ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಅ.28. ಚಿಗುರುಪಾದೆ ದೇವಸ್ಥಾನದಲ್ಲಿ ಶೇಣಿ ಸಂಸ್ಮರಣೆ- ತಾಳಮದ್ದಳೆ
ಪಳ್ಳತ್ತಡ್ಕ ಸುಂದರ ಶೆಟ್ಟಿ ಅವರಿಗೆ ಸಮ್ಮಾನ ಕಾರ್ಯಕ್ರಮ
ಮಂಜೇಶ್ವರ: `ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ವತಿಯಿಂದ ಜರಗುತ್ತಿರುವ ಶೇಣಿ ಶತಮಾನೋತ್ಸವ ಸರಣಿ ಕಾರ್ಯಕ್ರಮ ಅಂಗವಾಗಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ 28ನೇ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ತಾಳಮದ್ದಳೆ `ಗಾಂಡೀವ ನಿಂದನೆ' ಹಾಗೂ ಶೇಣಿ ಸಂಸ್ಮರಣೆ ಮತ್ತು ಹಿರಿಯ ಯಕ್ಷಗಾನ ಕಲಾವಿದ ಸುಂದರ ಶೆಟ್ಟಿ ಪಳ್ಳತ್ತಡ್ಕ ಅವರಿಗೆ ಸಮ್ಮಾನ ಕಾರ್ಯಕ್ರಮವು ಜರಗಲಿದೆ.
ತಾಳಮದ್ದಳೆ ಹಿಮ್ಮೇಳದಲ್ಲಿ ದೇವಿ ಪ್ರಸಾದ ಶೆಟ್ಟಿ ತಲಪಾಡಿ, ಕುದ್ರೆಕೋಡ್ಲು ರಾಮ ಮೂತರ್ಿ, ಉದಯ ಕಂಬಾರ್ ಭಾಗವಹಿಸಲಿದ್ದು ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಸದಾಶಿವ ಆಳ್ವ ತಲಪಾಡಿ, ಪಿ.ವಿ.ರಾವ್, ನಾಗರಾಜ ಪದಕಣ್ಣಾಯ ಮೂಡಂಬೈಲು ಭಾಗವಹಿಸಲಿದ್ದಾರೆ.
ಡಾ|ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸಭಾಧ್ಯಕ್ಷತೆ ವಹಿಸಲಿದ್ದು, ಸತೀಶ ಅಡಪ ಸಂಕಬೈಲು ಶೇಣಿ ಸಂಸ್ಮರಣಾ ಭಾಷಣ ಗೈಯಲಿದ್ದಾರೆ. ಹಿರಿಯ ಕಲಾವಿದ ಸುಂದರ ಶೆಟ್ಟಿ ಪಳ್ಳತ್ತಡ್ಕ ಅವರಿಗೆ ಸಮ್ಮಾನ ಜರಗಲಿದ್ದು, ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣಗೈಯಲಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.




