ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ಮಂಜೇಶ್ವರ: ಉತ್ತಮ ವೈದ್ಯಕೀಯ ಸೇವೆ ಮೂಲಕ ಆರೋಗ್ಯ ರಕ್ಷಣೆ ಸಾಧ್ಯವಾಗಬೇಕು. ಕೈಗೆಟುಕುವ ಆರೋಗ್ಯ ಸೇವೆ ಹಾಗೂ ವಿವಿಧ ವೈದ್ಯ ವಿಭಾಗಗಳ ಮೂಲಕ ರಾಜ್ಯದಲ್ಲಿ ಆರೋಗ್ಯ ಸೇವೆಯನ್ನು ವಿಸ್ತರಿಸಲಾಗಿದೆ. ಹೋಮಿಯೋಪತಿ ಮೂಲಕ ರೋಗ ನಿವಾರಣೆ ಹಾಗೂ ಆರೋಗ್ಯ ರಕ್ಷಣೆ ಬಗ್ಗೆ ಮುಂಜಾಗ್ರತಾ ಕಾಳಜಿ ಜನಸಾಮಾನ್ಯರಲ್ಲಿ ಮೂಡಬೇಕಿದೆ. ವಿವಿಧ ಆರೋಗ್ಯ ಕೇಂದ್ರಗಳು, ಚಿಕಿತ್ಸಾಲಯಗಳಲ್ಲಿ ಆರೋಗ್ಯ ತಪಾಸಣಾ ಕಾರ್ಯಗಳು ನಡೆಯಬೇಕಿದೆ. ಮಕ್ಕಳು, ಮಹಿಳೆಯರು ಸಹಿತ ವೃದ್ಧರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು. ಜಿಲ್ಲೆಯ ಒಟ್ಟು 28 ವಿವಿಧ ಚಿಕಿತ್ಸಾಲಯ, ಮೂರು ಆಸ್ಪತ್ರೆಗಳು, ರಾಷ್ಟ್ರೀಯ ಆರೋಗ್ಯ ಮಿಶನ್ ಕೇಂದ್ರಗಳ ಮೂಲಕ ಹೋಮಿಯೋಪತಿ ವೈದ್ಯ ತಪಾಸಣೆ ನಡೆಸಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಆಯುಷ್ ವಿಭಾಗ ಹಾಗೂ ಹೋಮಿಯೋಪತಿ ಇಲಾಖೆ ವತಿಯಿಂದ ಮಾದಕ ವ್ಯಸನಮುಕ್ತ ಸಮಾಜ ಹಾಗೂ ಆರೋಗ್ಯ ಕಾಳಜಿ ಬಗ್ಗೆ ಆರೋಗ್ಯ ಫಥ ಸಂಚಾರಿ ಆರೋಗ್ಯ ತಪಾಸಣಾ ಹಾಗೂ ವೈದ್ಯಕೀಯ ಮಾಹಿತಿ ಕಾರ್ಯಕ್ರಮವನ್ನು ಭಾನುವಾರ ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಕ್ಕೆ ಮಾರಕವಾಗಿರುವ ವ್ಯಸನದಿಂದ ಮುಕ್ತತೆ ಅಗತ್ಯ.ಯುವ ಸಮೂಹವನ್ನು ಮಾದಕ ವ್ಯಸನದಿಂದ ಮುಕ್ತವಾಗಿಸಬೇಕು ಎಂದು ಅವರು ಹೇಳಿದರು. ಮಾದಕ ವಸ್ತು ಮಾಫಿಯಾಗಳ ಬಗ್ಗೆ ಸಮುದಾಯ,ಸಮಾಜಗಳು ಎಚ್ಚರಿಕೆ ವಹಿಸಬೇಕಿದೆಯೆಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪಿ.ಬಿ ಅಬ್ದುಲ್ ರಝಾಕ್ , ಮಾದಕ ವ್ಯಸನ ದುಷ್ಪರಿಣಾಮದ ಬಗ್ಗೆ ಮುಂಜಾಗ್ರತೆ, ಆರೋಗ್ಯ ರಕ್ಷಣೆ ಬಗ್ಗೆ ಆರೋಗ್ಯಪಥ ಯಾತ್ರೆ ಅರ್ಥಪೂರ್ಣ ಎಂದು ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದ ಗಡಿನಾಡ ಭಾಗಕ್ಕೆ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಸಹಿತ ತುತರ್ು ಚಿಕಿತ್ಸಾ ಘಟಕಗಳ ಅವಶ್ಯಕತೆ ಇದೆ ಎಂದು ಮಂಜೇಶ್ವರ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಹೇಳಿದರು.
ಆರೋಗ್ಯ ಮಾಹಿತಿ ಹಾಗೂ ವ್ಯಸನ ಮುಕ್ತತೆ ಸಂದೇಶವನ್ನು ಹೊತ್ತಿರುವ ವಾಹನಕ್ಕೆ ಕಂದಾಯ ಸಚಿವ ಇ.ಚಂದ್ರಶೇಖರನ್ ನಿಶಾನೆ ತೋರಿ ಚಾಲನೆ ನೀಡಿದರು. ಆರೋಗ್ಯ ಪಥ ಸಂದೇಶಯಾತ್ರೆಯು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದ್ದು, ಮಂಗಳವಾರ ತ್ರಿಕರಿಪುರದಲ್ಲಿ ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಅಬ್ದುಲ್ಅಜೀಜ್ ಹಾಜಿ, ಮುಹಮ್ಮದ್ ಮುಸ್ತಫಾ, ಸುಲಜಾ.ಪಿ, ಜಿ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಸಹಿತ ಆಯುಷ್ ಕೇಂದ್ರದ ಅಧಿಕಾರಿಗಳು, ಹೋಮಿಯೋಪತಿ ವೈದ್ಯರು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಉಪಸ್ಥಿತರಿದ್ದರು.





