ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 28, 2017
ನಾಲಂದ ಮಹಾವಿದ್ಯಾಲಯದ ವೈದ್ಯಕೀಯ ಶಿಬಿರ- ಕೈಜೋಡಿಸಿದ ಸುದರ್ಶನ
ಪೆರ್ಲ: ಪೆರ್ಲದ ನಾಲಂದ ಮಹಾವಿದ್ಯಾಲಯ (ವಿವೇಕಾನಂದ ವಿದ್ಯಾವರ್ಧಕ ಸಂಘ . ಪುತ್ತೂರು ಇದರ ಅಂಗ ಸಂಸ್ಥೆ)ದ ಗ್ರಾಮ ವಿಕಾಸ ಯೋಜನೆ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ ಶನಿವಾರ ಸ್ವರ್ಗ ವಿವೇಕಾನಂದ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಬಿರವನ್ನು ಸ್ವರ್ಗ ಶಾಲಾ ವ್ಯವಸ್ಥಾಪಕ ಹೃಷಿಕೇಶ್ ಭಟ್ ಅವರು ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯ, ಆರೋಗ್ಯದ ಬಗೆಗಿನ ಜಾಗೃತಿ ಮೂಡಿಸುವಲ್ಲಿ ಗ್ರಾಮ ವಿಕಾಸ ಯೋಜನೆಯ ಪ್ರಯತ್ನ ಶ್ಲಾಘನೀಯ. ಈ ಮಾದರಿ ಎಲ್ಲೆಡೆಗಳಲ್ಲಿ ಯುವ ಸಮೂಹಕ್ಕೆ ಪ್ರೇರಣೆಯಾಗಿ ಗ್ರಾಮಾಭಿವೃದ್ದಿಗೆ ಪೂರಕ ವಾತಾವರಣ ನಿಮರ್ಿಸಲಿ ಎಂದು ತಿಳಿಸಿದರು.
ನಾಲಂದಾ ವಿದ್ಯಾಲಯದ ಆಡಳಿತ ಅಧಿಕಾರಿ ಶಿವಕುಮಾರ ಮಾಸ್ತರ್ ಅವರು ಸ್ವಾಗತಿಸಿದರು.ಗ್ರಾಮ ವಿಕಾಸ ಯೋಜನೆ ಅಧ್ಯಕ್ಷರಾದ ಕೆ.ವೈ ಸುಬ್ರಹ್ಮಣ್ಯ ಮಾಸ್ತರ್ ಅವರು ಕೆ.ಎಂ.ಸಿ ವೈದ್ಯರಿಗೆ ನೆನಪಿನ ಕಾಣಿಕೆ ಅಪರ್ಿಸಿದರು. ಶ್ಯಾಮಲಾ ಪತ್ತಡ್ಕ ಅವರು ವಂದಿಸಿದರು.
ಶಿಬಿರದಲ್ಲಿ ನೇತ್ರ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಮಕ್ಕಳ ಚಿಕಿತ್ಸೆಗಳು ಲಭ್ಯವಿದ್ದು ಸುಮಾರು ಮುನ್ನೂರಕ್ಕಿಂತೂ ಅಧಿಕ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.
ನಾಲಂದ ಮಹಾವಿದ್ಯಾಲಯದ ಅಧ್ಯಾಪಕರು, ಎನ್.ಎಸ್.ಎಸ್ ಘಟಕದ ವಿದ್ಯಾಥರ್ಿಗಳು, ಸ್ವರ್ಗ ಶಾಲಾ ಅಧ್ಯಾಪಕರು ಹಾಗೂ ಸಿಬಂದಿಗಳ ಜೊತೆಗೆ ಸುದರ್ಶನ ಗ್ರಾಮೀಣ ಅಭಿವೃದ್ಧಿ ಸಮಿತಿಯ ಸದಸ್ಯ ಅಜಿತ್ ಸ್ವರ್ಗ, ಜಗದೀಶ್ ಕುತ್ತಾಜೆ, ಹರೀಶ್ ಪಡ್ರೆ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದರು.
ವಿಕಾಸದ ನವ ದಾಖಲೆಯತ್ತ ಸುದರ್ಶನ:
ಗ್ರಾಮಾಭಿವೃದ್ದಿಯ ಮೂಲಕ ಸಮೃದ್ದ ಸಮಾಜ ನಿಮರ್ಾಣದ ಕನಸುಗಳೊಂದಿಗೆ ಹುಟ್ಟಿಕೊಂಡ ಸುದರ್ಶನ ಯುವ ತಂಡ ಇದೀಗ ಆರೋಗ್ಯ ಕ್ಷೇತ್ರದ ಸೇವಾ ಚಟುವಟಿಕೆಯಲ್ಲಿ ಕೈಜೋಡಿಸುವ ಮೂಲಕ ಮತ್ತೊಂದು ಮೈಲುಗಲ್ಲಿಗೆ ಪಣತೊಟ್ಟಿದೆ. ವಿವೇಕಾನಂದ ವಿದ್ಯಾಸಂಸ್ಥೆಗಳ ಗ್ರಾಮ ವಿಕಾಸ ಯೋಜನೆಯ ಭಾಗವಾಗಿ ಸ್ವರ್ಗ ಪರಿಸರದಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ ಶಿಬಿರದಲ್ಲಿ ಸುದರ್ಶನ ತಂಡದ ದಣಿವರಿಯದ ಸೇವಾ ತತ್ಪರತೆ ಭರವಸೆ ಮೂಡಿಸಿತು.






