HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಭಾಷೆಯ ಸೃಜನಾತ್ಮಕತೆ ಬೆಳವಣಿಗೆಗೆ ಪೂರಕ-ಎಸ್ ಜಿ ಸಿದ್ದರಾಮಯ್ಯ. ಮಂಜೇಶ್ವರ: ಕನರ್ಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕನರ್ಾಟಕದೊಳಗಿನ ಕನ್ನಡಿಗರ ಜೊತೆಗೆ ಹೊರನಾಡಿನ, ಗಡಿನಾಡಿನ ಕನ್ನಡಿಗರ ಸಮಗ್ರ ಶ್ರೇಯೋಭಿವೃದ್ದಿಗೆ ಕಳಕಳಿಯ ಕಾರ್ಯಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಹೊರರಾಜ್ಯದ ಕನ್ನಡ ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಳೆದ 6 ವರ್ಷಗಳಿಂದ ಗುರುತಿಸಿ, ಗೌರವಿಸುತ್ತಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರಿನ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕೇರಳ ಹಾಗು ಗೋವಾ ರಾಜ್ಯಗಳ ವಿದ್ಯಾಥರ್ಿಗಳಿಗೆ ಭಾನುವಾರ ಮೀಯಪದವು ಶ್ರೀವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾಥರ್ಿಗಳು ಕನ್ನಡ ಭಾಷೆಯನ್ನು ಹೆಚ್ಚು ಕಲಿಯುವಂತಾಗಬೇಕು. ಓದಿನಲ್ಲಿ ಸ್ವಧರ್ಾತ್ಮಕ ಮನೋಭಾವ ಮೂಡುವಂತಾದಾಗ ಓದು ಆಪ್ಯಾಯಮಾನವಾಗುತ್ತದೆ, ಆಸಕ್ತಿ ಮೂಡಿಸುತ್ತದೆ ಎಂದು ಅವರು ತಿಳಿಸಿದರು. ವಿಶಾಲ ಹಿನ್ನೆಲೆ ಹೊಂದಿರುವ ಕನ್ನಡ ಭಾಷೆ, ಸಂಸ್ಕೃತಿಯ ಸೃಜನಾತ್ಮಕತೆ ಬೆಳೆದಂತೆ ಭಾಷೆಯ ಬೆಳವಣಿಗೆಗೆ ಪುಷ್ಠಿಯೊದಗಿಸಿದಂತಾಗುತ್ತದೆ. ಗಡಿನಾಡು ಕಾಸರಗೋಡಿನ ಸವಾಲುಗಳ ನಡುವಿನ ಕನ್ನಡ ಭಾಷಾ ಪ್ರೇಮ ಅನನ್ಯವಾದುದು ಎಂದು ಅವರು ತಿಳಿಸಿದರು. ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಸಾಹಿತಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಸರಕಾರದ ನೆರವು ಪಡೆಯದೆ ಕಾಸರಗೋಡಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಕನ್ನಡ ಸೇವೆ ಹೆಚ್ಚು ಮಹತ್ವಪೂರ್ಣವಾದುದು. ಈ ಕಾರಣದಿಂದ ಕನ್ನಡದ್ದೇ ಗಟ್ಟಿ ಉಸಿರಿರುವ ಕಾಸರಗೋಡು ಬೆಂಗಳೂರಿಗಿಂತ ಹೆಚ್ಚು ಕನರ್ಾಟಕವಾಗಿ ಇಂದು ಮಹತ್ವಪಡೆದಿದೆ ಎಂದು ಅವರು ತಿಳಿಸಿದರು. ಕನ್ನಡ ಭಾಷೆ, ಸಂಸ್ಕೃತಿಗೆ ಇಲ್ಲಿ ಆಗಾಗ ಎದುರಾಗುವ ಸವಾಲುಗಳನ್ನು ಏಕಕಂಠದಿಂದ ಹೋರಾಟದ ಮೂಲಕ ಎದುರಿಸಿ ಕನ್ನಡದ ಅಸ್ಮಿತೆಯನ್ನು ಉಳಿಸಲು ಇತರೆಡೆಗಳಿಗೆ ಕಾಸರಗೋಡು ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಅವರು ಈ ಸಂದರ್ಭ ಶ್ಲಾಘಿಸಿದರು. ಕಾಸರಗೋಡಿನ ಯಕ್ಷಗಾನದ ಮಹಾನ್ ಕೊಡುಗೆ ಶುದ್ದ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ನೀಡುತ್ತಿರುವ ಕೊಡುಗೆ ಎಂದಿಗೂ ಕನ್ನಡ ಭಾಷೆ ಸಂಸ್ಕೃತಿಯ ಬೆಳ್ಗೊಡೆಯಾಗಿದೆ ಎಂದು ಅವರು ತಿಳಿಸಿದರು. ಆಧುನಿಕ ಯಾವ ಸವಾಲುಗಳಿದ್ದರೂ ಅದರೆಡೆಯಲ್ಲಿ ಕನ್ನಡವನ್ನು ಇನ್ನಷ್ಟು ಪ್ರಭಲಗೊಳಿಸುವ ಕಾರ್ಯಚಟುವಟಿಕೆಗಳು ನಿರಂತರ ನಡೆಯುತ್ತಿರಲಿ ಎಂದು ಅವರು ಹಾರೈಸಿದರು. ಗಡಿನಾಡು ಕಾಸರಗೋಡಿನ 75 ಹಾಗು ಗೋವಾದ 6 ಹೀಗೆ ಒಟ್ಟು 81 ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕೊಡಮಾಡುವ ನಗದು ಪುರಸ್ಕಾರ ಸಹಿತ ಅಭಿನಂದನಾ ಪತ್ರಗಳನ್ನು ಉದುಮ ಶಾಸಕ ಕುಂಞಿರಾಮನ್ ಪ್ರಧಾನಗೈದರು. ಜಿಲ್ಲಾಧಿಕಾರಿ ಕೆ.ಜೀವನ್ ಬಾಬು, ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಮಂಜೇಶ್ವರ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮೀಂಜ ಗ್ರಾ.ಪಂ. ಅಧ್ಯಕ್ಷೆ ಶಂಶಾದ್ ಶುಕೂರ್, ಜಿಲ್ಲಾ ಉಪಶಿಕ್ಷಣಾಧಿಕಾರಿ ನಂದಿಕೇಶನ್, ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಡಿ.ಸದಾಶಿವ ರಾವ್, ಕೇರಳ ಸರಕಾರದ ಪಾತರ್ಿಸುಬ್ಬ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಕನರ್ಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಕುಂಬಳೆ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರತ್ನಾಕರ ಶೆಟ್ಟಿ, ಸಿ.ಎಫ್ ನಾಯ್ಕ, ಮೀಯಪದವು ವಿದ್ಯಾವರ್ಧಕ ಶಾಲಾ ಸಂಚಾಲಕ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಪ್ರೊ.ಎ.ಶ್ರೀನಾಥ್, ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದಶರ್ಿ ಡಾ.ಕೆ.ಮುರಳೀಧರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಟಿ.ಡಿ.ಸದಾಶಿವ ರಾವ್ ವಂದಿಸಿದರು. ಗೋ.ನಾ. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲು ವಿವಿಧ ತಂಡಗಳು ಪ್ರಸ್ತುತಪಡಿಸಿದ ಗೀತಗಾಯನ,ನೃತ್ಯ ಕಾರ್ಯಕ್ರಮ ಜನಮನ ರಂಜಿಸಿತು. ', n

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries