ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ರಾಜ್ಯಮಟ್ಟದ ಸಿಬಿಎಸ್ಸಿ ಶಾಲಾ ಕಲೋತ್ಸವ
ಜಿಲ್ಲೆಯಿಂದ ಚಿನ್ಮಯ ವಿದ್ಯಾಲಯ ಅತ್ಯುತ್ತಮ ಸಾಧನೆ
ಬದಿಯಡ್ಕ: ಸಿಬಿಎಸ್ಸಿ ಸಹೋದಯ ರಾಜ್ಯಮಟ್ಟದ ಶಾಲಾ ಕಲೋತ್ಸವವು ನವೆಂಬರ್ 23,24,25 ರಂದು ಐಈಎಸ್ ಪಬ್ಲಿಕ್ ಸ್ಕೂಲ್, ತ್ರಿಶೂರ್ನಲ್ಲಿ ನಡೆಯಿತು. ಒಂದುಸಾವಿರಕ್ಕಿಂತಲೂ ಹೆಚ್ಚಿನ ಶಾಲೆಗಳ ಏಳುಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾಥರ್ಿಗಳು ಭಾಗವಹಿಸಿದ ರಾಜ್ಯ ಕಲೋತ್ಸವವು 26 ವೇದಿಕೆಗಳಲ್ಲಿ ನಡೆಯಿತು. ರಾಜ್ಯಮಟ್ಟದ ಸ್ಪಧರ್ೆಯನ್ನು ಕೇರಳ ಕೃಷಿ ಸಚೀವ ವಿ.ಎಸ್. ಸುನಿಲ್ ಕುಮಾರ್ ಉದ್ಘಾಟಿಸಿದರು. ಪ್ರಮುಖ ಚಲನಚಿತ್ರ ನಟರು, ಹಿನ್ನೆಲೆ ಗಾಯಕರು, ಸಾಹಿತಿಗಳು ಮತ್ತು ಪ್ರಮುಖ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಗೀತ, ಚಿತ್ರಕಲೆ, ನೃತ್ಯ ಮುಂತಾದ ವಿಭಾಗಗಳಲ್ಲಿ ಕಾಸರಗೋಡು ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ವಿದ್ಯಾಥರ್ಿಗಳು ಭಾಗವಹಿಸಿದರು.
ಕಾಸರಗೋಡು ಸಹೋದಯವನ್ನು ಪ್ರತಿನಿಧಿಸಿ ಚಿನ್ಮಯ ವಿದ್ಯಾಲಯ ಬದಿಯಡ್ಕದಿಂದ 13 ವಿದ್ಯಾಥರ್ಿಗಳು ಭಾಗವಹಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾಥರ್ಿಗಳು ವಿವಿಧ ವಿಭಾಗಗಳಲ್ಲಿ ಗ್ರೇಡನ್ನು ಪಡೆದಿರುತ್ತಾರೆ. ಚಿನ್ಮಯ ವಿದ್ಯಾಲಯವು 50 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಿಂದ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತದೆ.
ಸಮನ್ವಿತ ವಿ,ಇಂಗ್ಲೀಷ್ ಭಾಷಣದಲ್ಲಿ ಎ ಗ್ರೇಡ್ ಮತ್ತು ಹಿಂದಿ ಕಂಠಪಾಠ ಬಿ ಗ್ರೇಡ್, ಸ್ಮಿತ ಕೆ ಭರತನಾಟ್ಯ ಎ ಗ್ರೇಡ್, ನಮ್ರತ ಜನಪದ ನೃತ್ಯ ಎ ಗ್ರೇಡ್, ಅನಘ ಪಿ ಎಸ್ ಮೋಹಿನಿಯಾಟಮ್ ಎ ಗ್ರೇಡ್, ಅನಂತರಾಮ ಎಸ್ ಹಿಂದಿ ಭಾಷಣ ಎ ಗ್ರೇಡ್, ಶುಭದ ಭರತನಾಟ್ಯ ಬಿ ಗ್ರೇಡ್, ಚಿನ್ಮಯಿ ಹಿಂದಿ ಕಂಠಪಾಠ ಬಿ ಗ್ರೇಡ್, ಅನೀಶ್ ಕೆ ಜನಪದ ನೃತ್ಯ ಬಿ ಮತ್ತು ಭರತನಾಟ್ಯ ಸಿ ಗ್ರೇಡ್, ಸಂದೇಶ್ ಹಾಡುಗಾರಿಕೆ ಬಿ ಗ್ರೇಡ್, ವರಧ್ವಜ್ ಕೆ ಭಾಷಣ ಬಿ ಗ್ರೇಡ್ ಮತ್ತು ಇಂಗ್ಲೀಷ್ ಕಂಠಪಾಠ ಬಿ ಗ್ರೇಡ್ ಪಡೆದಿರುತ್ತಾರೆ. ವಿದ್ಯಾಥರ್ಿಗಳಾದ ಅನಘ ಪಳ್ಳತ್ತಡ್ಕ, ಶುಭದ ಪತ್ತಡ್ಕ, ಅನೀಶ್ ಪಿಲಿಂಗಲ್ಲು ಇವರು ವಿದ್ವಾನ್ ನಾಟ್ಯಗುರು ಬಾಲಕೃಷ್ಣ ಮಂಜೆಶ್ವರ ಅವರ ಶಿಷ್ಯಂದರಾಗಿರುತ್ತಾರೆ. ವಿದ್ಯಾಥರ್ಿನಿ ಸ್ಮಿತ ಬದಿಯಡ್ಕ ವಿದುಶಿ ಅನುಪಮ ಉಡುಪುಮೂಲೆ ಇವರ ಶಿಷ್ಯೆ.
ವಿದ್ಯಾಥರ್ಿಗಳಿಗೆ ಕೇರಳರಾಜ್ಯ ಚಿನ್ಮಯ ಮಿಷನ್ ಅಧ್ಯಕ್ಷ ಹಾಗೂ ಚಿನ್ಮಯ ವಿದ್ಯಾಲಯ ಬದಿಯಡ್ಕ ಅದ್ಯಕ್ಷ ಸ್ವಾಮೀ ವಿವಿಕ್ತಾನಂದ ಸರಸ್ವತೀ, ಚಿನ್ಮಯ ವಿದ್ಯಾಲಯ ಕಾರ್ಯದಶರ್ಿ ಜ್ಞಾನದೇವ ಶೆಣೈ, ಪ್ರಾಂಶುಪಾಲ ಹಾಗೂ ಅಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದರು.



