HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಜಿಲ್ಲಾ ಒಕ್ಕೂಟದ ಸಾರಥ್ಯದಲ್ಲಿ ಭಾರತ್ ಬ್ಯಾಂಕ್ ಕಾಸರಗೋಡಿಗೆ ವಿಸ್ತರಣೆ ಮಂಜೇಶ್ವರ: ಮಹಾರಾಷ್ಟ್ರದ ಮುಂಬೈಯಲ್ಲಿ ಕಾಯರ್ಾರಂಭಿಸಿದ ಭಾರತ್ ಬ್ಯಾಂಕ್ ಮಹಾರಾಷ್ಟ್ರ, ಗೋವ, ಗುಜರಾತ್, ಕನರ್ಾಟಕದಲ್ಲಿ ತನ್ನ ಸೇವೆಯನ್ನು ನಿರ್ವಹಿಸುತ್ತಿದ್ದು, ಇದೀಗ ಕೇರಳದ ಕಾಸರಗೋಡು ಜಿಲ್ಲೆಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧತೆ ನಡೆಸಿದೆ. ಸಹಕಾರಿ ಬ್ಯಾಂಕ್ ವಲಯದಲ್ಲಿ ಭಾರತ್ ಬ್ಯಾಂಕ್ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದ್ದು ವಿವಿಧ ರಾಜ್ಯ ಹಾಗೂ ಕೇಂದ್ರ ಸರಕಾರದ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈಗ 15 ಸಾವಿರ ಕೋಟಿ ರೂ.ಗಳಷ್ಟು ವ್ಯವಹರಿಸುತ್ತಿರುವ ಬ್ಯಾಂಕ್ ಕಾಸರಗೋಡು ಜಿಲ್ಲೆಗೆ 5 ಬ್ಯಾಂಕ್ಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಹೊಸಂಗಡಿ ಹಿಲ್ಸೈಟ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಬಿಲ್ಲವ ಒಕ್ಕೂಟದ ಬ್ಯಾಂಕ್ ಸದಸ್ಯತ್ವದ ಕಾರ್ಯಕ್ರಮದಲ್ಲಿ ನಿರ್ಣಯವನ್ನು ಪ್ರಸ್ತಾಪಿಸಲಾಯಿತು. ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಬ್ಯಾಂಕ್ ಅಧ್ಯಕ್ಷ ಜಯ.ಸಿ.ಸುವರ್ಣ ಬ್ಯಾಂಕ್ ಸದಸ್ಯತ್ವವನ್ನು ಜಿಲ್ಲಾ ಒಕ್ಕೂಟದ ಅಧ್ಯಕ್ಷರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಗೆ ಬ್ಯಾಂಕ್ ವಿಸ್ತರಿಸಲು ಶ್ರಮಿಸಿರುವ ಜಿಲ್ಲಾ ಬಿಲ್ಲವ ಸಂಘಟಕ ಡಿ.ಡಿ.ಕಟ್ಟೆಮಾರ್, ಉದ್ಯಾವರ ಮಾಡ ಕ್ಷೇತ್ರದ ಅರ್ಚಕ ತಿಮ್ಮಪ್ಪ, ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷ ಕೃಷ್ಣ ಶಿವಕೃಪ ಕುಂಜತ್ತೂರು, ಭಾರತ್ ಬ್ಯಾಂಕಿನ ಬಾಲಕೃಷ್ಣ (ಕನರ್ಾಟಕ ಡಿಜಿಎಂ), ಅರುಣ್ ಕುಮಾರ್ ಹಂಪನಕಟ್ಟೆ, ಮಹಾ ಪ್ರಬಂಧಕ ಸುಧೀರ್ ಹಟ್ಟಿಯಂಗಡಿ, ,ಬಿ.ಸಿ.ರೋಡ್ ಬ್ಯಾಂಕ್ ಪ್ರಬಂಧಕ ಸತೀಶ್ ಕಕರ್ೇರ, ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆಯ ಪ್ರಧಾನ ಕಾರ್ಯದಶರ್ಿ ಹರೀಶ್ ಸುವರ್ಣ ಹೊಸಬೆಟ್ಟು,ಒಕ್ಕೂಟದ ಸಂಚಾಲಕ ಸಂಕಪ್ಪ ಸುವರ್ಣ ಬಾಡೂರು, ಚನಿಯಪ್ಪ ಪೂಜಾರಿ ಪೆರ್ಲ, ಶಶಿ ಕುಂಬಳೆ, ರಘು ಚೆರುಗೋಳಿ, ಅಶ್ವಥ್ ಪೂಜಾರಿ ಲಾಲ್ಬಾಘ್, ರವೀಂದ್ರ ಪೂಜಾರಿ ಕಡಂಬಾರು, ಬಂಟಪ್ಪ ಪೂಜಾರಿ ಕಳಿಯೂರು, ಬಡಾಜೆ ಕೃಷ್ಣ ಪೂಜಾರಿ, ರವಿ ಮುಡಿಮಾರ್, ಲವ.ಎಂ.ಕಾಸರಗೋಡು, ಮುಲ್ಕಿ ಮಹಾಮಂಡಲ ಕಾರ್ಯಕಾರಿಣಿ ಸದಸ್ಯ ಸುಕೃತಿ ಕಾಸರಗೋಡು, ಬಿ.ಪಿ.ಶೇಣಿ, ರಘು ಮೀಪುಗುರಿ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಒಕ್ಕೂಟದ ಪ್ರಧಾನ ಕಾರ್ಯದಶರ್ಿ ಕೆ.ಚಂದ್ರಹಾಸ ಪೂಜಾರಿ ಕಡಂಬಾರು ಭಂಡಾರ ಮನೆ ಸ್ವಾಗತಿಸಿ, ಕೋಶಾಧಿಕಾರಿ ಅಶೋಕ ಎಂ.ಸಿ.ಲಾಲ್ಬಾಘ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries