ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ರಾಷ್ಟ್ರೀಯ ಹೆದ್ದಾರಿ ಅಕ್ರಮ ಭೂ ಕಬಳಿಕೆ ತೆರವುಗೊಳಿಸುವ ಕ್ರಮಕ್ಕೆ ಚಾಲನೆ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಮತ್ತು ಬೈಪಾಸ್ಗಳಲ್ಲಿ ಸರಕಾರಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಸರಕಾರಿ ಭೂಮಿ ಕಬಳಿಕೆ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಿ ಕಬಳಿಕೆ ನಡೆಸಿದಲ್ಲಿ ಅದನ್ನು ಅವರಿಂದ ಮರುಸ್ವಾಧೀನ ಮಾಡಲು ಕಠಿಣ ಕ್ರಮ ಆರಂಭಿಸಲಾಗಿದೆ. ಸರಕಾರಿ ಭೂಮಿ ಕಬಳಿಸಿದವರ ವಿರುದ್ಧ ಹೈವೇ ಪ್ರೊಟೆಕ್ಷನ್ ಆ್ಯಕ್ಟ್ ಪ್ರಕಾರ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಸಚಿವ ಜಿ.ಸುಧಾಕರನ್ ಆದೇಶ ನೀಡಿದ್ದಾರೆ.
ಭೂ ಕಬಳಿಕೆ ನಡೆಸಿದವರ ವಿರುದ್ಧ ಮೊದಲು ನೋಟೀಸ್ ಜಾರಿಗೊಳಿಸಬೇಕು. ಆ ಬಳಿಕವಷ್ಟೇ ಭೂ ಮರುಸ್ವಾಧೀನ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರ ಸಹಾಯವನ್ನು ಪಡೆದುಕೊಳ್ಳಬೇಕು. ಭೂ ಕಬಳಿಕೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಸಚಿವರು ನಿದರ್ೇಶನವಿತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಅಭಿವೃದ್ಧಿ ಗೊಳಿಸುವ ಅಂಗವಾಗಿ ಕೆಲವೆಡೆಗಳಲ್ಲಿ ಅಕ್ರಮ ಭೂ ಕಬಳಿಕೆ ಅಡಚಣೆಯಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿಯನ್ನು 45 ಮೀಟರ್ ಆಗಿ ಅಗಲೀಕರಿಸಲು ನಿರ್ಧರಿಸಲಾಗಿದೆ. ಅದಕ್ಕೆ ಹೊಂದಿಕೊಂಡು ಅಗತ್ಯದ ಭೂಮಿ ವಶಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.




