HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕುಂಬಳೆ: ಸಹಸ್ರಾರು ವರ್ಷಗಳ ಭವ್ಯ ಇತಿಹಾಸವಿರುವ ಕೊಂಕಣಿ ಭಾಷೆ ಜನಾಂಗದ ವೈಶಿಷ್ಟ್ಯಪೂರ್ಣ ಪರಂಪರೆಯನ್ನು ನವ ಜನಾಂಗಕ್ಕೆ ಹಸ್ತಾಂತರಿಸುವ ಹೊಣೆ ತುತರ್ು ಇದೆ. ಈ ನಿಟ್ಟಿನಲ್ಲಿ ಕೊಂಕಣಿ ಅಕಾಡೆಮಿ ವೈವಿಧ್ಯಮಯ ಕಾರ್ಯಚಟುವಟಿಕೆಗಳನ್ನು ಕನರ್ಾಟಕ ಸಹಿತ ಗಡಿನಾಡು ಕಾಸರಗೋಡಿನಲ್ಲೂ ಹಮ್ಮಿಕೊಳ್ಳಲಿದೆ ಎಮದು ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಗಡಿನಾಡು ಕಾಸರಗೋಡು ಕೇಂದ್ರೀಕರಿಸಿ ಹಮ್ಮಿಕೊಳ್ಳಬಹುದಾದ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ಚಚರ್ಿಸಲು ಶನಿವಾರ ಕುಂಬಳೆ ಪೈ ಸಭಾಂಗಣದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಂಕಣಿ ಭಾಷಾ ಸಮೃದ್ದತೆಯನ್ನು ಯುವ ಸಮೂಹಕ್ಕೆ ದಾಟಿಸುವಲ್ಲಿ ಅಗತ್ಯದ ಕಾರ್ಯಯೋಜನೆ ಸಿದ್ದಪಡಿಸಬೇಕು. ಆಂಗ್ಲ ಸಹಿತ ಇತರ ಭಾಷೆಗಳ ಆಧಿಪತ್ಯ ಕೊಂಕಣಿ ಮೂಲ ಭಾಷಾ ವಿಶೇಷತೆಗಳನ್ನು ನಾಮಾವಶೇಷಗೊಳಿಸುವ ಭೀತಿ ಇದೆ ಎಮದು ಅವರು ತಿಳಿಸಿದರು. ಕೊಂಕಣಿ ವೈವಿಧ್ಯತೆಗಳು ಸಮಾಜದ ಮನೆಮನಗಳನ್ನು ಪರಂಪರೆಯ ಅರಿವಿನೊಂದಿಗೆ ತಲಪಿಸುವ ಯತ್ನಗಳು ಅಕಾಡೆಮಿಯ ಮೂಲಕ ನಡೆಯುತ್ತಿದೆ ಎಂದು ಅವರು ತಿಳಿಸಿರರು. ಉಪಸ್ಥಿತರಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿದ ಕೊಂಕಣಿ ಅಕಾಡೆಮಿಯ ರಿಜಿಸ್ಟಾರ್ ದೇವದಾಸ್ ಪೈ ಮಾತನಾಡಿ, ರಾಷ್ಟ್ರದ ಉದ್ದಗಲ ಹರಡಿರುವ ಕೊಂಕಣಿ ಭಾಷಿಕರು ವ್ಯಾವಹಾರಿಕವಾಗಿ ಸ್ಥಳೀಯ ಭಾಷೆ, ಸಂಸ್ಕೃತಿಗಳನ್ನು ನೆಚ್ಚಿಕೊಂಡಿದ್ದರೂ ಮೂಲ ಪರಂಪರೆಯನ್ನು ಮರೆಯದಂತೆ ಸಂಸ್ಕೃತಿಯನ್ನು ಬೆಳೆಸಬೇಕಿದೆ ಎಂದು ತಿಳಿಸಿದರು. ಭಾಷೆಯ ಬೆಳವಣಿಗೆಗೆ ಲಿಪಿ ಮಹತ್ವದ್ದಲ್ಲ. ಸಾಹಿತ್ಯ, ಕಲೆಗಳ ನಿರಂತರತೆ ಅಗತ್ಯವಾಗಿದ್ದು, ಅವನ್ನು ಕಟ್ಟಿಬೆಳೆಸುವವರಿಗೆ ಅಕಾಡೆಮಿ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು. ಗಡಿನಾಡು ಕಾಸರಗೋಡಿನಲ್ಲಿ ವ್ಯಾಪಿಸಿರುವ ಕೊಂಕಣಿ ಜನಾಂಗವನ್ನು ಭಾಷಾ ಚೌಕಟ್ಟಿನಡಿ ಏಕೀಕರಿಸಿ ವಿವಿಧ ಚಟುವಟಿಕೆಗಳಿಗೆ ಮುನ್ನುಗ್ಗುವುದಕ್ಕೆ ಅಕಾಡೆಮಿ ಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು. ಕುಂಬಳೆ ಗ್ರಾ.ಪಂ.ಸದಸ್ಯ ಸುಧಾಕರ ಕಾಮತ್, ವೀರವಿಠಲ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಕಾಂತ ನಾಯಕ್, ಸಾಹಿತಿ ಸುರೇಶ್ ಜನಾರ್ಧನ ನಾಯಕ್, ಪ್ರಭಾಕರ ಅನ್ನಪೂರ್ಣ, ಕುಂಬಳೆ ಸೈಂಟ್ ಮೋನಿಕಾ ದೇವಾಲಯದ ಪಾಲನಾ ಸಮಿತಿಯ ಅಶೋಕ್ ಅಲ್ಬಟರ್್ ಕ್ರಾಸ್ತಾ, ಥೋಮಸ್ ಕ್ರಾಸ್ತಾ, ವಿವೇಕಾನಂದ ಭಕ್ತ, ರಾಜು ಸ್ಟೀಪನ್, ಅನಿಲ್ ಪೈ, ಸುಧೀರ್ ಪೈ ಕುಂಬಳೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನವಂಬರ್ ತಿಂಗಳಾಂತ್ಯದಲ್ಲಿ ಜಿಲ್ಲೆಯನ್ನು ಕೇಂದ್ರೀಕರಿಸಿ ಕೊಂಕಣಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಚರ್ಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries