HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಇಂದು ತುಲಾ ಮಾಸ ಹತ್ತು= ಆರಂಭಗೊಳ್ಳಲಿದೆ ಆರ್ಭಟಗಳೊಂದಿಗೆ ದೈವಗಳ ಕಾರಣಿಕ ಬದಿಯಡ್ಕ: ಶುಕ್ರವಾರ ತುಲಾ ಮಾಸದ ಹತ್ತನೇ ದಿನವಾಗಿದ್ದು, ಜಿಲ್ಲೆಯ ದಕ್ಷಿಣ ಭಾಗ ಸಹಿತ ಕೇರಳದಾತ್ಯಂತ ಇಂದಿನಿಂದ ದೈವಗಳು ಮತ್ತೆ ಅಭಯ ನೀಡುತ್ತಾ ಎದ್ದೇಳಲಿದೆ.ಮಲೆಯಾಳ ದಲ್ಲಿ ಈ ದಿನವನ್ನು ಪತ್ತಾಮುದಯಂ ಎಂದು ಕರೆಯುತ್ತಾರೆ. ಕಳೆದ ಹೆಚ್ಚುಕಮ್ಮಿ ಆರು ತಿಂಗಳುಗಳ ವಿರಾಮದ ಬಳಿಕ ಮತ್ತೆ ದೈವಗಳು, ಧರ್ಮದೈವಗಳು ವಾಡಿಕೆಯಂತೆ ಆಲಯಗಲಲ್ಲಿ ಮತ್ತು ಕುಟುಂಬದ ಮನೆಗಳಲ್ಲಿ ಉತ್ಸವಕ್ಕೆ ಆರಂಭಿಸಲಿವೆ.ಶುಕ್ರವಾರ ಹೆಚ್ಚಿನ ದೈವ ಕ್ಷೇತ್ರ್ರಗಳಲ್ಲಿ ಹುತ್ತರಿ ನೈವೇದ್ಯ ಅರ್ಪಣೆಯ ಮೂಲಕ ಚಾಲನೆ ದೊರಕಲಿವೆ. ಹಿನ್ನೆಲೆ: ಪತ್ತಾಮುದಯಂ ಅಥವಾ ತುಲಾ ಹತ್ತನೇ ದಿನದ ವಿಶೇಷ ಆಚರಣೆ ವಿಷ್ಣುಮೂತರ್ಿ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಅತಿ ಹೆಚ್ಚು ಆಚರಿಸಲ್ಪಡುತ್ತದೆ. ಚೀಮೇನಿ, ಮಡಿಕೈಯ ಪನಕ್ಕೋಲ್ ಎಂಬಲ್ಲಿಯ ಅತಿ ಪ್ರಾಚೀನ ತರವಾಡು ಮನೆ, ಪರವನಡ್ಕದ ತಾನೂರಿನ ಮೇಲತ್ತ್ ನಾಯರ್ ಕುಟುಂಬದಲ್ಲಿ ಶುಕ್ರವಾರದಿಂದ ಪಾರಂಪರಿಕ ಶ್ರದ್ದಾ ಭಕ್ತಿಯಿಂದ ಈ ವರ್ಷದ ಸೇವೆಗಳು ಆರಂಭಗೊಳ್ಳುತ್ತಿದೆ. ಮೊದಲ ದೈವ ಸೇವೆ ನೀಲೇಶ್ವರದ ಅಂಜಾಟ್ಟಂಬಲಂ ಎಂಬಲ್ಲಿ ಶುಕ್ರವಾರ ಆರಂಭಗೊಳ್ಳುತ್ತದೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡು ಮತ್ತು ವಯನಾಡು ಜಿಲ್ಲೆಗಳಲ್ಲಿ ವಿಶೇಷ ದೈವಗಳ ಆಚರಣೆಗಳಿಗೆ ಈ ಮೂಲಕ ಆರಂಭವಾಗಲಿದೆ.ಬಳಿಕ ಎಲ್ಲೆಡೆ ವಾಡಿಕೆಯ ದೈವ ನರ್ತನ ಸೇವೆಗಳು ಮುಂದಿನ ಮೇ ತಿಂಗಳವರೆಗೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries