ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಕುಬಣೂರು ಶ್ರೀಧರ ರಾವ್ ಸ್ಮರಣೆ
ಕುಂಬಳೆ: ಖ್ಯಾತ ಯಕ್ಷಗಾನ ಭಾಗವತರಾಗಿದ್ದ ದಿ.ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣಾ ಕಾರ್ಯಕ್ರಮ ಹಾಗೂ ಯಕ್ಷಗಾನ ತಾಳಮದ್ದಳೆಯು ಅ.29ರಂದು ಅಪರಾಹ್ನ 2ಗಂಟೆಗೆ ಕುಬಣೂರು ಶ್ರೀ ರಾಮ ಎಯುಪಿ ಶಾಲೆಯಲ್ಲಿ ಜರಗಲಿದೆ. ಅಪರಾಹ್ನ 2ರಿಂದ ಯಕ್ಷಗಾನ ತಾಳಮದ್ದಳೆ ಆರಂಭಗೊಳ್ಳಲಿದೆ.
ನಂತರ ನಡೆಯುವ ಸಂಸ್ಮರಣಾ ಸಮಾರಂಭದಲ್ಲಿ ನಿವೃತ್ತ ಅಧ್ಯಾಪಕ ಮೀನಾರು ವಿಶ್ವನಾಥ ಆಳ್ವ ಅಧ್ಯಕ್ಷತೆ ವಹಿಸುವರು. ರಾಮಕುಂಜೇಶ್ವರ ಕಾಲೇಜಿನ ಪ್ರಾಧ್ಯಾಪಕ ಗಣರಾಜ ಕುಂಬಳೆ ಸಂಸ್ಮರಣಾ ಭಾಷಣ ಮಾಡುವರು. ಒಡನಾಟದ ನೆನಪನ್ನು ಪ್ರಾಧ್ಯಾಪಕ ಡಾ.ಶ್ರುತಕೀತರ್ಿರಾಜ ಬಿಚ್ಚಿಡುವರು.
ನಿವೃತ್ತ ಅಧ್ಯಾಪಕ ಐ.ರಘು ಮಾಸ್ತರ್, ಎಂ.ಕೆ.ಅಶೋಕ್ಕುಮಾರ್ ಹೊಳ್ಳ, ಎನ್ಪಿಎಸ್ ಮೆನೇಜಿಂಗ್ ಟ್ರಸ್ಟಿ ಮೋಕ್ಷದಾ ಕೆ., ಶ್ರೀರಾಮ ಯುವಕ ಕಲಾ ಮಂಡಳಿಯ ಜಯರಾಮ ಎಂ., ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಪಂಜತೊಟ್ಟಿ , ನ್ಯಾಯವಾದಿ ಕೆ.ಮುರಳೀಧರ ಬಳ್ಳಕ್ಕುರಾಯ, ಅಧ್ಯಾಪಕ ಸತೀಶ್ ಶೆಟ್ಟಿ ಒಡ್ಡಂಬೆಟ್ಟುಗುತ್ತು ಉಪಸ್ಥಿತರಿದ್ದು ಶುಭಹಾರೈಸುವರು.
ವಾಲಿಮೋಕ್ಷ ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಗಿರೀಶ್ ರೈ ಕಕ್ಕೆಪದವು, ಶಂಕರ ಕಾಮತ್ ಚೇವಾರು, ಚೈತನ್ಯಕೃಷ್ಣ ಪದ್ಯಾಣ ಮತ್ತು ಮುಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ ಮತ್ತಿತರರು ಪಾಲ್ಗೊಳ್ಳುವರು.




