ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 26, 2017
ಡಾ.ಬಿ.ಆರ್.ಅಂಬೇಡ್ಕರ್ ಜ್ಯೋತಿ ಪ್ರಶಸ್ತಿ ಪ್ರದಾನ
ಮಂಜೇಶ್ವರ: ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಾಹಿತ್ಯ ಅಕಾಡೆಮಿ ಕೇರಳ ರಾಜ್ಯ ಸಮಿತಿಯ 21ನೇ ರಾಜ್ಯ ಸಮ್ಮೇಳನವು ಕೋಟ್ಟಯಂ ಜಿಲ್ಲೆಯ ಚೇರ್ತಲ ಕಲಾರಮಣಿ ನಗರದ ಸೈಂಟ್ ಮಿನ್ನಾಲ್ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ ಕಾಸರಗೋಡು ಜಿಲ್ಲೆಯಿಂದ ಪ್ರತಿನಿಧಿಕರಿಸಿದ ಸಾಮಾಜಿಕ ಕಾರ್ಯಕರ್ತ ತುಳಸೀದಾಸ್ ಮಂಜೇಶ್ವರ ಅವರ ಸಮಾಜಸೇವೆಯನ್ನು ಗುರುತಿಸಿ ಡಾ.ಬಿ.ಆರ್.ಅಂಬೇಡ್ಕರ್ ಜ್ಯೋತಿ ಪ್ರಶಸ್ತಿಯನ್ನು ಕೇರಳದ ನಾಗರಿಕ ಪೂರೈಕೆ ಸಚಿವ ತಿಲೋತ್ತಮನ್ ಪ್ರದಾನಗೈದರು. ಮಂಜೇಶ್ವರ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿರುವ ತುಳಸೀದಾಸ್ ಪ್ರಸ್ತುತ ಮಂಗಳೂರಿನಲ್ಲಿ ರೈಲ್ವೇ ಉದ್ಯೋಗಿಯಾಗಿದ್ದು, ಶ್ರೀ ಧೂಮಾವತಿ ದೈವಸ್ಥಾನ ಕುಂಬಳೆಯ ಅಧ್ಯಕ್ಷರಾಗಿಯೂ, ಬ್ರೈಟ್ ಮಂಜೇಶ್ವರದ ಅಧ್ಯಕ್ಷರಾಗಿಯೂ, ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಇದರ ಪ್ರಧಾನ ಕಾರ್ಯದಶರ್ಿಯಾಗಿಯೂ, ಬಾಕುಡ ಸಮಾಜದ ಕೇಂದ್ರೀಯ ಮಂಡಳಿಯ ಪ್ರಧಾನ ಕಾರ್ಯದಶರ್ಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ದೊರೆತ ಡಾ.ಬಿ.ಆರ್.ಅಂಬೇಡ್ಕರ್ ಜ್ಯೋತಿ ಪ್ರಶಸ್ತಿ ಭಾಜನರಾದ ತುಳಸೀದಾಸ್ ಅವರನ್ನು ಮಂಜೇಶ್ವರದ ಜನತೆ ಅಭಿನಂದಿಸಿದೆ.





