ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ಪತ್ರಕರ್ತರು ಒಗ್ಗಟ್ಟಾಗಬೇಕು-ಹಕ್ಕುಗಳಿಗೆ ಹೋರಾಡಬೇಕು=ಇ.ಚಂದ್ರಶೇಖರನ್
ಕುಂಬಳೆ: ಆರೋಗ್ಯಪೂರ್ಣ ಸಮಾಜ ಸಂರಚನೆಯಲ್ಲಿ ಪ್ರಧಾನ ಪಾತ್ರವಹಿಸುವ ಮಾಧ್ಯಮಗಳು ಎದುರಿಸುತ್ತಿರುವ ಸವಾಲುಗಳು ವಧರ್ಿಸುತ್ತಿರುವುದು ಕಳವಳಕಾರಿ. ನವೀನ ತಂತ್ರಜ್ಞಾನಗಳ ಭರಾಟೆಯ ಮಧ್ಯೆ ಪತ್ರಿಕೆ ಸಾಮಾಜಿಕ ಭಧ್ರತೆ, ಸರಕಾರ ಮತ್ತು ನಾಗರಿಕರ ನಡುವೆ ಕೊಂಡಿಯಾಗಿ ನಿರ್ವಹಿಸುವ ಧನಾತ್ಮಕ ಚಿಂತನೆಯ ಕೊಡುಗೆಗಳು ಇನ್ನೂ ಜೀವಂತವಾಗಿರುವುದು ಹೆಮ್ಮೆಯಾಗಿದ್ದು, ಪತ್ರಕರ್ತರ ಸವಾಲುಗಳಿಗೆ ಧ್ವನಿಯಾಗಿ ಸಂಘಟನೆಯ ಮೂಲಕ ಏಕೀಕರಣಗೊಳ್ಳುವುದು ಮಹತ್ವದ ಬೆಳವಣಿಗೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸ್ಥಳೀಯ ಪತ್ರಕರ್ತರ ಸಂಘಟನೆ ಪ್ರೆಸ್ ಪೋರಂ ನ್ನು ಭಾನುವಾರ ಮುಳಿಯಡ್ಕ ಸಂಕೀರ್ಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಅಸ್ಥಿರತೆ, ಸರಕಾರಗಳ ದುರಾಡಳಿತ, ನಾಗರಿಕ ಸಮಾಜದ ಮಧ್ಯೆ ಕಂಗೆಟ್ಟಿರುವ ಜನಸಾಮಾನ್ಯರ ಸಂಕಷ್ಟಗಳನ್ನು ಇತರೆಡೆಗಳಿಗೆ ಪ್ರಚುರಪಡಿಸಿ, ನ್ಯಾಯದೊರಕಿಸುವಲ್ಲಿ ಪ್ರಧಾನ ಪಾತ್ರವಹಿಸುವ ಪತ್ರಕರ್ತರ ಶ್ರಮ ಶ್ಲಾಘನೀಯ. ಆದರೆ ಸ್ವತಃ ಬೆಂಕಿಯುಂಡೆಗಳ ನಡುವೆ ಪರಿತಪಿಸುತ್ತಿರುವ ಪತ್ರಕರ್ತರ ಕಣ್ಣೀರಿಗೆ ಸ್ಪಂದಿಸುವ ಹೊಣೆಯನ್ನು ಯಾರೂ ವಹಿಸದಿರುವುದು ಈ ಕಾಲಘಟ್ಟದ ದುರಂತವಾಗಿದ್ದು, ಈ ನಿಟ್ಟಿನಲ್ಲಿ ಪತ್ರಕರ್ತರು ಒಗ್ಗಟ್ಟಾಗಿ ಹಕ್ಕುಗಳಿಗಾಗಿ ಧ್ವನಿಯೆತ್ತುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಸದಾಕಾಲ ತನ್ನ ಸುತ್ತುಮುತ್ತಲಿನ ವಿದ್ಯಮಾನಗಳಿಗೆ ಕಣ್ಣಾಗುವ ಪತ್ರಕರ್ತ, ತನ್ನೊಳಗಿನ ನೋವನ್ನು ತೋಡಿಕೊಳ್ಳುವ, ಪರಿಹಾರ ಕಾಣುವ ನಿಟ್ಟನಲ್ಲಿ ಪತ್ರಕರ್ತರ ಸಂಘಟನೆ ಕಾರ್ಯನಿರ್ವಹಿಸಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳೆ ಪ್ರೆಸ್ ಪೋರಂ ಅಧ್ಯಕ್ಷ ಕೆ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಅಪಘಾತದಲ್ಲಿ ದುರ್ಮರಣಕ್ಕೊಳಗಾದ ಪತ್ರಕರ್ತ ಮುತ್ತಾಲಿಬ್ ನ ನಿರ್ಗತಿಕ ಕುಟುಂಬಕ್ಕೆ ಈ ಸಂದರ್ಭ ಪ್ರೆಸ್ ಪೋರಂ ವತಿಯಿಂದ ನೀಡಲಾಗುವ ಉಚಿತ ನಿವೇಶನದ ದಾಖಲೆ ಪತ್ರಗಳನ್ನು ದಿ.ಮುತ್ತಾಲಿಬ್ ನ ಸುಪುತ್ರನಿಗೆ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಹಸ್ತಾಂತರಿಸಿ ಶುಭಹಾರೈಸಿದರು.
ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಕುಂಬಳೆ ಗ್ರಾ.ಪಂ. ಅಧ್ಯಕ್ಷ ಕೆ.ಎಲ್ ಪುಂಡರೀಕಾಕ್ಷ, ಜಿಲ್ಲಾ ಹಿರಿಯ ಪತ್ರಕರ್ತರ ಸಂಘದ ಕಾರ್ಯದಶರ್ಿ ಎಸ್.ಸುರೇಂದ್ರನ್ ಕಾರವಲ್, ಕೇರಳ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದಶರ್ಿ ಸಿ.ಕೆ.ನಾಝರ್, ಕೇರಳ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಟಿ.ಪಿ.ರಾಘವನ್ ವೆಳ್ಳೆರಿಕುಂಡು, ಮಂಜೇಶ್ವರ ಪ್ರೆಸ್ಕ್ಲಬ್ ಕಾರ್ಯದಶರ್ಿ ಅಬ್ದುಲ್ ರಹಮಾನ್ ಉದ್ಯಾವರ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಪಿ.ರಘುದೇವ ಮಾಸ್ತರ್, ಜಯರಾಂ, ಎಂ.ಅಬ್ಬಾಸ್, ಎಂ.ಡಿ.ಯೂಸುಫ್, ಬಶೀರ್, ಸಿ.ಎ.ಸುಬೈರ್, ಶಂಕರ ಆಳ್ವ, ರಮೇಶ್ ಭಟ್ ಕುಂಬಳೆ, ಕೆ.ಸಾಮಿಕುಟ್ಟಿ, ಅಶ್ರಫ್ ಕೊಡ್ಯಮೆ,ಉದ್ಯಮಿಗಳಾದ ಸ್ವಪ್ನ ಕೂಡೆಲ್ ಲತೀಫ್, ಕೆ.ಎಸ್ ಇಕ್ಬಾಲ್, ತಮಾಮ್ ಅಬು,ಎಂ.ಬಿ.ಯೂಸುಫ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕೇರಳ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಕಾರ್ಯದಶರ್ಿ ಅಬ್ದುಲ್ಲ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕುಂಬಳೆ ಪ್ರೆಸ್ ಪೋರಂ ಖಜಾಂಜಿ ಅಬ್ದುಲ್ ಲತೀಫ್ ಉಪ್ಪಳ ವಂದಿಸಿದರು.





