ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 28, 2017
ತಾಳಮದ್ದಳೆ ಕ್ಷೇತ್ರ ಬೆಳವಣಿಗೆಗೆ ಕಮ್ಮಟಗಳು ವಿಸ್ಕೃತವಾಗಿ ಬೆಳೆದುಬರಬೇಕು-ಡಾ.ಬನಾರಿ.
ಅಥರ್ಾಂತರಂಗ 4 ಯಶಸ್ವಿ ಪ್ರಯೋಗ.
ಮುಳ್ಳೇರಿಯ: ಯಕ್ಷಗಾನ ತಾಳಮದ್ದಳೆ ಕ್ಷೇತ್ರ ಸುಮಧುರ ಆಸ್ವಾಧನೆಯ ಪ್ರತ್ಯೇಕ ಅಧ್ಯಯನ ಕಲೆ. ಅನೇಕ ಅಂಶಗಳಿರುವ ತಾಳಮದ್ದಳೆ ಕ್ಷೇತ್ರದ ಬೆಳವಣಿಗೆಗೆ ವಿವಿಧ ಮುಖಗಳ ಚಿಂತನ=ಮಂಥನಗಳಿಂದೊಡಗೂಡಿ ಪ್ರಯೋಗಶೀಲ ಪ್ರಾತ್ಯಕ್ಷಿಕೆ, ಕಮ್ಮಟಗಳು ವಿಸ್ಕೃತವಾಗಿನ ಬೆಳೆದುಬರಬೇಕು ಎಂದು ಹಿರಿಯ ವೈದ್ಯ, ಸಾಹಿತಿ, ತಾಳಮದ್ದಳೆ ಅರ್ಥಧಾರಿ ಡಾ.ರಮಾನಂದ ಬನಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಮಸ್ಕೃತಿಕ ಪ್ರತಿರ್ಷಠಾನದ ನೇತ್ಗೃತ್ವದಲ್ಲಿ ಮುಳಿಯಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಹಕಾರದೊಂದಿಗೆ ಮುಳಿಯಾರು ಶ್ರೀಕ್ಷೇತ್ರ ಪರಿಸರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ "ಅಥರ್ಾಂತರಂಗ 4" ತಾಳಮದ್ದಳೆ ಕ್ಷೇತ್ರದ ಪೋಷಕ ಪಾತ್ರಗಳ ಬಗೆಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ಪ್ರೇಕ್ಷೆಗಳಿಲ್ಲದೆ ಪ್ರೇಕ್ಷಣೀಯವಾಗಿದ್ದರೆ ತಾಳಮದ್ದಳೆಯ ಒಟ್ಟು ಮೌಲ್ಯ ವೃದ್ದಿಗೊಳ್ಳುತ್ತದೆ ಎಂದು ತಿಳಿಸಿದ ಅವರು, ಪೋಷಕ ಪಾತ್ರಗಳಿಗೂ ಪಾತ್ರ ತುಂಬುವಲ್ಲಿ ವಿಶಾಲತೆಗಳಿಗೆ ಅವಕಾಶವಿದೆ ಎಂದು ತಿಳಿಸಿದರು. ಯಕ್ಷಗಾನ ಕಲೆಯ ಎಲ್ಲಾ ಪಾತ್ರಗಳೂ ಅದ್ಬುತವಾಗಿ ತಮ್ಮ ಪಾತ್ರಗಳ ಔಚಿತ್ಯಗಳನ್ನು ಸಾಕ್ಷಾತ್ಕರಿಸುವಲ್ಲಿ ಶಕ್ತವಾದಾಗ ಬೆಳವಣಿಗೆಗೆ ಪೂರಕ ಸ್ಥಿತಿ ನಿಮರ್ಾಣಗೊಳ್ಳುತ್ತದೆ. ಪ್ರಯೋಗಶೀಲ ಪ್ರಾತ್ಯಕ್ಷಿಕೆಗಳು ಈ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಅವರು ತಿಳಿಸಿದರು.
ಸಮಾರಂಭವನ್ನು ಶ್ರೀಕ್ಷೇತ್ರ ಮುಳಿಯಾರಿನ ಆಡಳಿತ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ವಿಭಾಗದ ಅತ್ಯಧಿಕ ಗುರುತಿಸುವಿಕೆಯ ಪೋಷಕ ಪಾತ್ರಗಳಿರುವ ಜಾಂಬವತಿ ಕಲ್ಯಾಣ(ನಾರದ= ಬಲರಾಮ), ಕರ್ಣ ಪರ್ವ(ಸಪರ್ಾಸ್ತ್ರ=ಕರ್ಣ), ರಾಮ ಪಟ್ಟಾಭಿಷೇಕ(ಲಕ್ಷ್ಮಣ=ಕೈಕೆ),ವೀರಮಣಿ ಕಾಳಗ(ರಾಮ=ಈಶ್ವರ),ರಾಮಣ ವಧೆ(ರಾಮ=ಮಾತಲಿ) ಸಂವಾದ ಭಾಗಗಳ ಪ್ರಸ್ತುತಿ ನಡೆಯಿತು. ಎರಡನೇ ಗೋಷ್ಠಿಯಲ್ಲಿ ಜಾಂಬವತಿ ಕಲ್ಯಾಣ(ನಾರದ=ಬಲರಾಮ), ರಾಮ ನಿಯರ್ಾಣ(ರಾಮ=ಕಾಲಪುರುಷ),ಅಭಿಮನ್ಯು ಕಾಳಗ(ಅಭಿಮನ್ಯು=ಧರ್ಮರಾಯ) ಭಾಗಗಳ ಪ್ರಾತ್ಯಕ್ಷಿಕೆ ನಡೆಯಿತು. ಬಳಿಕ ನಡೆದ ಸಂವಾದದಲ್ಲಿ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್, ಅರ್ಥಧಾರಿ ಪೆರಡಂಜಿ ಗೋಪಾಲಕೃಷ್ಣ ಭಟ್, ಸಂಶೋಧಕ ಡಾ.ಉಪ್ಪಂಗಳ ಗೋಪಾಲಕೃಷ್ಣ ಭಟ್, ಕಲಾವಿದ ಎ.ಜೆ.ನಾಯರ್, ಪತ್ರಕರ್ತ ಪುರುಷೋತ್ತಮ ಭಟ್ ಕೆ, ಪ್ರೇಕ್ಷಕ ಜಯರಾಮ ದೇವಸ್ಯ ಪ್ರಾತ್ಯಕ್ಷಿಕೆಗೆ ಸಂಬಂಧಿಸಿ ವಿವಿಧ ವಿಷಯಗಳಲ್ಲಿ ವಿಮಶರ್ೆ ನಡೆಸಿದರು. ರಾಧಾಕೃಷ್ಣ ಕಲ್ಚಾರ್ ಸ್ವಾಗತಿಸಿದರು. ಗುರುರಾಜ್ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು. ಸಿರಿಬಾಗಿಲು ರಾಮಕೃಷ್ಣ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾತ್ಯಕ್ಷಿಕಾ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಲಿಪ ಪ್ರಸಾದ ಭಟ್, ಉದಯ ಕಂಬಾರ್, ಕೃಷ್ಣಪ್ರಕಾಶ ಉಳಿಯತ್ತಾಯ, ಮುರಳೀಮಾಧವ ಮಧೂರು ಹಾಗು ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ರವಿರಾಜ ಪನೆಯಾಲ, ವಿಷ್ಣು ಶರ್ಮ ಓಟೆಪಡ್ಪು ಸಹಕರಿಸಿದರು. ವರ್ಣ ಡಿಜಿಟಲ್ ನೀಚರ್ಾಲು ಕಾರ್ಯಕ್ರಮದ ದಾಖಲೀಕರಣದಲ್ಲಿ ಸಹಕರಿಸಿದರು.
ಬಳಿಕ ಸಮಾರೋಪದ ಭಾಗವಾಗಿ ಫ್ರೌಂಡ್ರಕ ವಧೆ ತಾಳಮದ್ದಳೆ ಪ್ರಸ್ತುತಗೊಂಡಿತು.
ಬೆನ್ನೆಲುಬಾದ ಶ್ರೀಕ್ಷೇತ್ರ ಮುಳಿಯಾರು:
ಅಥರ್ಾಂತರಂಗದ 4ನೇ ಪ್ರಯೋಗದ ಯಶಸ್ವಿಯ ಹಿಂದೆ ಶ್ರೀಕ್ಷೇತ್ರ ಮುಳಿಯಾರಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಶ್ರಮ ಪ್ರಶಂಸಾರ್ಹವಾಗಿತ್ತು. ಆಡಳಿತ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯರು ಮತ್ತು ಅವರ ತಂಡ ಸಂಪೂರ್ಣ ಸಹಕರಿಸಿ ಯಶಸ್ವಿಗೊಳಿಸುವಲ್ಲಿ ಫಲ ನೀಡಿತು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ಮತ್ತು ಸಂಜೆ ಉಪಾಹಾರ ನೀಡಿ ಸಿರಿಬಾಗಿಲು ರಾಮಕೃಷ್ಣ ಮಯ್ಯರಿಗೆ ಬೆನ್ನೆಲುಬಾಗಿ ಸಹಕರಿಸಿದರು.
ಗಣ್ಯರ ದಂಡು:
ಸಮಾರಂಭದ ಯಶಸ್ವಿಗೆ ಸಾಕ್ಷಿಯಾಗಿ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್, ಬಲಿಪ ನಾರಾಯಣ ಭಾಗವತರು, ಗುರುಗಳೂ, ಯಕ್ಷರಂಗದ ದಶಾವತಾರಿ ಸೂರಿಕುಮೇರಿ ಗೋವಿಂದ ಭಟ್, ಹಾಸ್ಯರತ್ನ ಬಂಟ್ವಾಳ ಜಯರಾಮ ಆಚಾರ್ಯ, ಮಹಾಬಲ ಭಟ್ ಕೊಮ್ಮೆ, ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ, ಸಾಹಿತಿ ಕೃಷ್ಣಯ್ಯ ಅನಂತಪುರ,ಜಯಶ್ರೀ ಅನಂತಪುರ, ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ, ಕಲಾ ಪೋಷಕ ವೇಣುಗೋಪಾಲ ತತ್ವಮಸಿ, ಹಿರಿಯ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ, ಯಕ್ಷಗಾನ ದಾಖಲೀಕರಣ ಸರದಾರ ಕೋಂಗೋಟು ಕೆ.ಆರ್.ಕೆ. ಭಟ್, ಉಮಾ ರಾಧಾಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದು ವೈಶಿಷ್ಟ್ಯಪೂರ್ಣ ಸಮಾರಂಭಕ್ಕೆ ಸಾಕ್ಷಿಯಾದರು.





