HEALTH TIPS

No title

ದೂರು ನಿರ್ವಹಣಾ ಅದಾಲತ್, 130 ಅಜರ್ಿದಾರರ ಸಮಸ್ಯೆಗಳಿಗೆ ಸ್ಪಂದನೆ ಮಂಜೇಶ್ವರ: ಕಾಸರಗೋಡುಜಿಲ್ಲೆಯ ಹಿಂದುಳಿದ ತಾಲೂಕು ಮಂಜೇಶ್ವರದಲ್ಲಿಜಿಲ್ಲಾಧಿಕಾರಿ ಗುರುವಾರ ನಡೆಸಿದ ದೂರು ನಿರ್ವಹಣಾಅದಾಲತ್ತಿನ ಮೂಲಕ ಅಜರ್ಿದಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಲಾಯಿತು. ಭೂ ಹಕ್ಕು, ಕುಡಿಯುವ ನೀರು, ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಾಧಿಕಾರಿಗಳ ಸಮ್ಮುಖದಲ್ಲಿ ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಸೂಕ್ತ ಪರಿಹಾರೋಪಾಯಗಳನ್ನು ಸೂಚಿಸುವ ಅದಾಲತ್ತಿನಲ್ಲಿ ಭಾಗವಹಿಸಿದರು. ಪೈವಳಿಕೆ ಬಳಿಯ ಕೃಷ್ಣ ಭಟ್ರವರ ತೋಟದ ಸಮೀಪವಿರುವ ಹೈಟೆಂಶನ್ ವಿದ್ಯುತ್ ತಂತಿಗಳ ಘರ್ಷಣೆಯಿಂದ ಪ್ರತಿಬಾರಿ ಬೆಂಕಿ ಅವಘಡ ಸಂಭವಿಸುತ್ತಿದ್ದು ಕೃಷಿ ಹಾನಿಯಾಗುತ್ತಿದೆ, ಮುಳಿ ಹುಲ್ಲಿರುವ ಗುಡ್ಡೆಯಲ್ಲಿ ಕಳೆದ ಹಲವು ವರ್ಷ ಬೇಸಿಗೆ ಸಮಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಸಮಸ್ಯೆಗೆ ವಿದ್ಯುತ್ ಇಲಾಖೆ(ಕೆಎಸ್ಇಬಿ) ಅಧಿಕಾರಿಗಳ ಮೂಲಕ ವಿದ್ಯುತ್ ಕಂಬ ಬೇರೆಡೆಗೆ ಸ್ಥಳಾಂತರಿಸಲು ನಿದರ್ೇಶನ ನೀಡಿದರು. ಪೆಮರ್ುದೆ ಸಮೀಪದ ಜಲನಿಧಿ ಟ್ಯಾಂಕ್ ಮೂಲಕ ಕುಡಿ ನೀರು ಪೂರೈಕೆಯಾಗದ ಬಗ್ಗೆ ಪೈವಳಿಕೆ ಗ್ರಾ.ಪಂ ಮಾಜಿ ಅಧ್ಯಕ್ಷ ಅಚ್ಯುತ್ ಚೇವಾರ್ ದೂರು ನೀಡಿದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ವಿವರಣೆ ನೀಡಲಾಗಿದ್ದು ತಕ್ಷಣವೆ ಪರಿಹಾರ ಮಾರ್ಗವನ್ನು ನೀಡಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಿವಿಧ ಇಲಾಖೆಗಳ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಲಾಯಿತು. ಒಟ್ಟು 130 ದೂರು ಸ್ವೀಕಾರ: ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಈ ವರ್ಷದ ಎರಡನೇ ದೂರು ಪರಿಹಾರ ಅದಾಲತ್ತು ಮಂಜೇಶ್ವರದಲ್ಲಿ ನಡೆಯಿತು. ಈ ಹಿಂದೆ ಕಾಞಂಗಾಡು ತಾಲೂಕಿನಲ್ಲಿ ಪ್ರಥಮ ಅದಾಲತ್ತು ನಡೆದಿತ್ತು. ಮಂಜೇಶ್ವರದ ಮೆಸರ್ಿ ಸಭಾಂಗಣದಲ್ಲಿ ಗುರುವಾರ ನಡೆದ ಅದಾಲತ್ತಿನಲ್ಲಿ ಕೃಷಿ ಸಂಬಂಧಿಸಿದ 7 ಅಜರ್ಿ, ಆಧಾರ್ಕಾಡರ್್ ಸಂಬಂಧಿಸಿದ 4, ಚುನಾವಣೆ ಸಂಬಂಧಪಟ್ಟ 2, ಶೂನ್ಯ ಭೂ ಹಕ್ಕು ಸಂಬಂಧಪಟ್ಟ 6, ಭೂ ಹಕ್ಕು ದಾಖಲೆ ಸಂಬಂಧಪಟ್ಟ 49 ಅಜರ್ಿ, ಸಾರ್ವಜನಿಕ ಇಲಾಖೆ ಸಂಬಂಧಪಟ್ಟ 13, ಕಂದಾಯ ಇಲಾಖೆ ಸಂಬಂಧಿಸಿದ 32 ಅಜರ್ಿಗಳನ್ನು ಆಯಾ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಅದಾಲತ್ತಿನಲ್ಲಿ ದಂಡಾಧಿಕಾರಿ ಎನ್. ದೇವಿದಾಸ್, ಉಪ ಜಿಲ್ಲಾಧಿಕಾರಿ ಅಬ್ದುಲ್ ಸಮದ್, ಕೆ.ರವಿಕುಮಾರ್, ಶಶಿಧರ ಶೆಟ್ಟಿ, ಮಂಜೇಶ್ವರ ತಹಶೀಲ್ದಾರ್ ಅನಿಲ್ ಪಿಲಿಫ್, ಮುಸ್ತಫಾ ಕಮಾಲ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries