HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮಾತುಕತೆ ಮೂಲಕ ಎಲ್ಲಾ ವಿವಾದಗಳಿಗೆ ಪರಿಹಾರ: ಮುಸ್ಲಿಮ್ ನಾಯಕರ ಭೇಟಿ ಬಳಿಕ ಶ್ರೀ ಶ್ರೀ ರವಿಶಂಕರ್ ಲಖನೌ: ಅಯೋಧ್ಯೆಯ ರಾಮ ಮಂದಿರ?ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಸಂಧಾನಕ್ಕೆ ಯತ್ನಿಸುತ್ತಿರುವ ಆಟರ್್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಶುಕ್ರವಾರ ಲಖನೌನಲ್ಲಿ ಮುಸ್ಲಿಮ್ ನಾಯಕರನ್ನು ಭೇಟಿ ಮಾಡಿ ಚಚರ್ಿಸಿದರು. ಮುಸ್ಲಿಮ್ ನಾಯಕರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಶ್ರೀ ರವಿಶಂಕರ್, ಮಾತುಕತೆ ಮೂಲಕ ಎಲ್ಲಾ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ. ಆದರೆ ನ್ಯಾಯಾಲಯ ಹೃದಯಗಳನ್ನು ಒಂದುಗೂಡಿಸುವುದಿಲ್ಲ ಎಂದರು. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ 100 ವರ್ಷ ಕಳೆದರೂ ಇನ್ನು ಅಂತಿಮ ತೀಪರ್ು ಬಂದಿಲ್ಲ. ಆದರೆ ನಾವು ನಮ್ಮ ಹೃದಯಗಳ ಮೂಲಕ ಈ ವಿವಾದವನ್ನು ಪರಿಹರಿಸಿಕೊಂಡರೆ, ಅದು ಮುಂದಿನ ಪೀಳಿಗೆಗೆ ಮಾದರಿಯಾಗುತ್ತದೆ ಎಂದು ರವಿಶಂಕರ್ ಅವರು ಹೇಳಿದ್ದಾರೆ. ಶ್ರೀ ಶ್ರೀ ರವಿಶಂಕರ್ ಅವರು ಇಂದು ಲಖನೌನಲ್ಲಿ ಭಾರತೀಯ ಫರಂಗಿ ಮಹಲ್ ಇಸ್ಲಾಮಿಕ್ ಕೇಂದ್ರದ ಮೌಲಾನ್ ಖಾಲಿದ್ ಕಶೀದ್ ಫರಂಗಿ ಮಹಿಲ್ ಮತ್ತು ಇತರೆ ಮುಸ್ಲಿಂ ನಾಯಕರೊಂದಿಗೆ ಮಾತುಕತೆ ನಡೆಸಿದರು. ಈಗಾಗಲೇ ಯೋಧ್ಯೆಯ ರಾಮಜನ್ಮಭೂಮಿಯ ಮುಖ್ಯ ಮಹಂತ ನೃತ್ಯ ಗೋಪಾಲ್ ದಾಸ್ರನ್ನು ರವಿಶಂಕರ್ ಅವರು ಭೇಟಿ ಮಾಡಿ, ಚಚರ್ಿಸಿದ್ದು, ಜನರು ಈ ಸಂಘರ್ಷದಿಂದ ಹೊರಬರಲು ಬಯಸಿದ್ದು, ಮಧ್ಯಸ್ಥಿಕೆಗೆ ಇದು ಸೂಕ್ತ ಸಮಯ ಎಂದು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries