ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
ಉಚಿತ ವೈದ್ಯಕೀಯ ಶಿಬಿರ
ಪೆರ್ಲ: ಪೆರ್ಲದ ನಾಲಂದ ಮಹಾವಿದ್ಯಾಲಯ(ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆ)ದ ಆಶ್ರಯದಲ್ಲಿ ಗ್ರಾಮ ವಿಕಾಸ ಯೋಜನೆ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ- ಮಂಗಳೂರು ಇವರಿಂದ ಅ. 28 ರಂದು ಶನಿವಾರ ಬೆಳಿಗ್ಗೆ 9.30 ರಿಂದ 12.30 ರ ವರೆಗೆ ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲೆ ಸ್ವರ್ಗದಲ್ಲಿ ನಡೆಯಲಿದ್ದು ಶಿಬಿರದಲ್ಲಿ ನೇತ್ರ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಮಕ್ಕಳ ಚಿಕಿತ್ಸೆಗಳು ದೊರೆಯಲಿವೆ.
ವೈದ್ಯಕೀಯ ಪರೀಕ್ಷೆ ಉಚಿತವಾಗಿದ್ದು ಲಭ್ಯ ಔಷಧಿಗಳು ಸುದರ್ಶನ ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿ ವತಿಯಿಂದ ಉಚಿತವಾಗಿ ನೀಡಲಾಗುವುದು. ಹೆಚ್ಚಿನ ತಪಾಸಣೆ (ರಕ್ತ, ಕಫ, ಮಲ, ಮೂತ್ರ ಪರೀಕ್ಷೆ ಎಕ್ಸರೇ, ಇಸಿಜಿ ಅಲ್ಟ್ರಾಸೌಂಡ್) ಅಗತ್ಯ ವಾಗಿದ್ದಲ್ಲಿ ಅಥವಾ ಶಸ್ತ್ರಚಿಕಿತ್ಸೆ ಆಗಬೇಕಿದ್ದಲ್ಲಿ ಆಸ್ಪತ್ರೆಗೆ ತೆರಳಬೇಕಾಗಿದ್ದು ಬಡ ರೋಗಿಗಳಿಗೆ ಹಸಿರು ಕಾಡರ್ು ನೀಡಲಾಗುವುದು.
ಶಸ್ತ್ರಚಿಕಿತ್ಸೆಗೆ ಗರಿಷ್ಟ ರೂ 10,000 ಹಾಗೂ ಇತರ ಚಿಕಿತ್ಸೆ ಗೆ ಗರಿಷ್ಟ 5,000 ತನಕ ಆಸ್ಪತ್ರೆ ಸೌಲಭ್ಯಗಳು ಉಚಿತ( ಕಾಡರ್್ ಪಡೆದ ತಿಂಗಳೊಳಗೆ ಆಸ್ಪತ್ರೆಗೆ ಹೋಗಬೇಕಾಗಿದೆ). ಕಣ್ಣಿನ ಪರೀಕ್ಷೆ ಮಾಡಿ ಓದುವ ಕನ್ನಡಕ ಬೇಕಾಗಿದ್ದಲ್ಲಿ ವಿತರಿಸಲಾಗುವುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಪ್ರಯೋಜನ ಪಡೆಯಬೇಕಾಗಿ ವಿನಂತಿಸಲಾಗಿದೆ.ಹೆಚ್ಚಿನ ಮಾಹಿತಿಗೆ 04998-226350, 9447653743(ಕೆ.ವೈ. ಸುಬ್ರಹ್ಮಣ್ಯ ಮಾಸ್ಟರ್), 9447653591(ಅಜಿತ್ ಸ್ವರ್ಗ),9497600133(ಹರಿಶ್ಚಂದ್ರ ಕುತ್ತಾಜೆ) ರ ದೂರವಾಣೆ ಸಂಖ್ಯೆಗೆ ಕರೆ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.





