ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ಕುಂಬಳೆ ಫ್ರೆಸ್ ಪೋರಂ ಇಂದು ಉದ್ಘಾಟನೆ
ಕುಂಬಳೆ: ಕುಂಬಳೆ ಫ್ರೆಸ್ ಪೋರಂ ಕಚೇರಿಯನ್ನು ಇಂದು (ಭಾನುವಾರ) ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಬೆಳಿಗ್ಗೆ 9ಕ್ಕೆ ಉದ್ಘಾಟಿಸುವರು. ಕುಂಬಳೆ ಪೋಲೀಸ್ ಠಾಣಾ ರಸ್ತೆಯಲ್ಲಿರುವ ಮುಳಿಯಡ್ಕ ಕಾಂಪ್ಲೆಕ್ಸ್ ನಲ್ಲಿ ಕಾಯರ್ಾಲಯ ಕಾಯರ್ಾಚರಿಸಲಿದೆ. ಫ್ರೆಸ್ ಪೋರಂ ಅಧ್ಯಕ್ಷ ಕೆ.ಸುರೇಂದ್ರನ್ ಅಧ್ಯಕ್ಷತೆ ವಹಿಸುವರು. ಶಾಸಕ ಪಿ.ಬಿ ಅಬ್ದುಲ್ ರಝಾಕ್ ಈ ಸಮದರ್ಭ ಪ್ರತಿಭಾ ಪುರಸ್ಕಾರ ಘೋಷಿಸುವರು. ಜೊತೆಗೆ ಇತ್ತೀಚೆಗೆ ವಾಹನ ಅಪಘಾತದಲ್ಲಿ ಮೃತರಾದ ಪತ್ರಕರ್ತ ಮುತ್ತಲಿಬ್ ರವರ ಕುಟುಂಬಕ್ಕೆ ಕುಂಬಳೆ ಫ್ರೆಸ್ ಪೋರಂ ನಿಮರ್ಿಸಿ ಹಸ್ತಾಂತರಿಸಲಿರುವ ನಿವೇಶನದ ದಾಖಲೆ ಪತ್ರಗಳನ್ನು ಸಚಿವರು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವರು. ಪತ್ರಕರ್ತರು, ವಿವಿಧ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು.




