ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಸತ್ಯ, ಸಂಸ್ಕೃತಿಯ ರಕ್ಷಣೆ ಬದುಕಿನ ಮೂಲ ಲಕ್ಷ್ಯ-ವಿಶ್ವನಾಥ ಭಟ್ ಮೇಲಿನ ಪಂಜ
ಉಪ್ಪಳ: ಧಾಮರ್ಿಕ ಕೇಂದ್ರಗಳ ಪುನರುದ್ಧಾರದಿಂದ ಸಮಾಜದ ಒಳಿತು ಹಾಗೂ ಏಳಿಗೆ ಸಾಧ್ಯವಿದೆ. ಹಣ ಬಲವೊಂದರಿಂದಲೇ ಎಲ್ಲವೂ ಅಸಾಧ್ಯ, ಆದರೆ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ಮಾಡಿದರೆ ಪುಣ್ಯದ ಫಲ ಸಿಗಲಿದೆ ಎಂದು ಹಳೆಯಂಗಡಿ ಕಾಲೇಜಿನ ಪ್ರಾಂಶುಪಾಲ ಮೇಲಿನ ಪಂಜ ವಿಶ್ವನಾಥ ಭಟ್ ಹೇಳಿದರು.
ಬಾಯಾರುಪದವು ಸಮೀಪದ ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದ ಷಷ್ಠಿ ಮಹೋತ್ಸವ ಸಂದರ್ಭ ನಡೆದ ವಿನೂತನವಾಗಿ ನಿಮರ್ಾಣಗೊಂಡ ಪಾಕಶಾಲೆಯ ಉದ್ಘಾಟನೆ ನೆರವೇರಿಸಿದ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬ್ಯಾಂಕಿನಲ್ಲಿ ಅಡವಿಟ್ಟ ಹಣದ ಬಡ್ಡಿ ಮೂಲಕ ಜೀವನವನ್ನು ಸಾಗಿಸಬಹುದು. ಆದರೆ ಮಾತೃಋಣ, ಪಿತೃಋಣ ಸಹಿತ ಸಮಾಜದ ಋಣ ತೀರಿಸಲು ಹಣ ಮಾತ್ರದಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಹಿರಿಯರನ್ನು ಗೌರವಿಸುವ ಮನೋಭಾವದೊಂದಿಗೆ ಧಾಮರ್ಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸುಖ, ಸಾಂತಿ ನೆಮ್ಮದಿ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಗುಣ, ನೀತಿವಂತರಾಗಿ ಬಾಳಿ, ಸತ್ಯ ಸಂಸ್ಕೃತಿಯ ರಕ್ಷಣೆಯನ್ನು ಮಾಡಬೇಕು ಎಂದು ಧರ್ಮ ಮಾರ್ಗ ಸೂಚಿಸುತ್ತದೆ. ನೈತಿಕತೆ ಇಲ್ಲದ ಜೀವನ ಕ್ರಮಗಳಿಂದ ಸಾಂಸ್ಕೃತಿಕ ದಿವಾಳಿತನ ಬರುತ್ತದೆ ಎಂದು ಅವರು ಹೇಳಿದರು. ಪರಸ್ಪರ ಸಹೋದರ ಭಾವ, ಒಗ್ಗಟ್ಟು, ಶ್ರಮ, ನಂಬಿಕೆಗಳ ಮೂಲಕ ಧಾಮರ್ಿಕ ಪುರೋಗತಿ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಧಾಮರ್ಿಕ ಮುಖಂಡ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡುತ್ತ ಆಧುನಿಕ ಕಾಲಘಟ್ಟದಲ್ಲಿ ದೇವಸ್ಥಾನಗಳು ಯಾಕೆ ಎಂಬ ಪ್ರಶ್ನೆಗಳು ಬುದ್ಧಿ ಜೀವಿಗಳಿಗೆ ಕಾಡುತ್ತಿದ್ದು, ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಕುಬುದ್ಧಿ ಕೆಲವರಲ್ಲಿ ಮೂಡಿದೆ. ದೇವಾಲಯಗಳು ಅಲೌಕಿಕ ಶಕ್ತಿಯನ್ನು ಸಾದೃಶವಾಗಿಸುವ ಶಕ್ತಿ ಕೇಂದ್ರಗಳಾಗಿವೆ. ಭೌತಿಕವಾದುದು ಲೌಕಿಕನಿಗೆ ಹೇಗೆ ಗೋಚರಿಸುತ್ತದೆಯೋ ಹಾಗೆಯೇ ಅಭೌತಿಕವಾದ ಶಕ್ತಿಯು ಅಲೌಕಿಕನ ಅನುಭವಕ್ಕೆ ಬರುತ್ತದೆ. ದೇವಸ್ಥಾನಗಳು ಅಂತಹ ಅಭೌತಿಕ, ಆಧ್ಯಾತ್ಮ ಶಕ್ತಿಯನ್ನು ಮನುಷ್ಯನಿಗೆ ಹತ್ತಿರವಾಗಿಸುವ ತೂಗುಸೇತುವೆ ಇದ್ದಂತೆ ಎಂದು ಅವರು ಹೇಳಿದರು. ಪ್ರಕೃತಿ ಪುರುಷರ ಸಾಯುಜ್ಯ ಹಾಗೂ ಪರಿಶುದ್ಧತೆಯ ಕೇಂದ್ರ ದೇವಾಲಯಗಳು. ಜೀಣರ್ೋದ್ಧಾರದ ಸಂದರ್ಭ ನಡೆಸುವ ಸಂಕಲ್ಪ ಸಿದ್ಧಿಯ ಅನುಗ್ರಹವೇ ಶಕ್ತಿಯೇ ದೇವತಾ ಚೈತನ್ಯ ಎಂದರು.ಲೌಕಿಕ ಶಕ್ತಿಯಾದ ವಿದ್ಯುತ್ ಹರಿವು ಕಣ್ಣಿಗೆ ಹೇಗೆ ಗೋಚರಿಸುವುದಿಲ್ಲವೋ ಹಾಗೆಯೇ ಅಲೌಕಿಕ ಪರಬ್ರಹ್ಮ ಶಕ್ತಿಯು ಗೋಚರಿಸುವುದಿಲ್ಲ. ಸತತ ಶ್ರದ್ಧೆ ನಂಬಿಕೆ ಪ್ರಾರ್ಥನೆ ಮೂಲಕ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಅದನ್ನು ಕಂಡುಕೊಳ್ಳಬೇಕಿದೆ ಎಂದರು. ಇಂತಹ ಚೈತನ್ಯ ಶಕ್ತಿ ಬಗ್ಗೆಗಿನ ವರ್ಣನೆ ತಂತ್ರಶಾಸ್ತ್ರದಲ್ಲಿ, ದೇವಸ್ಥಾನ ನಿಮರ್ಾಣದ ಬಗ್ಗೆಗಿನ ವಿಚಾರಗಳು ಶಿಲ್ಪಶಾಸ್ತ್ರದಲ್ಲಿಯೂ ಪ್ರಸ್ತಾಪಿಸಲ್ಪಟ್ಟಿದೆ ಎಂದು ಹೇಳಿದರು. ವಿಶ್ವಾಸ, ನಂಬಿಕೆಗಳ ಮೇಲೆ ಜೀವನ ಅಡಗಿದೆ. ನಾವು ಮಾಡುವ ಪ್ರಾರ್ಥನೆ ಸ್ವಾರ್ಥಕ್ಕಿರದೆ ಆಂತರಿಕ ಸಂಸ್ಕಾರ ವೃದ್ಧಿ ಮೂಲಕ ಸಾಮಾಜಿಕ ಒಳಿತಿಗೆ ಮುನ್ನುಡಿಯಾಗಬೇಕಿದೆ ಎಂದು ಹೇಳಿದರು. ಬುದ್ಧಿ ಜೀವಿಗಳ ಅಸಾಧು ಪ್ರಶ್ನೆ, ಚಿಂತನೆಗಳು ಎಂದಿಗೂ ದೈವಿಕ ಶಕ್ತಿ ನಂಬಿಕೆ, ಶ್ರದ್ಧೆಯನ್ನು ನಾಶಪಡಿಸಲಾರವು ಎಂದು ಹೇಳಿದರು. ಭಗವಂತನ ಅನುಗ್ರಹ, ದೈವಿಕ ನಾಮಸ್ಮರಣೆ ಸಹಿತ ಸೇವೆಯ ಮೂಲಕ ಸಮಾಜಮುಖಿಯಾದಲ್ಲಿ ಜೀವನದಲ್ಲಿ ಪೂರ್ಣತೆ ಪ್ರಾಪ್ತಿಯಾಗಲಿದೆ ಎಂದರು. 2019 ನೇ ಇಸವಿಯಲ್ಲಿ ನವೀಕರಣಗೊಳ್ಳಲಿರುವ ಕ್ಷೇತ್ರಕ್ಕೆ ಪುನಃ ಆಗಮಿಸುವ ಇಚ್ಛೆ ವ್ಯಕ್ತಪಡಿಸಿದರು.
