ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಐಐಎಸ್ಸಿಗೆ ಸ್ಥಾನ
ಬೆಂಗಳೂರು: ಕೇಂದ್ರ ಸಕರ್ಾರ ರೂಪಿಸಿರುವ ಹೊಸ ಯೋಜನೆಯ ಅಡಿಯಲ್ಲಿ `ಉತ್ಕೃಷ್ಟ ಶಿಕ್ಷಣ ಸಂಸ್ಥೆ' ಎಂಬ ಸ್ಥಾನಮಾನ ನೀಡುವುದಕ್ಕಾಗಿ ಸಿದ್ಧಪಡಿಸಲಾಗಿರುವ ಸಂಭಾವ್ಯ ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ( ಐಐಎಸ್ಸಿ) ಸ್ಥಾನ ಪಡೆದಿದೆ.
ಕೇಂದ್ರ ಸಕರ್ಾರವು ದೇಶದಾದ್ಯಂತ ಒಟ್ಟು 102 ಸಂಭಾವ್ಯ ಸಂಸ್ಥೆಗಳನ್ನು ಗುರುತಿಸಿದೆ .
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರತೀ ವರ್ಷ ಅಖಿಲ ಭಾರತ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಯರ್ಾಂಕಿಂಗ್ ಆಧಾರದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ( ಯುಜಿಸಿ) `ಉತ್ಕೃಷ್ಟ ಶಿಕ್ಷಣ ಸಂಸ್ಥೆ' ಸ್ಥಾನಮಾನಕ್ಕಾಗಿ ಸಂಭಾವ್ಯ ಸಂಸ್ಥೆಗಳನ್ನು ಗುರುತಿಸಿದೆ .
ಈ ಸ್ಥಾನಮಾನಕ್ಕಾಗಿ ಯುಜಿಸಿಯು ಇತ್ತೀಚೆಗೆ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಅಜರ್ಿಗಳನ್ನೂ ಆಹ್ವಾನಿಸಿತ್ತು.
ಈಗ ಗುರುತಿಸಲಾಗಿರುವ ಶಿಕ್ಷಣ ಸಂಸ್ಥೆಗಳೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ವಾರದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಮಾಲೋಚನೆ ನಡೆಸಲಿದ್ದು , `ಉತ್ಕೃಷ್ಟ ಶಿಕ್ಷಣ ಸಂಸ್ಥೆ' ಸ್ಥಾನಮಾನಕ್ಕಾಗಿ ಅಜರ್ಿ ಸಲ್ಲಿಸಲು ಸಂಸ್ಥೆಗಳಿಗೆ ಉತ್ತೇಜನ ನೀಡಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ .
20 ಸಂಸ್ಥೆಗಳು
ದೇಶದಲ್ಲಿ 20 `ಉತ್ಕೃಷ್ಟ ಶಿಕ್ಷಣ ಸಂಸ್ಥೆ 'ಗಳನ್ನು ಸ್ಥಾಪಿಸಲು ಕೇಂದ್ರ ಸಕರ್ಾರ ಯೋಚಿಸಿದೆ . ಈ ಪೈಕಿ 10 ಸಂಸ್ಥೆಗಳು ಸಕರ್ಾರದ್ದಾದರೆ, ಇನ್ನು 10 ಖಾಸಗಿ ಸಂಸ್ಥೆಗಳು .
ಈ ಯೋಜನೆ ಅಡಿಯಲ್ಲಿ ಆಯ್ಕೆಯಾಗುವ ಸಂಸ್ಥೆಗಳನ್ನು ಡೀಮ್ಡ್ ವಿಶ್ವವಿದ್ಯಾಲಯಗಳು ಎಂದು ಕೇಂದ್ರ ಪರಿಗಣಿಸಲಿದೆ . ಶಿಕ್ಷಣದ ಗುಣಮಟ್ಟ ಮತ್ತು ಮಾನದಂಡಗಳಲ್ಲಿ `ಜಾಗತಿಕ ಮಟ್ಟದ ' ಸಂಸ್ಥೆಯಾಗಿ ಸಾಧನೆ ಮಾಡಲು ಇವುಗಳಿಗೆ ಶೈಕ್ಷಣಿಕವಾಗಿ, ಆಡಳಿತಾತ್ಮಕ ಮತ್ತು ಹಣಕಾಸಿನ ವಿಚಾರಗಳಲ್ಲಿ ಸಂಪೂರ್ಣ ಸ್ವಾಯತ್ತೆಯನ್ನೂ ನೀಡಲಿದೆ.




