ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 26, 2017
ಆನೆಕಾಲು ಚಿಕಿತ್ಸಾ ಘಟಕ ಉದ್ಘಾಟನೆ
ಮಂಜೇಶ್ವರ: ಮಂಜೇಶ್ವರದ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಮಂಜೇಶ್ವರ ಉಪ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆನೆಕಾಲು ರೋಗದ ಚಿಕಿತ್ಸಾ ಘಟಕವನ್ನು ಆರಂಭಿಸಲಾಯಿತು.
ಆನೆಕಾಲು ರೋಗ ಚಿಕಿತ್ಸೆಯ ಫಲಾನುಭವಿ ಉಮ್ಮರಬ್ಬ ಘಟಕವನ್ನು ಉದ್ಘಾಟಿಸಿದರು.ಬಳಿಕ ಅವರು ಮಾತನಾಡಿ, ಮಾರಕ ಆನೆಕಾಲು ರೋಗ ಚಿಕಿತ್ಸಾ ಸೌಕರ್ಯವನ್ನು ಬಡ ಜನಸಾಮಾನ್ಯರಿಗೆ ಒದಗಿಸುವಲ್ಲಿ ಸರಕಾರಿ ಆಸ್ಪತ್ರೆಗಳು ವಹಿಸುತ್ತಿರುವ ಜವಾಬ್ದಾರಿಯುತ ಸೇವೆ ಸ್ತುತ್ಯರ್ಹವಾಗಿದ್ದು ಗರಿಷ್ಠ ಪ್ರಮಾಣದ ಸದ್ಬಳಕೆಯ ಮೂಲಕ ರೋಗಮುಕ್ತ ಸಮಾಜ ನಿಮರ್ಾಣದಲ್ಲಿ ಪ್ರಾಮಾಣಿಕವಾಗಿ ಸಹಕರಿಸಬೇಕೆಂದು ತಿಳಿಸಿದರು.
ವೈದ್ಯಾಧಿಕಾರಿಗಳಾದ ಡಾ.ವಿನು ಮ್ಯಾಥ್ಯು, ಡಾ.ಶೈನ ಆರ್ ಉಪಸ್ಥಿತರಿದ್ದು ಚಿಕಿತ್ಸೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಈ ಸಂದರ್ಭ 15 ರೋಗಿಗಳಿಗೆ ಚಿಕಿತ್ಸಾ ಕಿಟ್ ವಿತರಿಸಲಾಯಿತು. ಪ್ರತಿತಿಂಗಳ ನಾಲ್ಕನೇ ಶುಕ್ರವಾರ ಘಟಕದಲ್ಲಿ ಪೂರ್ಣ ಪ್ರಮಾಣದ ಆನೆಕಾಲು ಚಿಕಿತ್ಸಾ ನೆರವು ನೀಡಲಾಗುವುದೆಮದು ಸಂಬಂಧಪಟ್ಟವರು ಮಾಹಿತಿ ನೀಡಿದರು. ಆರೋಗ್ಯ ಕೇಂದ್ರದ ನೌಕರ ಸುಕುಮಾರನ್ ಸ್ವಾಗತಿಸಿ, ದಾದಿ ಶೈನಿ ವಂದಿಸಿದರು.


