ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 26, 2017
ಕುಂಬಳೆ ಬಸ್ಸು ನಿಲ್ದಾಣ ಕೆಡವಲು ತೀಮರ್ಾನ
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ 23 ಕಾಮಗಾರಿ ಕೆಲಸಗಳಿಗೆ ಗುತ್ತಿಗೆ ಕೆಲಸಗಳಿಗೆ ಆಡಳಿತ ಸಮಿತಿ ಅಂಗೀಕಾರ ನೀಡಿದೆ. ಶಿಥಿಲಗೊಂಡ ಕುಂಬಳೆ ಬಸ್ಸು ನಿಲ್ದಾಣ ಕಟ್ಟಡವನ್ನು ಕೆಡವಲು ಏಲಂ ಮಾಡಲು ಬುಧವಾರ ನಡೆದ ಸಭೆಯಲ್ಲಿ ತೀಮರ್ಾನಿಸಲಾಯಿತು. ನ.6ರಂದು ಕುಂಬಳೆ ಪಂಚಾಯತಿ ಕಛೇರಿಯಲ್ಲಿ ಏಲಂ ಮಾಡಲಾಗುವುದು ಮತ್ತು ಗ್ರಾಮ ಪಂಚಾಯತಿ ನೇತೃತ್ವದಲ್ಲಿ ನಡೆಯುವ ಎಲ್ಲಾ ಕೆಲಸ ಕಾರ್ಯಗಳು ಅತಿ ವೇಗವಾಗಿ ನಡೆಸಲು ಆಡಳಿತ ಸಮಿತಿ ತೀಮರ್ಾನಿಸಿದೆ.
2017-18ನೇ ವರ್ಷದ ರೀ ಟೆಂಡರ್ ಕೆಲಸಗಳಿಗೆ ಕೊಟೇಶನ್ ಕರೆಯಲು ಈ ಸಂದರ್ಭ ತೀಮರ್ಾನಿಸಲಾಯಿತು. ಪಂಚಾಯತಿನಲ್ಲಿ ಕಾರ್ಯದಶರ್ಿ, ಓವರ್ ಸೀನಿಯರ್ ಮತ್ತು ಎಲ್ಡಿ ಕ್ಲಕರ್್ನ ಕೊರತೆಯಿದ್ದರೂ, ಇನ್ನಿತರ ಉದ್ಯೋಗಸ್ಥರ ಸಹಕಾರದೊಂದಿಗೆ ಎಲ್ಲಾ ಕೆಲಸಗಳನ್ನು ಶೀಘ್ರವಾಗಿ ನಿರ್ವಹಿಸಲು ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಸಹಾಯಕ ಕಾರ್ಯದಶರ್ಿ ವೇಣು ಅವರಿಗೆ ನಿದರ್ೇಶನವನ್ನು ನೀಡಿರುವರು.




