ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ಮನೆಯನ್ನೇ ಗ್ರಂಥಾಲಯವನ್ನಾಗಿಸಿದ ಚುರುಮುರಿ ವ್ಯಾಪಾರಿ= ಮನೆ ಸಾಮಾಗ್ರಿಗಳಿಗಿಂತ ಹೆಚ್ಚು ಬೆಲೆ ಬಾಳುವ ಪುಸ್ತಕಗಳು ಇವರ ಮನೆಯ ಆಸ್ತಿ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಉದ್ಯಾವರ ಮಾಡ ಕ್ಷೇತ್ರದ ಕಟ್ಟಡದಲ್ಲಿ ಕಾಯರ್ಾಚರಿಸುತ್ತಿರುವ ಚುರುಮುರಿ ವ್ಯಾಪಾರಿಯೊಬ್ಬರು ಕಷ್ಟಪಟ್ಟು ದುಡಿದು ಸಂಪಾದಿಸುತ್ತಿರುವ ಹಣದ ಒಂದು ಪಾಲನ್ನು ಪುಸ್ತಕಗಳನ್ನು ಖರೀದಿಸಿ ಮನೆಯನ್ನೇ ಒಂದು ಗ್ರಂಥಾಲಯವನ್ನಾಗಿಸಿ ಸದ್ದಿಲ್ಲದೆ ಸುದ್ದಿಯಾಗುತಿದ್ದಾರೆ.
ಇವರ ಮನೆಯಲ್ಲಿ ಮನೆ ಬಳಕೆಯ ಸಾಮಾಗ್ರಿಗಳಿಗಿಂತ ಬೆಲೆ ಬಾಳುವ ಆಯ್ದ ಲೇಖಕರ ಪುಸ್ತಕಗಳನ್ನು ಕಾಣಬಹುದಾಗಿದೆ. ಹಾಗೆಂದು ಇದು ಸಾರ್ವಜನಿಕ ಗ್ರ್ರಂಥಾಲಯವಲ್ಲ. ಹವ್ಯಾಸಕ್ಕಾಗಿ ತನ್ನಿಂದ ಯಾರಿಗಾದರೂ ಜ್ಞಾನ ದೊರಕಲಿ ಎಂಬ ಉದ್ದೇಶದಿಂದ ಪುಸ್ತಕವನ್ನು ಸಂಗ್ರಹಿಸಿದ್ದಾರೆ.
ಒಂದರ್ಥದಲ್ಲಿ ಆಸಕ್ತ ಓದುಗರಿಗೆ ಸದಾ ತೆರೆದು ಕೊಂಡಿರುವ ಮನೆಯೆಂದೂ ಹೇಳಬಹುದು. ಕೇವಲ ಎಂಟನೇ ತರಗತಿ ಕಲಿತಿರುವ ಸುರೇಂದ್ರ ಕೋಟ್ಯಾನ್ರಿಗೆ ಬಳಿಕ ದಾರಿದ್ರ್ಯದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿರುವಾಗ ಅಲ್ಲಲ್ಲಿ ನಡೆಯುತಿದ್ದ ಕವಿ ಗೋಷ್ಟಿ, ಸಾಹಿತ್ಯ ಗೋಷ್ಟಿಗಳಲ್ಲಿಗೆ ತೆರಳಿ ಅದರ ಅಭಿರುಚಿಯನ್ನು ಸವಿಯುತ್ತಿರುವ ಮಧ್ಯೆ ಪ್ರಜಾಮತ ಹಾಗೂ ಸುಧಾ ದಂತಹ ಸಾಪ್ತಾಹಿಕ ಪತ್ರಿಕೆಗಳನ್ನು ಓದಿ ಅದರಲ್ಲಿದ್ದ ಕವನ, ಕಥೆ ಸಾಹಿತ್ಯದಿಂದ ಪ್ರೇರಿತನಾಗಿ ಪುಸ್ತಕ ಸಂಗ್ರಹಕ್ಕೆ ಮುಂದಾದರೆಂದು ಸುರೇಂದ್ರ ಕೋಟ್ಯಾನ್ ಪತ್ರಿಕೆಗೆ ತಿಳಿಸಿದರು. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಸುಮಾರು ಏಳು ಲಕ್ಷ ರೂ. ನ ಪುಸ್ತಕಗಳನ್ನು ಖರೀದಿಸಿರುವರಲ್ಲದೆ ಹಲವೆಡೆಗಳಿಂದ ಉಚಿತವಾಗಿ ಲಭಿಸಿದ ಪುಸ್ತಕಗಳನ್ನು ಸಂಗ್ರಹಿಸಿ ಇದೀಗ ಸುಮಾರು 25 ಸಾವಿರಕ್ಕಿಂತಲೂ ಮಿಕ್ಕ ಪುಸ್ತಕಗಳು ಇವರ ಮನೆಯಲ್ಲಿ ಸಂಗ್ರಹಗೊಂಡಿವೆ. ಮಂಜೇಶ್ವರ ಗೋವಿಂದ ಪೈ ಕಾಲೇಜು, ಕಾಸರಗೋಡು ಸರಕಾರಿ ಕಾಲೇಜು, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಹಲವು