ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
`ಪದ್ಮಗಿರಿ ಕಲಾ ಕುಟೀರ'ಕ್ಕೆ ಭೇಟಿ
ಕಾಸರಗೋಡು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ, ಕವಿ ಡಾ.ಸಿದ್ಧಲಿಂಗಯ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದಶರ್ಿ ಡಾ.ಮುರಲೀಧರ ಅವರು ರಂಗಚಿನ್ನಾರಿ ಕಾಸರಗೋಡು ಇದರ ಕಚೇರಿಗೆ ಭೇಟಿ ನೀಡಿದರು.
ರಂಗಚಿನ್ನಾರಿ ಸಂಸ್ಥೆಯು ಏರ್ಪಡಿಸಿದ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಕೆಗಳನ್ನು ವೀಕ್ಷಿಸಿ, ಸಂಸ್ಥೆಯ ಚಟುವಟಿಕೆಗಳಿಗೆ ತನ್ನ ಬೆಂಬಲವನ್ನು ಸೂಚಿಸಿದರು. `ಪದ್ಮಗಿರಿ ಕಲಾಕುಟೀರ'ವನ್ನು ವೀಕ್ಷಿಸಿದ ಬಳಿಕ ಸಂಸ್ಥೆಯವರು ನೀಡಿದ ದಶ ಸಂಭ್ರಮದ ಸ್ಮರಣಿಕೆಯನ್ನು ಸ್ವೀಕರಿಸಿದರು. ಗಡಿಪ್ರದೇಶ ಕಾಸರಗೋಡಿನ ಕನ್ನಡ ಮಕ್ಕಳಿಗೆ ನಾಡಗೀತೆ, ಭಾವಗೀತೆ ಕಲಿಸುವ ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಈ ಕಾರ್ಯಕ್ರಮವನ್ನು ಮುಂದುವರಿಸುವಂತೆ ಹೇಳಿದರು.
ಸಂಸ್ಥೆಯ ನಿದರ್ೇಶಕರಾದ ಕೆ.ಸತ್ಯನಾರಾಯಣ, ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ, ರಂಗಕಮರ್ಿ ಉದಯ ಕುಮಾರ್ ಮನ್ನಿಪ್ಪಾಡಿ, ಸುಹಾಸ್ ರಾವ್ ಮುಂತಾದವರು ಸ್ವಾಗತಿಸಿದರು. ರಂಗಚಿನ್ನಾರಿಯ ನಿದರ್ೇಶಕರಾದ ಕಾಸರಗೋಡು ಚಿನ್ನಾ ವಂದಿಸಿದರು.





