ ಫೆಸ್ಟಿವಲ್" ಆಗಿ ಆಚರಿಸುತ್ತಿದೆ. ಆ ಪ್ರಯುಕ್ತ ಜೈವ ವೈವಿಧ್ಯತೆಯ ಬಗ್ಗೆ ರಸಪ್ರಶ್ನೆ ಸ್ಪಧರ್ೆಯೊಂದನ್ನು ಆಯೋಜಿಸಿದೆ. ಹಿರಿಯ ಪ್ರಾಥಮಿಕ, ಹೈಸ್ಕೂಲ್ ಹಾಗೂ ಪ್ಲಸ್ಟು / ಪಿ.ಯು.ಸಿ ವಿಭಾಗದಲ್ಲಿ ಸ್ಪಧರ್ೆಗಳು ನಡೆಯಲಿವೆ. ನವೆಂಬರ್ 5 ರ ಭಾನುವಾರದಂದು ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ 1111 ರೂ., ದ್ವಿತೀಯ 555 ರೂ. ಬಹುಮಾನ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಹಾಗೂ ಹೆಸರು ನೊಂದಾವಣೆಗೆ ವಾಟ್ಸ್ಫ್ ಸಂಖ್ಯೆಗಳು 9961643151= ರಾಜು ಕಿದೂರು ಮತ್ತು 8606709896 ಪ್ರದೀಪ್ ಕಿದೂರು ರವರನ್ನು ಸಂಪಕರ್ಿಸಬಹುದಾಗಿದೆ. ತಂಡದಲ್ಲಿ ಇಬ್ಬರು ಭಾಗವಹಿಸಬಹುದು. ನವೆಂಬರ್ 1 ರ ಮೊದಲು ಹೆಸರು ನೋಂದಾಯಿಸಿ ಭಾಗವಹಿಸುವಿಕೆಯನ್ನು ಖಾತರಿ ಪಡಿಸಬೇಕು ಎಂದು ಸಮಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries