ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ
ಬದಿಯಡ್ಕ: ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ 34 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ ಮಹೋತ್ಸವವು ಡಿ.8 ಮತ್ತು 9 ರಂದು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಬದಿಯಡ್ಕ ಶ್ರೀ ಕಿನ್ನಿಮಾಣಿ ಪೂಮಾಣಿ ಅಯ್ಯಪ್ಪ ಭಜನಾ ಮಂದಿರದಲ್ಲಿ ಶುಕ್ರವಾರ ನಡೆಯಿತು. ಬದಿಯಡ್ಕದ ಖ್ಯಾತ ವೈದ್ಯ ಡಾ.ಶ್ರೀನಿಧಿ ಸರಳಾಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಭಾಸ್ಕರ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಪುಷ್ಪರಾಜ ಗುರುಸ್ವಾಮಿ ಹಾಗೂ ಸಮಿತಿಯ ಪದಾಧಿಕಾರಿಗಳಾದ ತಿರುಪತಿ ಕುಮಾರ್ ಭಟ್, ನಿರಂಜನ ರೈ ಪೆರಡಾಲ, ಗಿರೀಶ್ ರೈ ವಳಮಲೆ, ಪ್ರಕಾಶ್ ಕೆ, ಮಧುರಾಜ್, ಗುರುಪ್ರಸಾದ್ ರೈ, ನವೀನ್ ರೈ, ಸಿ.ಕೆ.ನಾರಾಯಣ ಮತ್ತು ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು. ಕಾರ್ಯದಶರ್ಿ ಗೋಕುಲ ಸ್ವಾಗತಿಸಿ, ಜೊತೆ ಕಾರ್ಯದಶರ್ಿ ಚರಣ್ ಎಂ. ವಂದಿಸಿದರು.


