ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 26, 2017
ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ಮತ್ತು ಗುರುವಾರ ನಡೆದ ಪ್ರಸ್ತುತ ವರ್ಷದ ವಿಜ್ಞಾನ ಸಹಿತ ವಿವಿಧ ಮೇಳಗಳು ವಿದ್ಯಾಥರ್ಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮುಡಿಬಂದು ಯಶಸ್ವಿಯಾಯಿತು.ಜೊತೆಗೆ ಶಾಲಾ ಸಂಘಟಕರ, ಶಿಕ್ಷಕರ ಅಚ್ಚುಕಟ್ಟಿನ ವ್ಯವಸ್ಥೆ ಗಮನ ಸೆಳೆಯಿತು.
ಆಶ್ಚರ್ಯ ಮೂಡಿಸುವ ಮಾದರಿಗಳು:
ಶಾಲಾ ಪಠ್ಯದಲ್ಲಿರುವ ವೈಜ್ಞಾನಿಕ ಸಮೀಕರಣಗಳನ್ನು ಬಳಸಿ ಕೆಲವು ಶಾಲೆಗಳ ವಿದ್ಯಾಥರ್ಿಗಳು ಪ್ರದಶರ್ಿಸಿದ ಮಾದರಿಗಳು ಅತ್ಯಪೂರ್ವವಾಗಿ ಮೂಡಿಬಂದು ವಿದ್ಯಾಥರ್ಿಗಳ ಕಲಿಕಾ ಮಟ್ಟವನ್ನು ಮೆಚ್ಚುವಂತೆ ಮಾಡಿತು. ಅಣು ರಿಯಾಕ್ಟರ್, ಸಾವಯವ ಮತ್ತು ರಸಗೊಬ್ಬರ ತಯಾರಿ, ಸಲ್ಪ್ಯೂರಿಕ್ ಆಸಿಡ್ ತಯಾರಿ, ರಕ್ತ ಶುದ್ದೀಕರಣ ಮೊದಲಾದ ಮಾದರಿಗಳು ಗಮನ ಸೆಳೆದವು. ಜೊತೆಗೆ ಸ್ವಯಂ ಚಾಲಿತ ಮನೆಯ ಬಾಗಿಲು ತೆರೆಯುವ ಮಾದರಿ, ತಾರಸಿಯ ಮೇಲ್ಚಾವಣಿಯಲ್ಲಿ ನೀರಿನ ಮರು ಬಳಕೆಯೊಂದಿಗೆ ಪೈಪ್ ಬಳಸಿ ಗಿಡಗಳ ನಾಟಿ, ಸೀಮಿತ ಭೂ ಪ್ರದೇಶದಲ್ಲಿ ಪೇಟೆಗಳ ಮನೆಗಳಲ್ಲಿ ಕೃಷಿ, ಕೈತೋಟ ಮಾದರಿಗಳೂ ಮಕ್ಕಳ ಸುಪ್ತ ಜ್ಞಾನವನ್ನು ಎತ್ತಿಹಿಡಿದವು.
