ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಕೇರಳದಲ್ಲಿ ಲೋಕ ಸೇವಾ ಪರೀಕ್ಷೆ ಬರೆಯಲಿದ್ದಾರೆ ಮಂಗಳಮುಖಿಯರು
ತಿರುವನಂತಪುರ: ಕೇರಳ ಲೋಕ ಸೇವಾ ಆಯೋಗದ ಪರೀಕ್ಷೆ ಬರೆಯಲು ತೃತೀಯ ಲಿಂಗಿಗಳಿಗೆ ಅವಕಾಶ ನೀಡುವಂತೆ ಕೇರಳ ಹೈಕೋಟರ್್ ನಿದರ್ೇಶನ ನೀಡಿದೆ. ಮಹಿಳಾ ವರ್ಗದಲ್ಲಿ ಪರೀಕ್ಷೆ ಬರೆಯಲು ಮಂಗಳಮುಖಿಯರಿಗೆ ಅವಕಾಶ ನೀಡುವಂತೆ ರಾಜ್ಯ ಸಕರ್ಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
ಈ ಹಿಂದೆ ಲೋಕ ಸೇವಾ ಆಯೋಗ (ಪಿಎಸ್ ಸಿ) ಪರೀಕ್ಷೆಯ ಅಜರ್ಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಕಾಲಂನಡಿ ಅವಕಾಶ ನೀಡಲಾಗುವುದು ಎಂದು ವರದಿಯಾಗಿತ್ತು. ಮತ್ತು ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರಕಾರದ ನಿಧರ್ಾರವನ್ನುಆಯೋಗ ಎದುರು ನೋಡುತ್ತಿತ್ತು.
ಇದೀಗ ಹೈಕೋಟರ್್ ಮಹಿಳಾ ವಿಭಾಗದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇರಳ ಸಕರ್ಾರಕ್ಕೆ ನಿದರ್ೇಶನ ನೀಡಿದೆ. ಇದೊಂದು ಐತಿಹಾಸಿಕ ತೀಮರ್ಾನವಾಗಿದೆ.
2014ರಲ್ಲಿ ಸುಪ್ರಿಂ ಕೋಟರ್್ ಮೀಸಲಾತಿಯನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಂಗಳಮುಖಿಯರಿಗೆ ವಿಸ್ತರಿಸುವಂತೆ ರಾಜ್ಯ ಮತ್ತು ಕೇಂದ್ರ ಸಕರ್ಾರಗಳಿಗೆ ನಿದರ್ೇಶನ ನೀಡಿತ್ತು. ಅದಾದ ಬಳಿಕ 2015ರಲ್ಲಿ ಕೇರಳಲ್ಲಿ ತೃತೀಯ ಲಿಂಗಿಗಳಿಗೆ ಪುರುಷ ಮತ್ತು ಮಹಿಳೆಯರ ಜತೆ ಮೂರನೇ ಲಿಂಗವಾಗಿ ಅಧಿಕೃತ ಮಾನ್ಯತೆ ನೀಡಲಾಗಿತ್ತು.
ಇದಲ್ಲದೆ ಮಂಗಳಮುಖಿಯರಿಗಾಗಿ ಕ್ರೀಡಾಕೂಟ, ಫ್ಯಾಷನ್ ಷೋಗಳನ್ನೂ ಹಮ್ಮಿಕೊಂಡು ಕೇರಳ ದೇಶದ ಉಳಿದೆಲ್ಲಾ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿತ್ತು. ಇದೀಗ ಆಡಳಿತ ಸೇವೆಗೆ ತೃತೀಯ ಲಿಂಗಿಗಳು ಕಾಲಿಡಲು ಅವಕಾಶ ನೀಡಿದ್ದು ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ.