ಶಾಲಾ ಕಾಲೇಜಿನ ವಿದ್ಯಾಥರ್ಿಗಳು ಇವರ ಮನೆಗೆ ಭೇಟಿ ನೀಡುತ್ತಿರುತ್ತಾರೆ. ಸಂಶೋಧನಾ ವಿದ್ಯಾಥರ್ಿಗಳೂ ಮನೆ ಮುಕ್ತವಾಗಿದೆ. ಹಲವಾರು ಮಂದಿ ಡಾಕ್ಟರೇಟ್ ಮಾಡುವವರು ಇವರ ಮನೆ ಆಗಮಿಸಿ ಉಚಿತವಾಗಿ ಪುಸ್ತಕಗಳನ್ನು ಕೊಂಡೊಯ್ದು ಬಳಿಕ ಹಿಂತಿರುಗಿಸುತ್ತಿರುವುದಾಗಿ ಸುರೇಂದ್ರರವರು ತಿಳಿಸುತ್ತಾರೆ. ತನಗೆ ವಿದ್ಯಾಭ್ಯಾಸವನ್ನು ಗಳಿಸಲು ಸಾಧ್ಯವಾಗದಿದ್ದರೂ ಇತರರಿಗಾದರೂ ನನ್ನಿಂದ ವಿದ್ಯಾಭ್ಯಾಸ ಸಹಾಯ ದೊರಕಲಿ ಎಂಬುದೇ ಇವರ ಆಶಯ. ಇವರ ಗ್ರಂಥಾಲಯದಲ್ಲಿ ಅಭ್ಯಾಸ ಮಾಡಿದ ಅನೇಕ ಯುವಕರು ಸದ್ಯ ಸಕರ್ಾರಿ ನೌಕರಿಯಲ್ಲಿ ಸೇರಿದ್ದಾರೆ. ಹೀಗೆ ನೌಕರಿ ಸೇರಿದದವರು ಅಮೂಲ್ಯವಾಗಿರುವ ಪುಸ್ತಕವೊಂದನ್ನು ಗ್ರಂಥಾಲಯಕ್ಕೆ ತಂದು ಕೊಡುತ್ತಾರೆ ಎಂದು ಸುರೇಂದ್ರ ಹೇಳುತ್ತಾರೆ.
ಓದುವ ಹವ್ಯಾಸ, ಪುಸ್ತಕ ಕೊಳ್ಳುವ ಆಸಕ್ತಿಗಳು ಕುಸಿಯುತ್ತಿರುವ ಭೀತಿಯ ಕೂಗಿನ ಮಧ್ಯೆ ಗಡಿ ಭಾಗದ ಉದ್ಯಾವರದ ಸುರೇಂದ್ರ ಕೋಟ್ಯಾನ್ ಆಶಾದಾಯಕ ಹವ್ಯಾಸದ ಮೂಲಕ ಗಮನ ಸೆಳೆದಿದ್ದಾರೆ.
ಅಂತರಂಗ:
ತಾನು ಕಲಿಯುವ ವಿದ್ಯಾಥರ್ಿಯಾಗಿದ್ದಾಗ ಬಡತನದ ಕಾರಣ ಹೆಚ್ಚಿನ ಓದು ಮತ್ತು ಕಲಿಕೆಗೆ ಸಾಧ್ಯವಾಗಿರಲಿಲ್ಲ. ಅಂತಹ ದಯನೀಯತೆ ಯಾರಿಗೂ ಬಾರದಿರಲಿ ಎಂಬುದು ನನ್ನ ಆಶಯ. ಜೊತೆಗೆ ಶಾಲಾ ಶಿಕ್ಷಣ ತಾನು ಮೊಟಕುಗೊಳಿಸಿದರೂ ಪ್ರಪಂಚದ ಜ್ಞಾನವನ್ನು ಪುಸ್ತಕ ಓದಿನ ಮೂಲಕ ನಾನು ಪಡೆದಿದ್ದು, ಅದನ್ನು ಯುವ ತಲೆಮಾರಿಗೆ ತಿಳಿಸುವ ಯತ್ನವಷ್ಟೆ ನನ್ನ ಗ್ರಂಥಾಲಯದ ಪ್ರಯತ್ನ
ಓದುಗರು ಇಲ್ಲಿ ಕುಳಿತು ಓದಬಹುದು ಅಥವಾ ಮನೆಗೆ ತೆಗೆದುಕೊಂಡು ಹೋಗಿ ಓದಿ ಮರಳಿಸಬಹುದು. ಎಲ್ಲವೂ ಇಲ್ಲಿ ಉಚಿತ. ಮಧ್ಯಾಹ್ನದ ಬಳಿಕ ಚುರುಮುರಿ ವ್ಯಾಪಾರಿಯಾಗಿರುವ ತಾನು ಅಲ್ಲಿಗೂ ಕೆಲವೊಂದು ಪುಸ್ತಕಗಳನ್ನು ಕೊಂಡೊಯ್ದು ಅಲ್ಲಿಯೂ ಗ್ರಾಹಕರಿಗೆ ಓದುವಂತೆ ಪ್ರೇರೇಪಿಸುತ್ತೇನೆ. ದಂಡ ಪಿಂಡಗಳಾಗಿ ತಿರುಗಾಡುವ ಬದಲು ಪುಸ್ತಕ ಓದಿಯಾದರೂ ಅಲ್ಪ ಜ್ಞಾನವನ್ನು ಸಂಪಾದಿಸಲಿ ಎಂಬುದು ನನ್ನ ಆಶಯವಾಗಿದ್ದು, ಓದುವಿಕೆಯಿಂದ ಕೆಟ್ಟ ಚಟಗಳಿಂದ ದೂರ ಇರಬಹುದು ಎಂದು ನನ್ನ ಅನುಭವದ ಮಾತು.
ಸುರೇಂದ್ರ ಕೋಟ್ಯಾನ್.
ಗೃಹವೇ ಗ್ರಂಥಾಲಯವಾಗಿಸಿದ ಸಾಧಕ.






