ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಉಪ್ಪಳ: ಕಲಾವಿದರ ಶ್ರೇಯೋಭಿವೃದ್ದಿಗೆ ಸದಾ ಕಟಿಬದ್ದವಾಗಿರುವ ಸವಾಕ್ ಸಂಘಟನೆ ಕರಾವಳಿಯ ಹೆಮ್ಮೆಯ ಗಂಡು ಕಲೆ ಯಕ್ಷಗಾನವನ್ನು ಕೇರಳದ ಸಾಂಸ್ಕೃತಿಕ ಕಲೆಗಳಲ್ಲಿ ಅಳವಡಿಸಿ ಅದರ ಪರಂಪರೆಗೆ ಮೌಲ್ಯ ಕಲ್ಪಿಸಲು ರಾಜ್ಯ ಸರಕಾರದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿದರ್ೇಶಿಸಲಿದೆ ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್(ಸವಾಕ್)ಜಿಲ್ಲಾ ಅಧ್ಯಕ್ಷ, ರಂಗಕಮರ್ಿ ಎಂ. ಉಮೇಶ್ ಸಾಲ್ಯಾನ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಸವಾಕ್ ನೇತೃತ್ವದಲ್ಲಿ ಮಂಗಳವಾರ ಸಂಜೆ ಉಪ್ಪಳ ಸಮೀಪದ ಕೈಕಂಬದಲ್ಲಿರುವ ಪಂಚಮಿ ಸಭಾಂಗಣದಲ್ಲಿ ನಡೆದ ಮಂಜೇಶ್ವರ ತಾಲೂಕು ಸವಾಕ್ ಘಟಕದ ಸಮಿತಿ ರೂಪೀಕರಣ ಮತ್ತು ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಸರಗೋಡಿನ ವಿಶಾಲ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅಥರ್ೈಸುವಲ್ಲಿ ರಾಜ್ಯ ಸರಕಾರಕ್ಕೆ ಅರಿವಿನ ಕೊರತೆಯಿದೆ ಎಮದು ತಿಳಿಸಿದ ಅವರು, ಈ ನಿಟ್ಟಿನಲ್ಲಿ ಜಿಲ್ಲೆಯ ಮಲೆಯಾಳ ಮಾಧ್ಯಮ ಪತ್ರಕರ್ತರಿಗೆ ಈ ಬಗೆಗಿನ ಅರಿವು ಮೂಡಿಸುವ ಭಾಗವಾಗಿ ಕನ್ನಡ ಭಾಷೆಯನ್ನು ಕಲಿಸುವ ಕಾರ್ಯಯೋಜನೆಯನ್ನು ಸವಾಕ್ ಶೀಘ್ರ ಕೈಗೊಳ್ಳಲಿದೆ ಎಂದು ತಿಳಿಸಿದರು. ಎಲ್ಲಾ ವಿಭಾಗದ ಕಲಾವಿದರು ಮತ್ತು ಸಾಂಸ್ಕೃತಿಕ ರಂಗದ ವಿವಿಧ ವಿಭಾಗಗಳಲ್ಲಿ ಅಹನರ್ಿಶಿ ದುಡಿಯುತ್ತಿರುವವರ ಸಾಲು ಸವಾಲುಗಳಿಗೆ ಧ್ವನಿಯಾಗಿ ಕಾಯರ್ಾಚರಿಸುತ್ತಿರುವ ಸವಾಕ್ ಸಂಘಟನೆಯೊಂದಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.
ಉಪಸ್ಥಿತರಿದ್ದು ಮಾತನಾಡಿದ ಪ್ರಮೋದ್ ಪಣಿಕ್ಕರ್ ಅವರು ಎಲ್ಲಾ ವಿಭಾಗಗಳ ಕಲಾವಿದರು ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವವರು ತಮ್ಮ ಹಕ್ಕುಗಳಿಗಾಗಿ ಮತ್ತು ಕಲಾ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಲಾವಿದರ ಪುನಶ್ಚೇತನಕ್ಕೆ ಕಾಯರ್ೋನ್ಮುಖವಾಗಿರುವ ಸವಾಕ್ ಸಂಘಟನೆಯೊಂದಿಗೆ ಕೈಜೋಡಿಸಿ ಸಹಕರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಡಾ.ರಾಜೇಶ್ ಆಳ್ವ ಬದಿಯಡ್ಕ, ಉಮೇಶ್ ಮಾಸ್ತರ್ ಪ್ಯೂಶನ್, ಮಂಜೇಶ್ವರ ತಾಲೂಕು ಸಂಯೋಜಕ ದಿವಾಣ ಶಿವಶಂಕರ ಭಟ್, ರಾಮ ಸಾಲ್ಯಾನ್ ಮಂಗಲ್ಪಾಡಿ, ತುಳಸೀಧರನ್, ಸುರೇಶ್ ಬೇಕೂರು, ದಿವಾಕರ್, ಶ್ರೀನಿವಾಸ ಆಳ್ವ ಕಳತ್ತೂರು ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭ ಮಂಜೇಶ್ವರ ತಾಲೂಕು ಸಮಿತಿಯನ್ನು ಪುನಃ ರಚಿಸಲಾಯಿತು. ಅಧ್ಯಕ್ಷರಾಗಿ ಪ್ರಮೋದ್ ಪಣಿಕ್ಕರ್, ಉಪಾಧ್ಯಕ್ಷರುಗಳಾಗಿ ದಯಾನಂದ ಮಾಡ, ಸತೀಶ ಪುಣಿಚಿತ್ತಾಯ, ಕಾರ್ಯದಶರ್ಿಯಾಗಿ ದೇವೀಪ್ರಸಾದ್ ಶೆಟ್ಟಿ ಬೆಜ್ಜ, ಜೊತೆ ಕಾರ್ಯದಶರ್ಿಗಳಾಗಿ ಸೋಮನಾಥ ಶೆಟ್ಟಿ ಮಂಗಲ್ಪಾಡಿ, ಜೀನ್ ಮೊಂತೇರೋ, ಶಶಿ ಕೂಳೂರು, ಕೋಶಾಧಿಕಾರಿಯಾಗಿ ರಾಜೇಶ್ ಮಂಜೇಶ್ವರ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸವರ್ಾನುಮತದಿಂದ ಆಯ್ಕೆಮಾಡಲಾಯಿತು. ಸಭೆಯಲ್ಲಿ ಸವಾಕ್ ನ ನೂತನ ಸದಸ್ಯರಿಗೆ ಜಿಲ್ಲಾ ಎಂ.ಉಮೇಶ್ ಸಾಲ್ಯಾನ್ ಸದಸ್ಯತ್ವ ವಿತರಿಸಿ ಸಂಘಟನೆಗೆ ಸ್ವಾಗತಿಸಿದರು.