ಪ್ರದರ್ಶನ ಸಾಮಥ್ರ್ಯ:
ಮಕ್ಕಳು ಪ್ರದಶರ್ಿಸುವ ಮಾದರಿಗಳಿಗೆ ಹಿರಿಯ ಪ್ರಾಥಮಿಕ, ಹೈಸ್ಕೂಲು ಮತ್ತು ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ ಪ್ರತ್ಯೇಕ ಸ್ಪಧರ್ೆಗಳಿದ್ದು, ನಿಣರ್ಾಯಕರು ವೀಕ್ಷಿಸಿ ಬಹುಮಾನ ನಿಗದಿಗೊಳಿಸುತ್ತಾರೆ. ಈ ಪೈಕಿ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾಥರ್ಿಗಳು ಪ್ರದಶರ್ಿಸಿದ ಮಾದರಿಗಳಿರುವಲ್ಲಿಗೆ ನಿಣರ್ಾಕರು ಆಗಮಿಸುವಾಗ ಅವರು ಪ್ರದಶರ್ಿಸುವ ಪ್ರದಶರ್ಿನಿಗಳ ಸಂಪೂರ್ಣ ವಿವರಗಳನ್ನು ಕೊಡುವಲ್ಲಿ ವಿದ್ಯಾಥರ್ಿಗಳು ಅಲ್ಪ ವಿಫಲರಾದಂತೆ ಕಂಡುಬಂತು. ನಿಣರ್ಾಯಕರ ಕೆಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಭಯಗೊಂಡವರಂತೆ ಕಂಡುಬಂದರು. ಮಿಕ್ಕುಳಿದಂತೆ ಹೈಸ್ಕೂಲು ಮತ್ತು ಹೈಯರ್ ಸೆಕೆಂಡರಿ ವಿಭಾಗದಲ್ಲಿ ವಿದ್ಯಾಥರ್ಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸ್ತುತ್ಯರ್ಹ ವ್ಯವಸ್ಥೆ:
ಕುಂಬಳೆ ಉಪಜಿಲ್ಲೆಯ 117 ಶಾಲೆಗಳಿಂದ ಆಗಮಿಸಿದ 1500 ಕ್ಕಿಂತಲೂ ಮಿಕ್ಕ ವಿದ್ಯಾಥರ್ಿಗಳು, ಶಿಕ್ಷಕರಿಗೆ ಆದೂರು ಶಾಲೆಯಲ್ಲಿ ನಡೆದ ವಿಜ್ಞಾನೋತ್ಸವದ ಅತಿಥೇಯತ್ವ ಮೆಚ್ಚುಗೆ ಪಡೆಯಿತು. ಶಾಲಾ ತರಗತಿ ಕೊಠಡಿಗಳನ್ನು ಪ್ರದರ್ಶನಗಳಿಗೆ ವ್ಯವಸ್ಥೆಗೊಳಿಸಲಾಗಿತ್ತು. ವಿವಿಧ ವಿಭಾಗಗಳಿಗೆ ಪ್ರತ್ಯೇಕ ವ್ಯವಸ್ಥೆ ಗೊಂದಲಗಳಿಗೆ ಕಾರಣವಾಗದಂತೆ ಸಹಕರಿಸಿತು. ಊಟೋಪಚಾರ ವ್ಯವಸ್ಥೆ ಅಚ್ಚುಕಟ್ಟಾಗಿ ಏರ್ಪಡಿಸಲಾಯಿತು. ಶಿಕ್ಷಕ ಶಾಹುಲ್ ಹಮೀದ್ ಮತ್ತು ರಂಗ ಕಲಾವಿದ ರವೀಂದ್ರ ರೈ ಮಲ್ಲಾವರ, ಬ್ಲಾಕ್ ಯೋಜನಾಧಿಕಾರಿ ಕುಂಞಿಕೃಷ್ಣನ್, ಮುಖ್ಯೋಪಾಧ್ಯಾಯರುಗಳ ಫೋರಂ ಸಂಚಾಲಕ ವಿಷ್ಣುಪಾಲ, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮುಹಮ್ಮದ್ ಪಟ್ಟಾಂಗ್, ಎ.ಕೆ.ಅಬ್ದುಲ್ ಖಾದರ್ ಹಾಜಿ, ಹಿರಿಯ ಶಿಕ್ಷಕ ಪ್ರಕಾಶ. ಮಾಯಿಲಂಕೋಟೆ, ಶಿಕ್ಷಕ ಬಾಬು ಥೋಮಸ್, ನೌಕರ ಸಂಘದ ಕಾರ್ಯದಶರ್ಿ ಯೂಸುಫ್.ಕೆ, ಹೈರ್ ಸೆಕೆಂಡರಿ ಪ್ರಾಂಶುಪಾಲ ಶ್ರೀಕೃಷ್ಣ ಭಟ್.ಸಿ.ಎಚ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ.ಎಂ.ಎ,ಮುಖ್ಯೋಪಾಧ್ಯಾಯರ ನಿರಂತರ ಪರಿಶ್ರಮದ ಸೇವೆ ಗಮನ ಸೆಳೆಯಿತು.