ಪದ್ಮಶ್ರೀ ಪುರಸ್ಕೃತ ತೂಗುಸೇತುವೆ ಸರದಾರ ಗಿರೀಶ್ ಭಾರದ್ವಾಜ್ ಅವರನ್ನು ದೇವಸ್ಥಾನ ಸಮಿತಿ ವತಿಯಿಂದ ಕುಂಟಾರು ರವೀಶ್ ತಂತ್ರಿ ಪೇಟ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಮಾಡನಾಡಿದ ಗಿರೀಶ್ ಭಾರದ್ವಾಜ್ ದೇವಸ್ಥಾನಗಳು ಅಭಿವೃದ್ಧಿ ಹೊಂದಿದಂತೆ ಆ ಊರಿನ ಜೀವನ ಮಟ್ಟ ಎಲ್ಲ ವಿಧದಲ್ಲೂ ಸುಧಾರಿಸುತ್ತದೆ. ಮೊಟ್ಟ ಮೊದಲ ಸೇತುವೆ ಕಟ್ಟುವ ಸಂದರ್ಭ ಸಿಕ್ಕಿದ ಜನರ ಪ್ರೀತಿ, ವಿಶ್ವಾಸವೇ ತನ್ನ ಜೀವನದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯವಾಯಿತು. ಎಲ್ಲವನ್ನೂ ಕರುಣಿಸಿದ ದೇವರಿಗೆ ತನ್ನ ಉಳಿಕೆಯ ಕಿಂಚಿತ್ತನ್ನು ಸೇವೆಯ ರೂಪದಲ್ಲಿ ನೀಡಿದರೆ ದೇವರು ಸಂತೃಪ್ತನಾಗಿ, ಜೀವನದಲ್ಲಿ ಸುಖ, ಶಾಂತಿಯನ್ನು ಕರುಣಿಸುತ್ತಾನೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತನಗೆ ಬರೆದ ಪತ್ರದಲ್ಲಿ ಗ್ರಾಮೀಣ ಭಾಗದ ಜನರನ್ನು ಅವಕಾಶದ ಜಗತ್ತಿಗೆ ಪರಿಚಯಿಸಿದ ನಿಮಗೆ ಹಾರೈಕೆಗಳನ್ನು ತಿಳಿಸಲಾಗಿದ್ದು ತನ್ನ ಬಹುದೊಡ್ಡ ಜವಾಬ್ದಾರಿಯನ್ನು ನೆನಪಿಸಿದಂತಿತ್ತು ಎಂದು ಹೇಳಿದರು.
ಅನನ್ಯ ಫೀಡ್ಸ್ ಮಾಲಕ ದಿವಾಣ ಗೊವಿಂದ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಕ್ಷೇತ್ರ ಸಮಿತಿ ವತಿಯಿಂದ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವಾಟೆತ್ತಿಲ ಜಾಲು ಸುಬ್ರಹ್ಮಣ್ಯೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಮಾಧವ ಭಟ್ ಉಪಸ್ಥಿತರಿದ್ದರು. ಶ್ರೀಕಾಂತ್ ವಾಟೆತ್ತಿಲ ಸ್ವಾಗತಿಸಿ, ಕುಮಾರಿ ಶ್ರೀ ರಂಜಿನಿ ಪ್ರಾರ್ಥನೆ ಹಾಡಿದರು. ನವೀಕರಣ ಸಮಿತಿ ಕಾರ್ಯದಶರ್ಿ ಸಜಂಕಿಲ ಸುಬ್ರಹ್ಮಣ್ಯ ಭಟ್ ವಂದಿಸಿದರು. ಉಮಾದೇವಿ ವಾಟೆತ್ತಿಲ ಕಾರ್ಯಕ್ರಮ ನಿರೂಪಿಸಿದರು.
ಷಷ್ಠಿ ಮಹೋತ್ಸವ ಸಂದರ್ಭ ದೇವಸ್ಥಾನದಲ್ಲಿ ಬೆಳಗ್ಗೆ ಗಣಪತಿ ಹವನ, ನವಕ ಪೂಜೆ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಕುಮಾರಿ ಶ್ರದ್ಧಾ ಭಟ್ ನಾರ್ಯಪಳ್ಳ ಅವರಿಂದ ಹರಿಕಥಾ ಪ್ರಸ್ತುತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಕುಟುಂಬಶ್ರೀ ಕಾಯಕತರ್ೆಯರು ಸಹಿತ ಭಕ್ತಾದಿಗಳು ಪಾಲ್ಗೊಂಡಿದ್ದರು.



