ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಬದಿಯಡ್ಕದಲ್ಲಿ ಲಯನ್ಸ್ ಕ್ಲಬ್ ಉದ್ಘಾಟನೆ
ಬದಿಯಡ್ಕ: ಹೊಸದಾಗಿ ರೂಪೀಕರಿಸಿದ ಬದಿಯಡ್ಕ ಲಯನ್ಸ್ ಕ್ಲಬ್ಬಿನ ನೂತನ ಶಾಖೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ನ್ಯಾಯವಾದಿ ಡೆನ್ನೀಸ್ ತೋಮಸ್ ಉದ್ಘಾಟಿಸಿದರು.
ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸುಕುಮಾರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಝೋನ್ ಚಯಮರ್ೇನ್ ನ್ಯಾಯವಾದಿ ವಿನೋದ್ಕುಮಾರ್, ಸುರೇಶ್ ಬಾಬು ಕೆ, ಗೋಪಿ, ಟೈಟಸ್ ತೋಮಸ್, ನಿಮಿಷ ನಾಯರ್, ಶಿವರಾಮಕೃಷ್ಣನ್, ಪ್ರಶಾಂತ್ ಜಿ.ನಾಯರ್, ಎಸ್.ರಾಜೀವ್, ಪ್ರಕಾಶ್ ಕೆ, ಬಾಬು ಮಾಕರ್ೋಸ್, ಎ.ಎನ್.ಮನೋಹರನ್ ಮುಂತಾದವರು ಶುಭ ಹಾರೈಸಿದರು. ವಿದ್ಯಾನಗರ ಲಯನ್ಸ್ ಕ್ಲಬಿನ ಆಶ್ರಯದಲ್ಲಿ ಬದಿಯಡ್ಕ ಲಯನ್ಸ್ ಕ್ಲಬ್ ರೂಪಿಕರಣ ಗೊಂಡಿದೆ. ಈ ಸಂದರ್ಭದಲ್ಲಿ ಇಬ್ಬರು ಎಂಡೋಸಲ್ಫಾನ್ ಬಾದಿತರಿಗೆ ವ್ಹೀಲ್ ಚಯರ್ ವಿತರಿಸುವುದರ ಮೂಲಕ ಕ್ಲಬ್ನ ಸಮಾಜಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬದಿಯಡ್ಕ ಲಯನ್ಸ್ ಕೆ.ಪ್ರಕಾಶ್, ನಿವೃತ್ತ ಡಿವೈಎಸ್ಪಿ ಶಿಬು ಜೋನ್, ಪ್ರೊ.ಎ.ಶ್ರೀನಾಥ್, ಎಂ.ನಾರಾಯಣನ್, ಮುಹಮ್ಮದ್ ಅಲಿ ಪೆರ್ಲ, ಬಿಜು ಮ್ಯಾಥ್ಯೂಸ್ ಹಾಗೂ ಪ್ರೊ.ಉದಯಕುಮಾರ್ ವಿವಿಧ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.





