ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವ ಸಮಾರೋಪ
ಮುಳ್ಳೇರಿಯ: ವಿಜ್ಞಾನೋತ್ಸವಗಳ ಪ್ರದರ್ಶನಗಳು ಕೇವಲ ಸ್ಪಧರ್ೆಗೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರ ಅನ್ವೇಷಕ ಮಟ್ಟದಲ್ಲಿರಲಿ. ವಿದ್ಯಾಥರ್ಿಗಳ ಆಸಕ್ತಿಗೆ ಸ್ಪಂದಿಸಿ ಭವ್ಯ ಭವಿಷ್ಯಕ್ಕೆ ದಾರಿ ಮಾಡಿಕೊಡಲಿ ಎಂದು ಜಿಲ್ಲಾ ಪಂಚಾಯಿತಿ ಅ`್ಯಕ್ಷ ಎ.ಜಿ.ಸಿ.ಬಷೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ 2017-18ನೇ ಸಾಲಿನ ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವ, ಗಣಿತ ಶಾಸ್ತ್ರ, ಸಮಾಜ ವಿಜ್ಞಾನ, ಐಟಿ ಮತ್ತು ವೃತ್ತಿ ಪರಿಚಯ ಮೇಳಗಳ ಗುರುವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ.ಎಂ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ ಬಹುಮಾನ ವಿತರಿಸಿದರು. ಬ್ಲಾಕ್ ಪಂಚಾಯಿತಿ ಸದಸ್ಯರಾದ ಸುಂದರ, ಪಂಚಾಯಿತಿ ಸದಸ್ಯರಾದ ವಿನೋದನ್ ನಂಬ್ಯಾರ್, ಅನಸೂಯ ರೈ, ತಸ್ನಿ ಹಮೀದ್, ಸೌದಾಬಿ, ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ, ಪ್ರಾಂಶುಪಾಲ ಶ್ರೀಕೃಷ್ಣ ಭಟ್, ಎಸ್ಎಂಸಿ ಅಧ್ಯಕ್ಷ ಬಿ.ಎ.ಅಬೂಬಕರ್, ಮಾತೃಸಂಘದ ಅಧ್ಯಕ್ಷೆ ಬೀಫಾತಿಮ, ಎ.ಕೆ.ಅಬ್ದುಲ್ ರಹಮಾನ್ ಹಾಜಿ, ರವೀಂದ್ರ ರೈ ಮಲ್ಲಾವರ, ಶಿಕ್ಷಕ ಬಾಬು ಥೋಮಸ್, ನೌಕರ ಸಂಘದ ಕಾರ್ಯದಶರ್ಿ ಯೂಸುಫ್.ಕೆ, ಸಿಡಿಎಸ್ ಅಧ್ಯಕ್ಷೆ ಗೀತಾ ಭಾಗವಹಿಸಿದ್ದರು. ಲಾಂಛನ ತಯಾರಿಸಿದ ಚಂದ್ರನ್ ಅವರನ್ನು ಅಭಿನಂದಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಸ್ವಾಗತಿಸಿ, ಶಿಕ್ಷಕ ಪ್ರಕಾಶ.ಯಂ ನಿರೂಪಿಸಿದರು. ಸಂಚಾಲಕ ಶಾಹುಲ್ ಹಮೀದ್ ವಂದಿಸಿದರು.





