HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಅಯ್ಯಪ್ಪ ಸ್ವಾಮಿ ತತ್ವ ಅಧ್ಯಯನ ಶಿಬಿರ ಮಂಜೇಶ್ವರ: ಪುಣ್ಯ ಕ್ಷೇತ್ರ ಶಬರಿಮಲೆಯನ್ನು ಸಂರಕ್ಷಿಸಿ, ಶ್ರೀಅಯ್ಯಪ್ಪ ಸ್ವಾಮಿಯ ಸೇವಾ ತತ್ಪರರಾಗಿ ಎಂಬ ಧ್ಯೇಯದೊಂದಿಗೆ 2008ರಲ್ಲಿ ಸ್ಥಾಪಿಸಲ್ಪಟ್ಟ "ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ(ಎಸ್ಎಎಸ್ಎಸ್)ನೇತೃತ್ವದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸ್ವಾಮಿ ಅಯ್ಯಪ್ಪದಾಸ್ ರವರ ನಿದರ್ೇಶನದಲ್ಲಿ ಮಂಜೇಶ್ವರ ತಾಲೂಕು ಶ್ರಿಅಯ್ಯಪ್ಪ ಸ್ವಾಮಿ ಭಕ್ತರ ಅಧ್ಯಯನ ಶಿಬಿರ ಅ.29 ರಂದು ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ಹೊಸಂಗಡಿಯ ಶ್ರೀಅಯ್ಯಪ್ಪ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.ಶಿಬಿರವನ್ನು ಸಹಾಯಕ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸುವರು. ಪ್ರಸ್ತುತ ಶಬರಿಮಲೆ ಶ್ರಿಅಯ್ಯಪ್ಪ ಸನನಿಧಿಗೆ ಯಾತ್ರೆ ಕೈಗೊಳ್ಳುವ ಭಕ್ತರಲ್ಲಿ ಆಚಾರ-ಅನುಷ್ಠಾನಗಳಲ್ಲಿ ವ್ಯಾಪಕ ಅನುಭವದ ಕೊರತೆ ಕಂಡುಬರುತ್ತಿದ್ದು, ಗುರು ಸ್ವಾಮಿಗಳ ನಿದರ್ೇಶನಗಳನ್ನು ನಿರ್ಲಕ್ಷ್ಯಿಸುವುದೂ ಕಂಡುಬಂದಿದೆ. ಇದು ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗುತ್ತಿದ್ದು, ಭಕ್ತಿಯ ನೈಜತೆ, ವ್ರತಾನುಷ್ಠಾನಗಳ ಕಠಿಣತೆ, ಪಾವಿತ್ರ್ಯತೆಗಳನ್ನು ಮರು ನೆನಪಿಸಲು, ಬೇಕಾದ ನಿದರ್ೇಶನಗಳನ್ನು ಶಿಬಿರದಲ್ಲಿ ನೀಡಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಇರವಿಲ್ ರಾಮದಾಸ ವಾಳುನ್ನವರ್, ಕಾರ್ಯದಶರ್ಿ ಎಸ್.ಸಿ.ಮುರಳೀಧರನ್, ಜೊತೆ ಕಾರ್ಯದಶರ್ಿ ಪ್ರಮೋದ್ ಕುಮಾರ್ ಕೆ.ಆರ್ ಸಹಿತ ಮಂಜೇಶ್ವರ ತಾಲೂಕು ಸಮಿತಿಯ ಪದಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries