ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ಹೈಜಂಪ್ ತಾರೆಗೆ ಅಭಿನಂದನೆ
ಕುಂಬಳೆ: ಕುಂಬಳೆ ಹೋಲಿ ಫ್ಯಾಮಿಲೆ ಶಾಲೆಯ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಕ್ರೀಡಾಪಟುವೋವರ್ೆ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಶಾಲೆಯಲ್ಲಿ ಸಂತಸದ ವಾತಾವರಣ ಮೂಡಿಸಿದೆ. ಏಳನೇ ತರಗತಿಯ ವಿದ್ಯಾಥರ್ಿನಿ ಅಶ್ಮಿತಾ ಜಿಲ್ಲಾ ಹಂತದ ಸಬ್ ಜೂನಿಯರ್ ಹುಡುಗಿಯರ ಹೈಜಂಪ್ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಪಡೆದ ಶಾಲೆಗೂ ನಾಡಿಗೂ ಕಿಥರ್ಿ ತಂದಿದ್ದಾಳೆ.
ಆರಿಕ್ಕಾಡಿಯ ಪದ್ಮನಾಭ ಹಾಗು ವಿಮಲಾ ದಂಪತಿಗಳ ಪುತ್ರಿಯಾದ ಇವರು 138 ಸೆಂ.ಮೀಟರ್ ಎತ್ತರ ಜಿಗಿತದಲ್ಲಿ ಈ ಸಾಧನೆಗೈಯ್ದಿದ್ದಾಳೆ.
ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಲಾ ಬ್ಯಾಂಡ್ ದಳದ ಮೆರವಣಿಗೆಯೊಂದಿಗೆ ಕ್ರೀಡಾಪಟು ಹಾಗು ರಕ್ಷಕರನ್ನು ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಹಿಲ್ಡಾ ಅಭಿನಂದಿಸಿ ಮಾತನಾಡಿದರು. ಶಾಲಾ ನೌಕರ ಸಂಘದ ಕಾರ್ಯದಶರ್ಿ ಕಾಮರ್ೆಲಿ ಶುಭಾಶಂಸನೆಗೈದರು. ಕ್ರೀಡಾಪಟುಗಳ ತಂಡಗಳ ಸದಸ್ಯರು ವಿಶೇಷ ಉಡುಪು ಧರಿಸಿ ಕಾರ್ಯಕ್ರಮಕ್ಕೆ ಮೆರುಗನ್ನಿತ್ತರು. ಕುಂಬಳೆ ಉಪಜಿಲ್ಲೆಯಿಂದ ರಾಜ್ಯ ತಂಡಕ್ಕೆ ಆಯ್ಕೆಯಾದ ನಾಲ್ವರಲ್ಲಿ ಅಶ್ಮಿತಾ ಒಬ್ಬರಾಗಿದ್ದು, ಕೋಟ್ಟಯಂ ನಲ್ಲಿ ನಡೆಯಲಿರುವ ಕೇರಳ ರಾಜ್ಯಶಾಲಾ ಅತ್ಲೆಟಿಕ್ ಕೂಟದಲ್ಲಿ ಕಾಸರಗೋಡನ್ನು ಪ್ರತಿನಿಧಿಸುವರು.





