ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 22, 2017
ಸಾಹಿತ್ಯ ಕ್ಷೇತ್ರ ಅವನತಿಯತ್ತ ಸಾಗುವ ಮಧ್ಯೆ ಮನೆಯನ್ನೇ ಸಾಹಿತ್ಯ ಕೂಟಕ್ಕೆ ಮುಕ್ತವಾಗಿಸಿದ ಸೋಮಶೇಖರ್ರವರ ಸೇವೆ ಶ್ಲಾಘನೀಯ: ಬೇ.ಸಿ.ಗೋಪಾಲಕೃಷ್ಣ
ಮಂಜೇಶ್ವರ: ಪುಸ್ತಕಗಳ ಶೇಖರಣೆ ಅಥವಾ ಸಾಹಿತಿ, ಲೇಖಕರ ಬಗ್ಗೆ ಆಸಕ್ತಿ ಇಂದಿನ ದಿನಗಳಲ್ಲಿ ಅವನತಿಯತಿಯತ್ತ ಸಾಗುತ್ತಿದೆ. ಈ ಮಧ್ಯೆ ತೂಮಿನಾಡು ನಿವಾಸಿ ನಿವೃತ ತಹಸೀಲ್ದಾರ್ ಸೋಮಶೇಖರ್ ರವರು ಮನೆಯನ್ನೇ ಪುಸ್ತಕ ಭಂಡಾರವನ್ನಾಗಿಸಿ ಸಾಹಿತ್ಯಕ್ಕೋಸ್ಕರ ಮನೆಯನ್ನೇ ಮುಕ್ತವಾಗಿರಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ದೊಡ್ದ ಮನಸ್ಸು ಅವರಲ್ಲಿರುವುದು ಊರಿಗೇ ು ಕೀತರ್ಿ ಎಂದು ಸಾಹಿತಿ ಹಾಗೂ ನಿವೃತ ಪ್ರಾಂಶುಪಾಲ ಡಾ. ಬೇ. ಸಿ ಗೋಪಾಲಕೃಷ್ಣ ಭಟ್ ಹೇಳಿದರು.
ಅವರು ಸಾಹಿತ್ಯ ಕೂಟ ಕುಂಜತ್ತೂರು ಇದರ ಆಶ್ರಯದಲ್ಲಿ ತೂಮಿನಾಡಿನಲ್ಲಿ ಭಾನುವಾರ ಬೆಳಿಗ್ಗೆ ``ಸಮಂಜಯಸುಪರ್ಣ'' ದಲ್ಲಿ ಹಮ್ಮಿಕೊಳ್ಳಲಾದ ಆಪ್ತ ಸಾಂಸ್ಕೃತಿಕ ಕೂಟ ಎಂಬ ಕಾರ್ಯಕ್ರಮವನ್ನು ದೀಪ ಬೇಳಗಿಸಿ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು.
ಪುಸ್ತಕ ಓದುವುದನ್ನು ಅಭ್ಯಾಸ ಮಾಡಿ ಕೊಂಡವರು ಇಂದಿಗೂ ಅದೇ ಹವ್ಯಾಸದಲ್ಲೇ ಇದ್ದಾರೆ. ಆದರೆ ಇಂದಿನ ಯುವ ಮನಸ್ಸುಗಳ ವಾಟ್ಸಪ್ ಯುಗದಲ್ಲಿ ಇದೆಲ್ಲವೂ ಮಾಯವಾಗುತ್ತಿದೆ. ಆದರೂ ನಾವು ಓದುವುದನ್ನು ಹಾಗೂ ಪುಸ್ತಕಗಳನ್ನು ಶೇಖರಿಸಿ ಇಟ್ಟುಕೊಳ್ಳುವುದನ್ನು ರೂಢಿಯಾಗಿಸಬೇಕು ಎಂದು ಅವರು ತಿಳಿಸಿದರು.ಓದು ಅಂತಃಕರಣದ ಅಂಧಕಾರವನ್ನು ತೊಲಗಿಸಿ ಬೆಳಕಿನ ಜ್ಞಾನದೀಪ್ತಿಯನ್ನು ನೀಡುತ್ತದೆ. ಆಧುನಿಕ ಮಾಧ್ಯಮಗಳಿಗಿಂತ ಹೆಚ್ಚಿನ ವೇಗ ಮತ್ತು ಅರಿವನ್ನು ಓದು ಒದಗಿಸುವ ಸತ್ಯವನ್ನು ಯುವ ಸಮಾಜಕ್ಕೆ ತಿಳಿಸಬೇಕು ಎಂದು ಅವರು ತಿಳಿಸಿರು.
ಸಾಹಿತ್ಯ ಕೂಟದ ಅಧ್ಯಕ್ಷ ಬಿ. ನಾರಾಯಣ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕರಿಯ ಕುಡಿಯ ಉಪಸ್ಥಿತರಿದ್ದು ಮಾತನಾಡಿದರು. ನಿವೃತ ಅಧ್ಯಾಪಕ ಕೃಷ್ಣಪ್ಪ ಪೂಜರಿ, ಈಶ್ವರ ಮಾಸ್ಟರ್ ಸಹಿತ ಹಲವರು ಉಪಸ್ಥಿತರಿರಿದ್ದರು. ಬಳಿಕ ಸಾಹಿತ್ಯ ಪ್ರೇಮಿಗಳು ಸಿದ್ದಪಡಿಸಿದ ಭಕ್ಷ್ಯಗಳ ಭೋಜನ ವಿರಾಮದ ಬಳಿಕ ಕ್ವಿಜ್, ಅಂತ್ಯಾಕ್ಷರಿ, ಸಂಗೀತ ಕುಚರ್ಿ, ಭಾವಗೀತೆ, ಜಾನಪದ ಗೀತೆ ಸಹಿತ ಹಲವು ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡರು.





