ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ಪ್ರಕೃತಿ ಬಗೆಗಿನ ಸಿನಿಮಾಗಳ ಪ್ರಚಾರಕ್ಕಾಗಿ ಬರಲಿದೆ `ಡಿಡಿ ಪ್ರಕೃತಿ' ಚಾನೆಲ್
ನವದೆಹಲಿ: ಪ್ರಕೃತಿ ಸಂರಕ್ಷಣೆಯ ಬಗೆಗಿನ ಭಾರತೀಯರ ಮತ್ತು ಭಾರತದ ಸಿನಿಮಾಗಳನ್ನು ಪ್ರಚಾರಪಡಿಸುವ ಸಲುವಾಗಿ `ಡಿಡಿ ಪ್ರಕೃತಿ' ಎಂಬ ಹೊಸ ಚಾನೆಲ್ನ್ನು ಹೊರತರಲಾಗುತ್ತಿದೆ. 2018ರ ವೇಳೆಗೆ ಇದು ಆರಂಭಗೊಳ್ಳುವ ನಿರೀಕ್ಷೆ ಇದೆ.
2031ರವರೆಗೆ ಜಾರಿಯಲ್ಲಿರುವ ನ್ಯಾಷನಲ್ ವೈಲ್ಡ್ಲೈಫ್ ಆಕ್ಷನ್ ಪ್ಲಾನ್ ಅವಧಿಯಲ್ಲಿ ಈ ಚಾನೆಲ್ ಕಾರ್ಯದಲ್ಲಿರಲಿದೆ.
ನ್ಯಾಷನಲ್ ವೈಲ್ಡ್ಲೈಫ್ ಆಕ್ಷನ್ ಪ್ಲಾನ್ನನ್ನು ಪರಿಸರ ಸಚಿವಾಲಯ ಈ ತಿಂಗಳು ಅನಾವರಣಗೊಳಿಸಿತ್ತು. ಈ ವೇಳೆ ಪ್ರಕೃತಿಗಾಗಿ ಚಾನೆಲ್ ಆರಂಭಿಸುವ ಶಿಫಾರಸ್ಸು ಮಾಡಲಾಯಿತು. ಇದೀಗ ಪ್ರಸಾರ ಖಾತೆ ಸಚಿವಾಲಯದ ಜೊತೆಗೂಡಿ ಪರಿಸರ ಸಚಿವಾಲಯ `ಡಿಡಿ-ಪ್ರಕೃತಿ' ಚಾನೆಲ್ ಆರಂಭಿಸುತ್ತಿದೆ.
ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಗೆ ಪಯರ್ಾಯವಾಗಿ ಭಾರತೀಯರು, ಭಾರತದಲ್ಲೇ ನಿಮರ್ಿಸಿದ ಪ್ರಕೃತಿಯ ಬಗೆಗಿನ ಸಿನಿಮಾ, ಡಾಕ್ಯುಮೆಂಟರಿ ಇಲ್ಲಿ ಪ್ರಸಾರವಾಗಲಿದೆ.




